ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್‌ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಸೂಚನೆಗಳು

|
Google Oneindia Kannada News

ಬೆಂಗಳೂರು, ಮೇ 31 : ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಕೆ. ಎಸ್. ಆರ್‌. ಟಿ. ಸಿ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕರೆ ನೀಡಲಾಗಿದೆ. ಅದೇ ರೀತಿ ಬಸ್ ನಿಲ್ದಾಣದಲ್ಲಿ ಉಗುಳಿದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

Recommended Video

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಾರ್ಗಸೂಚಿ | New Rules of Namma Metro

ಕೆ. ಎಸ್. ಆರ್‌. ಟಿ. ಸಿ ಸಾರ್ವಜನಿಕ ಸೇವಾ ಸಂಸ್ಥೆಯಾಗಿದೆ. ಸಿಬ್ಬಂದಿ ಮತ್ತು ಪ್ರಯಾಣಿಕರೇ ಸಂಸ್ಥೆಯ ಮೂಲಧಾರವಾಗಿದ್ದಾರೆ. ಸಾರ್ವಜನಿಕರ ಆರೋಗ್ಯಗ ಹಿತದೃಷ್ಟಿಯಿಂದ ಸಂಸ್ಥೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ.

ಎಚ್ಚರ: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಉಗುಳಿದರೆ 100 ರೂಪಾಯಿ ದಂಡಎಚ್ಚರ: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಉಗುಳಿದರೆ 100 ರೂಪಾಯಿ ದಂಡ

ಸಂಸ್ಥೆಯ ಬಸ್ ನಿಲ್ದಾಣಗಳು/ಬಸ್/ ಘಟಕಗಳು ಹಾಗೂ ಆವರಣಗಳಲ್ಲಿ ಧೂಮಪಾನ/ತಂಬಾಕು ಮಾರಾಟ ಮತ್ತು ಸೇವನೆಯನ್ನು ಈಗಾಗಲೇ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದರ ಜೊತೆಗೆ ತಂಬಾಕು ಸೇವಿಸದಂತೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ.

24 ಗಂಟೆ ಕೆಎಸ್ಆರ್ಟಿಸಿ ಬಸ್ ಸೇವೆಗೆ ಸಾರಿಗೆ ಸಚಿವರ ಸೂಚನೆ24 ಗಂಟೆ ಕೆಎಸ್ಆರ್ಟಿಸಿ ಬಸ್ ಸೇವೆಗೆ ಸಾರಿಗೆ ಸಚಿವರ ಸೂಚನೆ

ತಂಬಾಕು/ಧೂಮಪಾನ ನಿಷೇಧ ಸಂಬಂಧ ಕೆಲವು ಕ್ರಮಗಳನ್ನು ಸಂಸ್ಥೆಯ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ ಎಂದು ಕೆ. ಎಸ್. ಆರ್‌. ಟಿ. ಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಸಿ. ಕಳಸದ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕರ್ನಾಟಕ; ಸರ್ಕಾರಿ ಬಸ್‌ ಸಂಚಾರಕ್ಕೆ ಹೆಚ್ಚಿದ ಬೇಡಿಕೆ ಕರ್ನಾಟಕ; ಸರ್ಕಾರಿ ಬಸ್‌ ಸಂಚಾರಕ್ಕೆ ಹೆಚ್ಚಿದ ಬೇಡಿಕೆ

ತಂಬಾಕು ಪದಾರ್ಥ ಮಾರಾಟ ನಿಷೇಧ

ತಂಬಾಕು ಪದಾರ್ಥ ಮಾರಾಟ ನಿಷೇಧ

ಕೆ. ಎಸ್. ಆರ್. ಟಿ. ಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಅಂಗಡಿಗಳಲ್ಲಿ ಸಿಗರೇಟು ಮತ್ತು ಇತರ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯವಾಗಿ‌ ನಿಷೇಧಿಸಲಾಗಿದೆ.

ಧೂಮಪಾನ ಮಾಡುವಂತಿಲ್ಲ

ಧೂಮಪಾನ ಮಾಡುವಂತಿಲ್ಲ

ಬಸ್ ನಿಲ್ದಾಣ ಧೂಮಪಾನ ನಿಷೇಧಿತ ಪ್ರದೇಶ. ‌ಇಲ್ಲಿ ಧೂಮಪಾನ ಮಾಡುವುದು ಅಪರಾಧ, ಉಲ್ಲಂಘನೆಯಾದಲ್ಲಿ ರೂ.200 ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರದರ್ಶಿಸಲಾಗಿದೆ. ಉಲ್ಲಂಘಿಸದಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತಿದೆ.

ಜಾಹೀರಾತುಗಳು ನಿಷೇಧ

ಜಾಹೀರಾತುಗಳು ನಿಷೇಧ

ಕಾನೂನಿನ ಅನ್ವಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಬಸ್ಸುಗಳು/ ಬಸ್ ನಿಲ್ದಾಣಗಳು ಹಾಗೂ ಆವರಣದಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ಹಾಕುವುದನ್ನು ನಿಷೇಧಿಸಲಾಗಿದೆ.

ಸಂಗ್ರಹವಾದ ದಂಡದ ಮೊತ್ತ

ಸಂಗ್ರಹವಾದ ದಂಡದ ಮೊತ್ತ

ತಂಬಾಕು ಕಾಯಿದೆ ಉಲ್ಲಂಘನೆಯ ಮಾಡಿ ಸಂಸ್ಥೆಯ ಬಸ್, ಬಸ್ ನಿಲ್ದಾಣ/ ಘಟಕಗಳು ಇನ್ನಿತರೆ ಸಂಸ್ಥೆಯ ಆವರಣದಲ್ಲಿ ಧೂಮಪಾನ ಮಾಡಿರುವವರಿಂದ ಏಪ್ರಿಲ್ 2019 ರಿಂದ ಮಾರ್ಚ್ 2020 ರವರೆಗೆ ಒಟ್ಟು 17661 ಜನರಿಂದ ರೂ.35,23,200 ದಂಡ ಸಂಗ್ರಹ ಮಾಡಲಾಗಿದೆ.

English summary
Karnataka State Road Transport Corporation (KSRTC) taken few steps to ensure ban of tobacco in bus stand and bus depot. spitting prohibited in bus stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X