ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೋನಾ ವಿಚಾರದಲ್ಲಿ KSRTC ನೌಕರರಿಗೆ ಮಹಾ ಮೋಸ..!

|
Google Oneindia Kannada News

ಬೆಂಗಳೂರು, ಡಿಸೆಂಬರ್, 14: ರಾಜ್ಯದಲ್ಲಿ ಜನರ ಸ್ಥಿತಿ ನೋಡಿ ನಾಲ್ಕನೇ ದಿನ ಸಾರಿಗೆ ನೌಕರರು ಮುಷ್ಕರ ವಾಪಸು ತೆಗೆದುಕೊಳ್ಳುತ್ತಿದ್ದಾರೆ. ಅದೇ ಸಾರಿಗೆ ನೌಕರರಿಗೆ ಕರೋನಾ ವಿಚಾರದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಮಹಾ ಮೋಸ ಮಾಡಿದ್ದಾರೆ. ಮೋಸದ ಸಂಗತಿಯನ್ನೂ ಕೂಡ ಮುಚ್ಚಿಟ್ಟು ನಾಟಕ ಆರಂಭಿಸಿರುವುದು ದಾಖಲೆಗಳೇ ಬಹಿರಂಗಪಡಿಸಿವೆ.

ರಾಜ್ಯದಲ್ಲಿ ಕರೋನಾ ಮಹಾ ಮಾರಿಗೆ ರಾಜ್ಯದಲ್ಲಿ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಅದರಲ್ಲಿ ಪೊಲೀಸರನ್ನು, ಅಂಗನಾಡಿ ನೌಕರರನ್ನು, ಆಶಾ ಕಾರ್ಯಕರ್ತರು, ಶಿಕ್ಷಕರನ್ನು ಕರೋನಾ ವಾರಿಯರ್ಸ್ ಎಂದೇ ಸರ್ಕಾರ ಪರಿಗಣಿಸಿತ್ತು. ಸೇವೆ ಹಿನ್ನೆಲೆಯಲ್ಲಿ ಮೃತಪಡುವ ವಾರಿಯರ್ಸ್ ಗೆ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಮೃತಪಡುವ ಕರೋನಾ ವಾರಿಯರ್ಸ್ ನ ಪಟ್ಟಿ ತಯಾರಿಸಿ ಸಂಬಂಧಪಟ್ಟ ಇಲಾಖೆ ಪಟ್ಟಿ ತಯಾರಿಸಿ ಸರ್ಕಾರರಕ್ಕೆ ಕಳುಹಿಸಬೇಕಿತ್ತು. ಮೃತಪಟ್ಟ ಕರೋನಾ ವಾರಿಯರ್ಸ್ ನ ಪಟ್ಟಿಯನ್ನು ಇಟ್ಟುಕೊಳ್ಳುವುದು ಆಯಾ ಇಲಾಖೆಗಳು ಮಾಡಬೇಕಿದ್ದ ಕೆಲಸ.

ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಹಿಂದಿರುವ ಆ ಕಾಣದ 'ಕೈ'!ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಹಿಂದಿರುವ ಆ ಕಾಣದ 'ಕೈ'!

ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೋವಿಡ್ ಮಹಾ ಮಾರಿಗೆ ಬಲಿಯಾದ ಚಾಲಕ, ನಿರ್ವಾಹಕ, ಸಿಬ್ಬಂದಿಯ ಬಗ್ಗೆ ಒಂದು ದಾಖಲೆಯನ್ನೂ ಇಟ್ಟಿಲ್ಲ. ಒಂದು ರೂಪಾಯಿ ಪರಿಹಾರ ಕೂಡ ಮೃತರಿಗೆ ಕೊಟ್ಟಿಲ್ಲ. ಅಂದರೆ ಕರೋನಾ ಮಹಾ ಮಾರಿಗೆ ಮೃತರಾದ ಚಾಲಕ ನಿರ್ವಾಹಕರಿಗೆ ಪರಿಹಾರ ಕೊಡಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಮೃತರ ವಿವರಗಳನ್ನೇ ಅಧಿಕಾರಿಗಳು ನಿರ್ವಹಿಸದಿರುವುದು ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದ ದಾಖಲೆಗಳು ಬಹಿರಂಗಪಡಿಸಿವೆ.

covid death: KSRTC cheats to employees?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ವಿಭಾಗಕ್ಕೆ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಕರೋನಾ ಸೋಂಕಿಗೆ ಬಲಿಯಾದ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಅಧಿಕಾರಿಗಳು, ಸಿಬ್ಬಂದಿ ಹಾಗೂ ನೌಕರರ ಕ್ರೋಢೀಕೃತ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯಕರ್ತ ಶ್ರೀನಿವಾಸ್ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರ ಕೊಟ್ಟಿರುವ ನಿಗಮದ ಅಧಿಕಾರಿಗಳು, ಕರೋನಾ ಸೋಂಕಿಗೆ ಒಳಗಾಗಿ ಆರೈಕೆ ಕೇಂದ್ರ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೃತಪಟ್ಟ ಸಿಬ್ಬಂದಿಯ ಮಾಹಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದಲ್ಲದೇ , ಇನ್ನು ಕರೋನಾ ಸೋಂಕಿಗೆ ಬಲಿಯಾದ ಸಿಬ್ಬಂದಿ ಅಧಿಕಾರಿ, ನೌಕರರಿಗೆ ಸರ್ಕಾರ ಘೋಷಣೆ ಮಾಡಿದಂತೆ 30 ಲಕ್ಷ ರೂಪಾಯಿ ಪರಿಹಾರ ನೀಡಿರುವ ಬಗ್ಗೆಯೂ ಕೆಎಸ್ ಆರ್‌ ಟಿಸಿ ಅಧಿಕಾರಿಗಳು ಉತ್ತರ ನೀಡಿದ್ದು, ನಿಗಮದಿಂದ ಕೋವಿಡ್ ಮೃತರಿಗೆ ಅಥವಾ ಕುಟುಂಬ ಸದಸ್ಯರಿಗೆ ಪರಿಹಾರ ನೀಡಿಲ್ಲ ಎಂದು ಬಹಿರಂಗವಾಗಿದೆ. ಶ್ರೀನಿವಾಸ್ ಎಂಬುವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರ ನೀಡಿದ್ದು, ಕರೋನಾ ವಾರಿಯರ್ಸ್ ಆಗಿದ್ದ ಕೆಎಸ್ಆರ್ ಟಿಸಿ ನೌಕರರ ಬಗ್ಗೆ ನಿಗಮ ತಾಳಿರುವ ನಿರ್ಲಕ್ಷ್ಯ ಧೊರಣೆ ಇದರಿಂದ ಹೊರ ಬಂದಿದೆ.

covid death: KSRTC cheats to employees?

ಕರೋನಾ ಲಾಕ್ ಡೌನ್ ಮುಗಿದ ಬಳಿಕ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಹಿಳಾ ಸಿಬ್ಬಂದಿಯಂತೂ ಎಂಟು ತಾಸು ಕೆಲಸದ ಬದಲಿಗೆ ಹನ್ನೆರಡು ತಾಸು ಕೆಲಸ ನಿರ್ವಹಿಸಿದ್ದರು. ಈ ವೇಳೆ ಕರೋನಾ ಮಹಾ ಮಾರಿಗೆ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಸಿಬ್ಬಂದಿ ಮೃತಪಟ್ಟಿದ್ದರು. ಆದರೆ ಕರೋನಾ ಮಾರಿಗೆ ಮೃತರ ವಿವರಗಳನ್ನು ಇಟ್ಟುಕೊಳ್ಳದೇ ಕೆಎಸ್ ಆರ್‌ ಟಿಸಿ ನಿಗಮ ತಾಳಿರುವ ನೀತಿ ಜಗಜ್ಜಾಹೀರಾಗಿದೆ.

ಇದೇ ವಿಚಾರವಾಗಿ ಬಿಎಂಟಿಸಿಗೆ ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಮಾಹಿತಿ ನೀಡಿಲ್ಲ. ರಾಜ್ಯದ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಲಾಗಿದೆ. ಅವರಿಗೆ ಪರಿಹಾರವೂ ವಿತರಿಸಲಾಗಿದೆ. ಆದರೆ ಚಾಲಕ ಮತ್ತು ನಿರ್ವಾಹಕರ ಬಗ್ಗೆ ನಿಗಮ ಅನುಸರಿಸಿರುವ ಧೋರಣೆ ಮಾಹಿತಿ ಹಕ್ಕು ಅಧಿನಿಯಮದ ಅರ್ಜಿ ಯಲ್ಲಿ ಬಹಿರಂಗವಾಗಿದೆ.

Recommended Video

ಬೆಂಗಳೂರು: ಪೊಲೀಸ್‌ ಭದ್ರತೆಯೊಂದಿಗೆ ನೆಲಮಂಗಲದಿಂದ ಬಸ್‌ ಸಂಚಾರ ಆರಂಭ | Oneindia Kannada

ಸಂಚಾರ ಸ್ಥಗಿತಗೊಳಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಕರೆ ನೀಡಿದ್ದ ಮುಷ್ಕರ ನಾಲ್ಕನೇ ದಿನ ಅಂತ್ಯವಾಗುತ್ತಿದೆ. ಕರೋನಾ ಸೋಂಕಿಗೆ ಬಲಿಯಾದ ಸಾರಿಗೆ ನೌಕರರಿಗೆ ಪರಿಹಾರ ನೀಡುವುದು ಒಂದು ಬೇಡಿಕೆಯಾಗಿತ್ತು. ಆದರೆ, ಬೇಡಿಕೆ ಈಡೇರುವ ಮುನ್ನವೇ ನೌಕರರು ಮುಷ್ಕರ ವಾಪಸು ಪಡೆದಿದ್ದು, ಆದರೆ ಕರೋನಾ ವಾರಿಯರ್ಸ್ ಚಾಲಕ ನಿರ್ವಾಹಕರ ಬಗ್ಗೆ ನಿಗಮ ಅನುಸರಿಸಿರುವ ನೀತಿಯು ಇವತ್ತೇ ಬಹಿರಂಗವಾಗಿದೆ.

English summary
The Right to Information (Rti) Documents Reveal That KSRTC Not Maintained Driver and Conductors List Who Died due to coronavirus. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X