ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗು ಪ್ರವಾಸಿಗರಿಗೆ ಸಿಹಿ ಸುದ್ದಿ ಕೊಟ್ಟ ಕೆಎಸ್ಆರ್‌ಟಿಸಿ

|
Google Oneindia Kannada News

ಬೆಂಗಳೂರು, ನವೆಂಬರ್ 25 : ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಕೆಎಸ್ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಿಂದ ಕೊಡಗಿನ ಎರಡು ಪ್ರದೇಶಗಳಿಗೆ ಹೊಸ ಐರಾವತ ಕ್ಲಬ್ ಕ್ಲಾಸ್ ಬಸ್ ಸೇವೆಯನ್ನು ಆರಂಭಿಸಲಾಗಿದೆ.

ಬೆಂಗಳೂರು-ಮಡಿಕೇರಿ, ಬೆಂಗಳೂರು-ವಿರಾಜಪೇಟೆ ನಡುವೆ ಐರಾವತ ಕ್ಲಬ್ ಕ್ಲಾಸ್ ಬಸ್ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಿದೆ. ಪ್ರವಾಸಿಗರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಬೆಂಗಳೂರು-ಪಂಪಾ ಸರ್ಕಾರಿ ಬಸ್ ವೇಳಾಪಟ್ಟಿ, ದರಬೆಂಗಳೂರು-ಪಂಪಾ ಸರ್ಕಾರಿ ಬಸ್ ವೇಳಾಪಟ್ಟಿ, ದರ

KSRTC New Airavat Bus Service To Virajpet And Madikeri

ಬೆಂಗಳೂರು-ಮಡಿಕೇರಿ, ಬೆಂಗಳೂರು-ವಿರಾಜಪೇಟೆಗೆ ಸಂಚಾರ ನಡೆಸುವ ಬಸ್‌ಗಳ ವೇಳಾಪಟ್ಟಿಯನ್ನು ಕೆಎಸ್ಆರ್ಅಂತಿಮಗೊಳಿಸಿ ಬಿಡುಗಡೆ ಮಾಡಿದೆ. ಮಡಿಕೇರಿಗೆ ಹೋಗುವ ಬಸ್ ಬೆಳಗ್ಗೆ, ವಿರಾಜಪೇಟೆಗೆ ಹೋಗುವ ಬಸ್ ಮಧ್ಯಾಹ್ನ ಬೆಂಗಳೂರಿನಿಂದ ಹೊರಡಲಿದೆ.

ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳುಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು

ನೂತನ ಬಸ್‌ಗಳ ವೇಳಾಪಟ್ಟಿ

* ಬೆಂಗಳೂರು-ಮಡಿಕೇರಿ ಬಸ್ ಬೆಂಗಳೂರಿನಿಂದ ಬೆಳಗ್ಗೆ 5.30ಕ್ಕೆ ಹೊರಡಲಿದ್ದು, ಮಡಿಕೇರಿಗೆ 12ಗಂಟೆಗೆ ತಲುಪಲಿದೆ. ಮಡಿಕೇರಿ-ಬೆಂಗಳೂರು ಬಸ್ ಮಡಿಕೇರಿಯಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿದ್ದು, ಬೆಂಗಳೂರಿಗೆ 8.30ಕ್ಕೆ ತಲುಪಲಿದೆ.

ಕೆಎಸ್‌ಆರ್‌ಟಿಸಿ ವೋಲ್ವೊ ಬಸ್‌ಗಳಲ್ಲಿ ಇನ್ಮುಂದೆ ನೀರು ಕೊಡಲ್ಲಕೆಎಸ್‌ಆರ್‌ಟಿಸಿ ವೋಲ್ವೊ ಬಸ್‌ಗಳಲ್ಲಿ ಇನ್ಮುಂದೆ ನೀರು ಕೊಡಲ್ಲ

* ಬೆಂಗಳೂರು-ವಿರಾಜಪೇಟೆ ಬಸ್ ಬೆಂಗಳೂರಿನಿಂದ ಮಧ್ಯಾಹ್ನ 3.30ಕ್ಕೆ ಹೊರಡಲಿದೆ, ವಿರಾಜಪೇಟೆಗೆ 9.45ಕ್ಕೆ ತಲುಪಲಿದೆ. ವಿರಾಜಪೇಟೆ-ಬೆಂಗಳೂರು ಬಸ್ 8.30ಕ್ಕೆ ಬೆಂಗಳೂರಿನಿಂದ ಹೊರಡಲಿದ್ದು, ಬೆಂಗಳೂರಿಗೆ 1.20ಕ್ಕೆ ಬಂದು ತಲುಪಲಿದೆ.

English summary
Karnataka State Rroad Transport Corporation (KSRTC) introduced Airavat club class bus services from Bengaluru to Virajpet and Bengaluru to Madikeri of Kodagu district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X