ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ಫ್ಯೂ ಬಳಿಕ ಬಸ್ ಸಂಚಾರ ಆರಂಭ; 82,127 ಜನರ ಪ್ರಯಾಣ

|
Google Oneindia Kannada News

ಬೆಂಗಳೂರು, ಮೇ 25 : ಭಾನುವಾರ ಕರ್ಫ್ಯೂ ಇದ್ದ ಕಾರಣ ಸರ್ಕಾರಿ ಬಸ್ ಸಂಚಾರ ಸ್ಥಗಿತವಾಗಿತ್ತು. ಸೋಮವಾರ ಪುನಃ ಬಸ್ ಸಂಚಾರ ನಡೆಸಿದ್ದು, 82,127 ಜನರು ಪ್ರಯಾಣಿಸಿದ್ದಾರೆ.

Recommended Video

ಹೊರಜಿಲ್ಲೆಗಳಿಗೆ ಹೋಗೋಕೆ ಪಾಸ್ ಅವಶ್ಯಕತೆ ಇದೆಯೇ ? | KSRTC | Oneindia Kannada

ಕೆಎಸ್ಆರ್‌ಟಿಸಿ ಈ ಕುರಿತು ಮಾಹಿತಿ ನೀಡಿದೆ. ಮೇ 19 ರಿಂದ 25ರ ತನಕ ಒಟ್ಟು 15,238 ಬಸ್‌ಗಳು ಸಂಚಾರ ನಡೆಸಿದ್ದು, 4,61,449 ಜನರು ಸಂಚಾರವನ್ನು ನಡೆಸಿದ್ದಾರೆ.

ರಸ್ತೆ ತೆರಿಗೆ ವಿನಾಯ್ತಿ ಕೋರಿದ ಖಾಸಗಿ ಬಸ್ ಮಾಲೀಕರು! ರಸ್ತೆ ತೆರಿಗೆ ವಿನಾಯ್ತಿ ಕೋರಿದ ಖಾಸಗಿ ಬಸ್ ಮಾಲೀಕರು!

ಸೋಮವಾರ 300 ಬಸ್‌ಗಳನ್ನು ಓಡಿಸಲು ತೀರ್ಮಾನಿಸಲಾಗಿತ್ತು. 2826 ಬಸ್‌ಗಳು ಸಂಚಾರ ನಡೆಸಿವೆ. ಬೆಂಗಳೂರು ನಗರದಿಂದ 617 ಬಸ್ ಸಂಚಾರ ನಡೆಸಿದ್ದು, 10,980 ಜನರು ಪ್ರಯಾಣ ಬೆಳೆಸಿದ್ದಾರೆ.

KSRTC ಬಸ್ ಸಂಚಾರದಲ್ಲಿ ಪ್ರಮುಖ ಬದಲಾವಣೆ: ಮಾಹಿತಿ ಇಲ್ಲಿದೆKSRTC ಬಸ್ ಸಂಚಾರದಲ್ಲಿ ಪ್ರಮುಖ ಬದಲಾವಣೆ: ಮಾಹಿತಿ ಇಲ್ಲಿದೆ

KSRTC Run 2826 Bus On May 25 After The One Day Curfew

ಮುಂಗಡ ಟಿಕೆಟ್ ಬುಕ್ ಮಾಡಿಕೊಂಡು ಸಂಚಾರ ನಡೆಸಲು ಅವಕಾಶವನ್ನು ನೀಡಲಾಗಿದೆ. ಸೋಮವಾರ 8190 ಜನರು ಮುಂಗಡ ಟಿಕೆಟ್ ಬುಕ್ ಮಾಡಿದ್ದರು. ಮೇ 26ರಂದು ಸಂಚಾರ ನಡೆಸಲು 4002 ಜನರು ಟಿಕೆಟ್ ಕಾಯ್ದಿರಿಸಿದ್ದಾರೆ.

ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಊರಿಗೆ ಹೋದ 59 ಸಾವಿರ ವಲಸೆ ಕಾರ್ಮಿಕರುಕೆಎಸ್ಆರ್‌ಟಿಸಿ ಬಸ್‌ನಲ್ಲಿ ಊರಿಗೆ ಹೋದ 59 ಸಾವಿರ ವಲಸೆ ಕಾರ್ಮಿಕರು

ಸೋಮವಾರ ಬೆಂಗಳೂರು ನಗರದಿಂದ ಬಾಲಗಕೋಟೆ, ಬಳ್ಳಾರಿ, ಬೆಳಗಾವಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹೊಸಕೋಟೆ, ಕಲಬುರ್ಗಿ, ಕೊಪ್ಪಳ, ಹಾಸನ ಮುಂತಾದ ಜಿಲ್ಲೆಗಳಿಗೆ ಸಂಚಾರ ನಡೆಸಿದ್ದಾರೆ.

ಬಸ್ ಸಂಚಾರದ ವಿವರ: ಮೇ 19ರಂದು 1606 ಬಸ್, ಮೇ 20 ರಂದು 2633 ಬಸ್, ಮೇ 21ರಂದು 2732 ಬಸ್, ಮೇ 22ರಂದು 2660 ಬಸ್, ಮೇ 23ರಂದು 2781 ಬಸ್ ಮತ್ತು ಮೇ 25ರಂದು 2826 ಬಸ್‌ಗಳು ರಾಜ್ಯದಲ್ಲಿ ಸಂಚಾರ ನಡೆಸಿವೆ.

English summary
KSRTC run 2826 bus on May 25, 2020. 82,127 passengers traveled on one day. Government bus operation started after curfew on May 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X