ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿಗೆ ನಷ್ಟ; 126 ಬಸ್ ಸಂಚಾರ ಸ್ಥಗಿತ

|
Google Oneindia Kannada News

ಬೆಂಗಳೂರು, ಫೆಬ್ರವರಿ 05 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈಗಾಗಲೇ ನಷ್ಟದಲ್ಲಿದೆ. ಇಂಧನ ಮತ್ತು ಬಸ್ಸುಗಳ ನಿರ್ವಹಣೆಗೆ ಸಂಸ್ಥೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರಿಗೆ ಸಚಿವರು ಸಹ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಹಲವಾರು ಸೂಚನೆಗಳನ್ನು ನೀಡಿದ್ದಾರೆ.

ನಷ್ಟವನ್ನು ತಡೆಯಲು ಮೊದಲ ಹಂತದಲ್ಲಿ ಮೈಸೂರು, ಹಾಸನ ಮತ್ತು ಬೆಂಗಳೂರು ನಡುವೆ ಸಂಚಾರ ರ ನಡೆಸುವ 126 ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಮಾರ್ಗಗಳ ಅಧ್ಯಯನ ನಡೆಯಲಿದೆ.

ಬಂದ್, ಮುಷ್ಕರ : ಕೆಎಸ್ಆರ್‌ಟಿಸಿ, ಬಿಎಂಟಿಸಿಯ ನಷ್ಟದ ಲೆಕ್ಕಬಂದ್, ಮುಷ್ಕರ : ಕೆಎಸ್ಆರ್‌ಟಿಸಿ, ಬಿಎಂಟಿಸಿಯ ನಷ್ಟದ ಲೆಕ್ಕ

ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಎಲ್ಲಾ ವಿಭಾಗದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಬಳಿಕ 126 ಬಸ್‌ಗಳ ಸಂಚಾರವನ್ನು ರದ್ದುಗೊಳಿಸಿವ ನಿರ್ಧಾರವನ್ನು ಕೈಗೊಂಡಿದ್ದಾರೆ.

ಪ್ರಯಾಣದರ ಕಡಿತಗೊಳಿಸಿದ ಕೆಎಸ್ಆರ್‌ಟಿಸಿ ಪ್ರಯಾಣದರ ಕಡಿತಗೊಳಿಸಿದ ಕೆಎಸ್ಆರ್‌ಟಿಸಿ

2017 ರಿಂದ 2019ರ ತನಕ ಬಂದ್, ಮುಷ್ಕರಗಳಿಂದಾಗಿಯೇ ಕೆಎಸ್ಆರ್‌ಟಿಸಿಗೆ 20.12 ಕೋಟಿ ರೂ. ನಷ್ಟ ಉಂಟಾಗಿತ್ತು. ಪ್ರಯಾಣಿಕರ ಕೊರತೆ ಇರುವ ಮಾರ್ಗಗಳು, ಬಸ್‌ಗಳ ನಿರ್ವಹಣೆ ಕಾರಣಗಳಿಂದಾಗಿಯೇ ಸಂಸ್ಥೆ ಕೋಟ್ಯಾಂತರ ರೂ. ನಷ್ಟವನ್ನು ಅನುಭವಿಸಿದೆ.

ಕೆಎಸ್ಆರ್‌ಟಿಸಿ ನೌಕರರಿಗೆ ಸಿಹಿಸುದ್ದಿ ನೀಡಿದ ಹೈಕೋರ್ಟ್‌ಕೆಎಸ್ಆರ್‌ಟಿಸಿ ನೌಕರರಿಗೆ ಸಿಹಿಸುದ್ದಿ ನೀಡಿದ ಹೈಕೋರ್ಟ್‌

ಸಾರಿಗೆ ಸಚಿವರ ಸೂಚನೆ ಏನು?

ಸಾರಿಗೆ ಸಚಿವರ ಸೂಚನೆ ಏನು?

ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಅವರ ಸೂಚನೆಯಂತೆ 4 ರಿಂದ 5 ಅಥವ ಬೆರಳೆಣಿಕೆಯ ಪ್ರಯಾಣಿಕರು ಸಂಚಾರ ನಡೆಸುವ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸುವ ತೀರ್ಮಾನವನ್ನು ಕೆಎಸ್ಆರ್‌ಟಿಸಿ ಕೈಗೊಂಡಿದೆ.

ಯಾವ-ಯಾವ ಮಾರ್ಗ

ಯಾವ-ಯಾವ ಮಾರ್ಗ

ನಷ್ಟವನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಂಡಿರುವ ಕೆಎಸ್ಆರ್‌ಟಿಸಿ ಮೊದಲ ಹಂತದಲ್ಲಿ ಮೈಸೂರು-ಬೆಂಗಳೂರು, ಹಾಸನ-ಬೆಂಗಳೂರು ನಡುವೆ ಸಂಚಾರ ನಡೆಸುವ 126 ಬಸ್‌ಗಳನ್ನು ರದ್ದುಪಡಿಸಿದೆ. ಈ ಬಸ್‌ಗಳು ಪ್ರಯಾಣಿಕರ ಕೊರತೆಯನ್ನು ಎದುರಿಸುತ್ತಿದ್ದವು.

4 ರಿಂದ 5 ಪ್ರಯಾಣಿಕರು

4 ರಿಂದ 5 ಪ್ರಯಾಣಿಕರು

ಕೆಲವು ಬಸ್‌ಗಳಲ್ಲಿ 4 ರಿಂದ 5 ಪ್ರಯಾಣಿಕರಿದ್ದರೆ ಸಾಕು ಎಂದು ಚಾಲಕರು, ನಿರ್ವಾಹಕರು ಸಂಚಾರ ನಡೆಸುತ್ತಾರೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕೆಲವು ಚಾಲಕ, ನಿರ್ವಾಹಕರು ಬಸ್ ನಿಲ್ಲಿಸುವ ಜಾಗಕ್ಕಾಗಿ ಜಗಳವಾಡುತ್ತಾರೆ. ಇದನ್ನು ಗಮನಿಸಿರುವ ಕೆಎಸ್ಆರ್‌ಟಿಸಿ 126 ಬಸ್‌ಗಳನ್ನು ಸ್ಥಗಿತಗೊಳಿಸಿದೆ.

ಎಲ್ಲಾ ಮಾರ್ಗಗಳ ಅಧ್ಯಯನ

ಎಲ್ಲಾ ಮಾರ್ಗಗಳ ಅಧ್ಯಯನ

ಬೆಂಗಳೂರು-ಹಾಸನ ಮತ್ತು ಬೆಂಗಳೂರು-ಮೈಸೂರು ಮಾರ್ಗದಲ್ಲಿ ಬಸ್ ಸಂಚಾರ ನಡೆಸುವ 126 ಬಸ್ ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಮಾರ್ಗಗಳ ಅಧ್ಯಯನವನ್ನು ನಡೆಸಲಾಗುತ್ತದೆ. ಹಂತ-ಹಂತವಾಗಿ ಎಲ್ಲಾ ಮಾರ್ಗದಲ್ಲಿಯೂ ಪ್ರಯಾಣಿಕರ ಕೊರತೆ ಇರುವ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ.

English summary
Karnataka State Road Transport Corporation (KSRTC) suffered losses of crores. KSRTC stopped 126 bus service in Bengaluru-Hassan and Bengaluru-Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X