ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಸಂಚಾರ; ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 07 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೂರು ಮಾರ್ಗದಲ್ಲಿ ಹೊಸ ಬಸ್ ಸೇವೆಗಳನ್ನು ಆರಂಭಿಸಿದೆ. ಫೆಬ್ರವರಿ 7ರಿಂದ ಈ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರು-ಶ್ರೀಶೈಲಂ, ಬೆಂಗಳೂರು-ಚಿಕ್ಕಮಗಳೂರು, ಬೆಂಗಳೂರು-ಮುಂಬೈ ಮಾರ್ಗದಲ್ಲಿ ನೂತನ ಬಸ್‌ಗಳನ್ನು ಓಡಿಸಲಿದೆ. ಬಸ್‌ಗಳ ವೇಳಾಪಟ್ಟಿ ಮತ್ತು ಪ್ರಯಾಣ ದರದ ಪಟ್ಟಿಯನ್ನು ಕೆಎಸ್ಆರ್‌ಟಿಸಿ ಬಿಡುಗಡೆ ಮಾಡಿದೆ.

ಪ್ರಯಾಣದರ ಕಡಿತಗೊಳಿಸಿದ ಕೆಎಸ್ಆರ್‌ಟಿಸಿ ಪ್ರಯಾಣದರ ಕಡಿತಗೊಳಿಸಿದ ಕೆಎಸ್ಆರ್‌ಟಿಸಿ

ಬೆಂಗಳೂರು-ಶ್ರೀಶೈಲಂ ಮತ್ತು ಬೆಂಗಳೂರು-ಚಿಕ್ಕಮಗಳೂರು ನಡುವೆ ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್‌ಗಳು ಸಂಚಾರ ನಡೆಸಲಿವೆ. ಬೆಂಗಳೂರು-ಮುಂಬೈ ನಡುವೆ ಅಂಬಾರಿ ಡ್ರೀಮ್ ಕ್ಲಾಸ್‌ ಬಸ್‌ಗಳು ಸಂಚಾರ ನಡೆಸಲಿವೆ.

ಕೆಎಸ್ಆರ್‌ಟಿಸಿ ನೌಕರರಿಗೆ ಸಿಹಿಸುದ್ದಿ ನೀಡಿದ ಹೈಕೋರ್ಟ್‌ಕೆಎಸ್ಆರ್‌ಟಿಸಿ ನೌಕರರಿಗೆ ಸಿಹಿಸುದ್ದಿ ನೀಡಿದ ಹೈಕೋರ್ಟ್‌

ಮೂರು ಮಾರ್ಗದಲ್ಲಿ ನೂತನ ಬಸ್‌ಗಳ ಸಂಚಾರ ಫೆಬ್ರವರಿ 7ರಿಂದ ಆರಂಭವಾಗಲಿದೆ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ಹೇಳಿದೆ. ಬಸ್‌ಗಳ ವೇಳಾಪಟ್ಟಿ, ಪ್ರಯಾಣ ದರದ ಮಾಹಿತಿ ಇಲ್ಲಿದೆ...

ಕೊಡಗು ಪ್ರವಾಸಿಗರಿಗೆ ಸಿಹಿ ಸುದ್ದಿ ಕೊಟ್ಟ ಕೆಎಸ್ಆರ್‌ಟಿಸಿಕೊಡಗು ಪ್ರವಾಸಿಗರಿಗೆ ಸಿಹಿ ಸುದ್ದಿ ಕೊಟ್ಟ ಕೆಎಸ್ಆರ್‌ಟಿಸಿ

ಬೆಂಗಳೂರು-ಶ್ರೀಶೈಲಂ ಬಸ್

ಬೆಂಗಳೂರು-ಶ್ರೀಶೈಲಂ ಬಸ್

ಬೆಂಗಳೂರು-ಶ್ರೀಶೈಲಂ ಬಸ್ ಬೆಂಗಳೂರಿನಿಂದ ರಾತ್ರಿ 9ಗಂಟೆಗೆ ಹೊರಡಲಿದ್ದು, ಮರುದಿನ ಬೆಳಗ್ಗೆ 8.15ಕ್ಕೆ ಶ್ರೀಶೈಲಂಗೆ ತಲುಪಲಿದೆ. ಶ್ರೀಶೈಲಂನಿಂದ ಮಧ್ಯಾಹ್ನ 4ಕ್ಕೆ ಹೊರಡುವ ಬಸ್ ಮುಂಜಾನೆ 4.15ಕ್ಕೆ ಬೆಂಗಳೂರಿಗೆ ಬರಲಿದೆ. ಪ್ರಯಾಣ ದರ 1000 ರೂ.ಗಳು. ಬಸ್ ಚಿಕ್ಕಬಳ್ಳಾಪುರ, ಅನಂತಪುರ, ಕರ್ನೂಲು ಮಾರ್ಗವಾಗಿ ಸಂಚಾರ ನಡೆಸಲಿದೆ.

ಬೆಂಗಳೂರು-ಚಿಕ್ಕಮಗಳೂರು

ಬೆಂಗಳೂರು-ಚಿಕ್ಕಮಗಳೂರು

ಬೆಂಗಳೂರಿನಿಂದ ರಾತ್ರಿ 11ಕ್ಕೆ ಹೊರಡುವ ಬಸ್ ಮುಂಜಾನೆ 4 ಗಂಟೆಗೆ ಚಿಕ್ಕಮಗಳೂರು ತಲುಪಲಿದೆ. ಚಿಕ್ಕಮಗಳೂರಿನಿಂದ ರಾತ್ರಿ 11.15ಕ್ಕೆ ಹೊರಡುವ ಬಸ್ ಮುಂಜಾನೆ 4.45ಕ್ಕೆ ಬೆಂಗಳೂರಿಗೆ ತಲುಪಲಿದೆ. ಪ್ರಯಾಣ ದರ 460 ರೂ. ಗಳು. ಬಸ್ ಬೆಂಗಳೂರು-ಹಾಸನ ಮೂಲಕ ಚಿಕ್ಕಮಗಳೂರಿಗೆ ತಲುಪಲಿದೆ.

ಬೆಂಗಳೂರು-ಮುಂಬೈ ಮಾರ್ಗ

ಬೆಂಗಳೂರು-ಮುಂಬೈ ಮಾರ್ಗ

ಬೆಂಗಳೂರು-ಮುಂಬೈ ಬಸ್ ಬೆಂಗಳೂರಿನಿಂದ ರಾತ್ರಿ 8ಕ್ಕೆ ಹೊರಡಲಿದೆ. ಮಧ್ಯಾಹ್ನ 2.15ಕ್ಕೆ ಮುಂಬೈಗೆ ತಲುಪಲಿದೆ. ಸಂಜೆ 5.30ಕ್ಕೆ ಮುಂಬೈನಿಂದ ಹೊರಡಲಿದ್ದು, ಮಧ್ಯಾಹ್ನ 12.45ಕ್ಕೆ ಬೆಂಗಳೂರಿಗೆ ತಲುಪಲಿದೆ. ಪ್ರಯಾಣ ದರ 1600 ರೂ.ಗಳು. ಬೆಂಗಳೂರಿನಿಂದ ಹೊರಡುವ ಬಸ್ ಪುಣೆ ಮೂಲಕ ಮುಂಬೈಗೆ ಸಂಚಾರ ನಡೆಸಲಿದೆ.

ಕೆಎಸ್ಆರ್‌ಟಿಸಿ ಬಸ್

ಕೆಎಸ್ಆರ್‌ಟಿಸಿ ಬಸ್

ಕೆಎಸ್ಆರ್‌ಟಿಸಿ ಹೊಸದುರ್ಗ ಮತ್ತು ಬೆಂಗಳೂರು ನಡುವೆ ರಾಜಹಂಸ ಬಸ್‌ಗಳನ್ನು ಓಡಿಸಲಿದೆ. ಚಿತ್ರದುರ್ಗ ವಿಭಾಗ ಹೊಸದುರ್ಗ ಘಟಕದಿಂದ ಈ ಬಸ್‌ಗಳನ್ನು ಓಡಿಸಲಾಗುತ್ತಿದೆ. ಪ್ರತಿದಿನ ಈ ಬಸ್‌ಗಳು ಸಂಚಾರ ನಡೆಸಲಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ. ಹೊಸದುರ್ಗದಿಂದ ಹೊರಡುವ ಬಸ್ ಹಿರಿಯೂರು ಮಾರ್ಗವಾಗಿ ಬೆಂಗಳೂರಿಗೆ ತಲುಪಲಿದೆ. ಹೊಸದುರ್ಗ-ಮಾಡದಕೆರೆ-ಮಾರಿಕಣಿವೆ-ಹಿರಿಯೂರು-ಬೆಂಗಳೂರು ಮಾರ್ಗವಾಗಿ ಬಸ್ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

English summary
Karnataka State Road Transport Corporation (KSRTC) announced new bus service for three routes from Bengaluru. Bus will run from February 7, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X