ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶಾಂತ್ ಆಚಾರ್ ಬಳಿ 10 ಬಸ್‌ಗೆ ಬೇಡಿಕೆ ಇಟ್ಟ ಕೆಎಸ್ಆರ್‌ಟಿಸಿ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 06: ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಯುವಕರಲ್ಲಿ ಕಲಾವಿದ ಪ್ರಶಾಂತ್ ಆಚಾರ್ ಸಹ ಒಬ್ಬರು. ಕೆಎಸ್ಆರ್‌ಟಿಸಿ ಕಲಾವಿದನ ಸಾಧನೆಯನ್ನು ಗುರುತಿಸಿದೆ, ಮೆಚ್ಚುಗೆ ಸೂಚಿಸಿದೆ.

ಕೆಎಸ್ಆರ್‌ಟಿಸಿ ಬಸ್‌ಗಳ ಮಾದರಿ ತಯಾರಿಸುವ ಪ್ರಶಾಂತ್ ಆಚಾರ್ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಪರಿಚಿತರು. ಕೆ‌ಎಸ್‌ಆರ್ ಟಿ‌ಸಿ‌ ಕೇಂದ್ರ ಕಛೇರಿಯಲ್ಲಿ ಅವರು ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರನ್ನು ಭೇಟಿ ಮಾಡಿದರು.

ಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ ಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ

ಪ್ರಶಾಂತ್ ಆಚಾರ್ ಅವರು ತಾವು ತಯಾರಿಸಿದ ಬಸ್‌ಗಳ ಮಾದರಿಗಳನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಿದರು. ನಿಗಮವು 10 ಈ ಮಾದರಿಯ ಬಸ್ಸುಗಳನ್ನು ತಯಾರಿಸಿ ಕೊಡಲು ಆದೇಶ ನೀಡಿದೆ. ಇದರಿಂದಾಗಿ ಕಲಾವಿದನಿಗೆ ಪ್ರೋತ್ಸಾಹ ಸಿಕ್ಕಿದಂತಾಗಿದೆ.

ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇನ್ನು ಎಲ್ಲಾ ಸೀಟು ಭರ್ತಿ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇನ್ನು ಎಲ್ಲಾ ಸೀಟು ಭರ್ತಿ

ಪ್ರಶಾಂತ್ ಆಚಾರ್ ತಯಾರು ಮಾಡಿದ ಬಸ್‌ಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಲವಾರು ಜನರು ಬಸ್‌ ಮಾದರಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಪ್ ಲೋಡ್ ಮಾಡುತ್ತಿದ್ದಾರೆ.

ಮಂಗಳೂರು-ಹೈದರಾಬಾದ್ ನಡುವೆ ಅಂಬಾರಿ ಬಸ್; ವೇಳಾಪಟ್ಟಿ ಮಂಗಳೂರು-ಹೈದರಾಬಾದ್ ನಡುವೆ ಅಂಬಾರಿ ಬಸ್; ವೇಳಾಪಟ್ಟಿ

10 ಬಸ್‌ಗಳಿಗಾಗ ಬೇಡಿಕೆ

10 ಬಸ್‌ಗಳಿಗಾಗ ಬೇಡಿಕೆ

ಪ್ರಶಾಂತ್ ಆಚಾರ್ ತಯಾರು ಮಾಡಿದ ಕೆಎಸ್ಆರ್‌ಟಿಸಿಯ ಐಷಾರಾಮಿ ಐರಾವತ ಬಸ್ ಮಾದರಿ ಬಹಳ ಪ್ರಸಿದ್ಧಿ ಪಡೆದಿದೆ. ಇದೇ ಮಾದರಿಯ 10 ಬಸ್‌ಗಳನ್ನು ಮಾಡಿಕೊಡಲು ಕೆಎಸ್ಆರ್‌ಟಿಸಿ ಬೇಡಿಕೆ ಸಲ್ಲಿಸಿದೆ. ಗಣ್ಯರಿಗೆ ಉಡುಗೊರೆ ಕೊಡಲು ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಪ್ರತಿ ಬಸ್‌ಗೆ 8 ಸಾವಿರ ರೂ.

ಪ್ರತಿ ಬಸ್‌ಗೆ 8 ಸಾವಿರ ರೂ.

ಪ್ರಶಾಂತ್ ಆಚಾರ್ ತಯಾರು ಮಾಡಿಕೊಡುವ ಪ್ರತಿ ಬಸ್ ಮಾದರಿಗೆ 8 ಸಾವಿರ ರೂ. ನೀಡುವುದಾಗಿ ಕೆಎಸ್ಆರ್‌ಟಿಸಿ ಹೇಳಿದೆ. ನಿಗಮದ ಬೇಡಿಕೆಗೆ ಸಂತೋಷದಿಂದ ಒಪ್ಪಿರುವ ಪ್ರಶಾಂತ್ ಆಚಾರ್ ಅವರು ಮಾದರಿಗಳನ್ನು ಮಾಡಿಕೊಡಲು ಒಪ್ಪಿಗೆ ಸೂಚಿಸಿದ್ದಾರೆ.

ಉಡುಪಿ ಮೂಲದ ಕಲಾವಿದ

ಉಡುಪಿ ಮೂಲದ ಕಲಾವಿದ

ಪ್ರಶಾಂತ್ ಆಚಾರ್ ಉಡುಪಿಯ ಹೆಮ್ಮಾಡಿ ಸಮೀಪದ ಡೈರಿ ಸರ್ಕಲ್‌ನಲ್ಲಿ ಅಣ್ಣನೊಂದಿಗೆ ಓಂಕಾರ್ ಶೀಟ್ ಮೆಟಲ್ ವರ್ಕ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪೋಮ್ ಶೀಟ್ ಬಳಸಿ ತಯಾರು ಮಾಡಿದ ಬಸ್‌ಗಳ ಮಾದರಿ ಎಲ್ಲರ ಗಮನ ಸೆಳೆಯುತ್ತಿದೆ.

Recommended Video

DKS ಮನೆ ಮೇಲೆ ನಡೆದ ದಾಳಿಯ ಹಿಂದಿದೆಯೇ Congress ಒಳಸಂಚು? | Oneindia Kannada
ಸುಮಾರು 8 ಸಾವಿರ ರೂ. ಖರ್ಚು

ಸುಮಾರು 8 ಸಾವಿರ ರೂ. ಖರ್ಚು

ಪೋಮ್ ಶೀಟ್‌ನಲ್ಲಿ ಬಸ್ ಹೊರ ಕವಚ ನಿರ್ಮಾಣ ಮಾಡಿ, ಸ್ಟೇರಿಂಗ್, ಗೇರ್, ಹೆಡ್ ಲೈಟ್, ಲಾಕ್, ಕಿಟಕಿಗಳನ್ನು ಹೊಂದಿರುವ ಒಂದು ಬಸ್ ತಯಾರು ಮಾಡಲು ಸುಮಾರು 8 ಸಾವಿರ ರೂ. ವೆಚ್ಚವಾಗಲಿದೆ. ಅಣ್ಣನ ಅಂಗಡಿಯಲ್ಲಿಯೇ ಬಸ್‌ಗಳಿಗೆ ಬಣ್ಣವನ್ನು ಮಾಡಿದ್ದಾರೆ.

English summary
Udupi based Prashanth Achar met KSRTC MD Shivayogi C. Kalasad and showed the miniature bus he has constructed. KSRTC gave the order for 10 such buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X