ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, ಪುಣೆಗೆ ಹೊಸ ಬಸ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 3 : ಕೆಎಸ್ಆರ್‌ಟಿಸಿ ಮಣಿಪಾಲ್‌ಗೆ ಆರಂಭಿಸಿದ್ದ ಫ್ಲೈ ಬಸ್‌ ಸೇವೆಯನ್ನು ಕುಂದಾಪುರದ ತನಕ ವಿಸ್ತರಣೆ ಮಾಡಿದೆ. ಬೆಂಗಳೂರು-ಪುಣೆ ನಡುವೆ ನೂತನ ಕರೋನಾ ಸ್ಲೀಪರ ಬಸ್ ಸೇವೆಯನ್ನು ಆರಂಭಿಸಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸೆ.11ರ ಶುಕ್ರವಾರದಿಂದ ಬೆಂಗಳೂರು-ಪುಣೆ ನಡುವೆ ಕರೋನಾ ಸ್ಲೀಪರ್‌ ಬಸ್‌ ಸೇವೆಯನ್ನು ಆರಂಭಿಸಲಿದೆ. ಬೆಂಗಳೂರಿನಿಂದ ಸಂಜೆ 6 ಗಂಟೆಗೆ ಹೊರಡುವ ಬಸ್ ಮರುದಿನ ಬೆಳಗ್ಗೆ 8 ಗಂಟೆಗೆ ಪುಣೆ ತಲುಪಲಿದೆ.[ಮಣಿಪಾಲ್-ಬೆಂಗಳೂರು ಬಸ್ ದರಪಟ್ಟಿ]

ksrtc

ಪುಣೆಯಿಂದ ಸಂಜೆ 6 ಗಂಟೆಗೆ ಹೊರಡುವ ಬಸ್ ಮರುದಿನ ಬೆಳಗ್ಗೆ 8 ಗಂಟೆಗೆ ಬೆಂಗಳೂರು ತಲುಪಲಿದೆ. ಈ ಮಾರ್ಗದ ಪ್ರಯಾಣ ದರ 1,200 ರೂ.ಗಳು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 080- 49596666 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. [ಟಿಕೆಟ್ ಬುಕ್ ಮಾಡಲು ವಿಳಾಸ]

ಫ್ಲೈ ಬಸ್ ಕುಂದಾಪುರಕ್ಕೆ : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಣಿಪಾಲ್ ನಡುವೆ ಸಂಚಾರ ನಡೆಸುತ್ತಿರುವ ಫ್ಲೈ ಬಸ್ ಸೇವೆಯನ್ನು ಸೆ.27ರಿಂದ ಕುಂದಾಪುರದ ತನಕ ವಿಸ್ತರಣೆ ಮಾಡಲಾಗುತ್ತದೆ.

ಬೆಂಗಳೂರು-ಮಣಿಪಾಲ್ ನಡುವೆ ಆ.20ರಿಂದ ಫ್ಲೈ ಬಸ್ ಸೇವೆ ಆರಂಭಿಸಲಾಗಿತ್ತು. ಇದನ್ನು ಈಗ ಕುಂದಾಪುರದ ತನಕ ವಿಸ್ತರಣೆ ಮಾಡಲಾಗುತ್ತಿದೆ. ಈ ಮಾರ್ಗದ ಪ್ರಯಾಣ ದರ 1,150 ರೂ.ಗಳು.

ಬೆಂಗಳೂರಿನಿಂದ ಹೊರಡುವ ಬಸ್ ಹಾಸನ, ಮಂಗಳೂರು, ಉಡುಪಿ, ಮಣಿಪಾಲ್ ಮೂಲಕ ಕುಂದಾಪುರಕ್ಕೆ ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಡುವ ಬಸ್ ಬೆಳಗ್ಗೆ 6.45ಕ್ಕೆ ಕುಂದಾಪುರ ತಲುಪಲಿದೆ. ಕುಂದಾಪುರದಿಂದ ರಾತ್ರಿ 7 ಗಂಟೆಗೆ ಹೊರಟು, ಬೆಳಗ್ಗೆ 4.45ಕ್ಕೆ ಬೆಂಗಳೂರಿಗೆ ತಲುಪಲಿದೆ.

English summary
Karnataka road transport corporation (KSRTC) to extend the Fly-bus service to Kundapura, Udupi district. KSRTC begins its Fly-bus service between Manipal and Kempegowda international airport from August 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X