ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03 : ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆಯನ್ನು ವಿವಿಧ ನಗರಗಳಿಗೆ ವಿಸ್ತರಣೆ ಮಾಡಲು ಮುಂದಾಗಿದೆ. ಇದಕ್ಕಾಗಿ 15 ವೋಲ್ವೊ ಬಸ್ಸುಗಳನ್ನು ಖರೀದಿ ಮಾಡಲಾಗುತ್ತದೆ.

ಬಸ್ಸಿನಲ್ಲೇ ಆಹಾರ, ಟಾಯ್ಲೆಟ್; ರಸ್ತೆಗಿಳಿದ ಐಶಾರಾಮಿ 'ಐರಾವತ'ಬಸ್ಸಿನಲ್ಲೇ ಆಹಾರ, ಟಾಯ್ಲೆಟ್; ರಸ್ತೆಗಿಳಿದ ಐಶಾರಾಮಿ 'ಐರಾವತ'

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಕೆಎಸ್ಆರ್‌ಟಿಸಿ ಫ್ಲೈ ಬಸ್ ಸಂಚಾರ ನಡೆಸುತ್ತದೆ. ಸದ್ಯ, ಮಡಿಕೇರಿ, ಕಲ್ಲಿಕೋಟೆ, ತಿರುಪತಿ, ಸೇಲಂ ಮತ್ತು ಕೊಯಮತ್ತೂರಿಗೆ ಬಸ್ ಸೇವೆ ವಿಸ್ತರಿಸಲು ನಿರ್ಧರಿಸಲಾಗಿದೆ.

KSRTC to induct 15 Volvo bus for fly bus service

ಈಗಾಗಲೇ ಕೆಎಸ್ಆರ್‌ಟಿಸಿಯ ಫ್ಲೈ ಬಸ್ ಸೇವೆಯಡಿ 7 ಬಸ್ಸುಗಳು ಸಂಚಾರ ನಡೆಸುತ್ತಿವೆ. ಈಗ ಸೇವೆ ವಿಸ್ತರಣೆ ಮಾಡಲು ಉದ್ದೇಶಿಸಿದ್ದು ಇದಕ್ಕಾಗಿ 15 ವೋಲ್ವೊ ಬಸ್ಸುಗಳನ್ನು ಖರೀದಿ ಮಾಡಲಾಗುತ್ತದೆ. ನವೆಂಬರ್ ತಿಂಗಳಿನಲ್ಲಿ ಈ ಬಸ್ಸುಗಳು ಸಂಚಾರ ಆರಂಭಿಸಲಿವೆ.

ಬೆಂಗಳೂರು-ಶ್ರೀಹರಿಕೋಟಾ ನಡುವೆ ಕೆಎಸ್ಆರ್‌ಟಿಸಿ ಐರಾವತ ಬಸ್ ಸೇವೆಬೆಂಗಳೂರು-ಶ್ರೀಹರಿಕೋಟಾ ನಡುವೆ ಕೆಎಸ್ಆರ್‌ಟಿಸಿ ಐರಾವತ ಬಸ್ ಸೇವೆ

ಐಷಾರಾಮ ಬಸ್ಸುಗಳು : ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆಯಡಿ ಐಷಾರಾಮಿ ಬಸ್ಸುಗಳನ್ನು ಓಡಿಸುತ್ತದೆ. ಈ ಬಸ್ಸುಗಳು ಉಪಹಾರ ಮತ್ತು ಶೌಚಾಲಯ ಸೌಲಭ್ಯವನ್ನು ಹೊಂದಿವೆ. ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಸಿಲುಕದೇ ಬಸ್ಸುಗಳು ನೇರವಾಗಿ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಚಾರ ನಡೆಸುತ್ತವೆ.

ಮಣಿಪಾಲ್-ಬೆಂಗಳೂರು ನಡುವೆ ಫ್ಲೈ ಬಸ್ ಸೇವೆಮಣಿಪಾಲ್-ಬೆಂಗಳೂರು ನಡುವೆ ಫ್ಲೈ ಬಸ್ ಸೇವೆ

2013ರಲ್ಲಿ ಫ್ಲೈ ಬಸ್ ಸೇವೆ ಆರಂಭಿಸಲಾಗಿದ್ದು 7 ಬಸ್ಸುಗಳು ಸಂಚಾರ ನಡೆಸುತ್ತಿವೆ. ಈಗ ಖರೀದಿ ಮಾಡುತ್ತಿರುವ ಬಸ್ಸುಗಳು 14.5 ಮೀಟರ್ ಉದ್ದ ಇರಲಿವೆ. ಒಂದು ಭಾಗದಲ್ಲಿ ಎರಡು ಆಸನಗಳು, ಮತ್ತೊಂದು ಭಾಗದಲ್ಲಿ ಒಂದು ಆಸನಗಳ ವ್ಯವಸ್ಥೆಯನ್ನು ಹೊಂದಿವೆ.

English summary
The Karnataka State Road Transport Corporation (KSRTC) to expend fly bus service to more city's. In 2017 November 15 Volvo bus will induct to KSRTC. Fly bus will connect Kempegowda International Airport (KIA), Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X