ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ ಮಾಸಿಕ ಬಸ್ ಪಾಸ್; ಮಹತ್ವದ ಘೋಷಣೆ

|
Google Oneindia Kannada News

ಬೆಂಗಳೂರು, ಜೂನ್ 21; ಕರ್ನಾಟಕ ಸರ್ಕಾರ ಸೋಮವಾರದಿಂದ ಜಾರಿಗೆ ಬರುವಂತೆ ಅನ್‌ಲಾಕ್ ಘೋಷಣೆ ಮಾಡಿದೆ. ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗಿದೆ. ಮಾಸಿಕ ಪಾಸು ಪಡೆದವರಿಗಾಗಿ ಸಾರಿಗೆ ನಿಗಮ ಘೋಷಣೆಯೊಂದನ್ನು ಮಾಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೋಮವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ. 7/4/2021 ರಿಂದ ಸಿಬ್ಬಂದಿಗಳ ಮುಷ್ಕರ, 28/4/2021 ರಿಂದ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ ಕಾರಣ ಜನರಿಗೆ ಅನಾನುಕೂಲವಾಗಿದೆ.

ಸರ್ಕಾರ ಅನುಮತಿ ಕೊಟ್ಟರೂ ಖಾಸಗಿ ಬಸ್ ಸೇವೆ ಆರಂಭವಿಲ್ಲವೇಕೆ? ಸರ್ಕಾರ ಅನುಮತಿ ಕೊಟ್ಟರೂ ಖಾಸಗಿ ಬಸ್ ಸೇವೆ ಆರಂಭವಿಲ್ಲವೇಕೆ?

ಮುಷ್ಕರ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಮಾಸಿಕ ಪಾಸು ಚಾಲ್ತಿಯಲ್ಲಿರುತ್ತದೆ. ಲಾಕ್‌ಡೌನ್ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಹಂತವಾರು ಮಾಸಿಕ ಪಾಸುಗಳ ಮಾನ್ಯತಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಶಿವಮೊಗ್ಗ; ಅನ್‌ಲಾಕ್‌ ಆರಂಭ, ರಸ್ತೆಗಿಳಿದ ಸರ್ಕಾರಿ ಬಸ್‌ಗಳು ಶಿವಮೊಗ್ಗ; ಅನ್‌ಲಾಕ್‌ ಆರಂಭ, ರಸ್ತೆಗಿಳಿದ ಸರ್ಕಾರಿ ಬಸ್‌ಗಳು

KSRTC Monthly Bus Pass Date Extended Till July 8

ಈ ವಿನಾಯಿತಿಯು ಮಾಸಿಕ ಬಸ್ ಪಾಸ್ ಚಾಲ್ತಿಯಲ್ಲಿರುವ ಉಳಿದ ಅವಧಿಗೆ ಗರಿಷ್ಠ 18 ದಿನಗಳ ತನಕ ವಿಸ್ತರಣೆ ಮಾಡಲಾಗಿದೆ. ಅಂದರೆ 8/7/2021ರ ತನಕ ಪಾಸು ಚಾಲ್ತಿಯಲ್ಲಿರುತ್ತದೆ.

ಕೊರೊನಾ ಅನ್ ಲಾಕ್ 2.0: ರಾಜ್ಯದಲ್ಲಿ ಷರತ್ತು ಬದ್ಧ ಬಸ್ ಸಂಚಾರಕ್ಕೆ ಅವಕಾಶ! ಕೊರೊನಾ ಅನ್ ಲಾಕ್ 2.0: ರಾಜ್ಯದಲ್ಲಿ ಷರತ್ತು ಬದ್ಧ ಬಸ್ ಸಂಚಾರಕ್ಕೆ ಅವಕಾಶ!

8/4/2021 ರಿಂದ 27/4/2021ರ ಅವಧಿಯಲ್ಲಿ ಮಾಸಿಕ ಪಾಸುಗಳನ್ನು ಪಡೆದಿದ್ದಲ್ಲಿ ಅಂತಹ ಪ್ರಯಾಣಿಕರಿಗೆ ದಿನಾಂಕಗಳನ್ನು ಸೂಕ್ತವಾಗಿ ಪರಿಶೀಲಿಸಿ, ಅಷ್ಟು ದಿನಗಳಿಗೆ ಅನುಗುಣವಾಗಿ ವಿಸ್ತರಿಸಲು ಕಳುಹಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಪಾಸು ಹೊಂದಿರುವ ಪ್ರಯಾಣಿಕರು ಪಾಸ್ ವಿತರಣೆ ಕೌಂಟರ್‌ಗಳಲ್ಲಿ ಚಾಲ್ತಿ ಅವಧಿಯ ದಿನಗಳಿಗೆ ವಿಸ್ತರಣೆಯಾಗಿರುವ ಬಗ್ಗೆ ದಿನಾಂಕ, ಸಹಿ ಹಾಗೂ ಮೊಹರನ್ನು ಹಾಕಿಸಿಕೊಳ್ಳಬೇಕು.

ಬಿಎಂಟಿಸಿ ಮಾಸಿಕ ಪಾಸ್; ಬೆಂಗಳೂರು ನಗರದಲ್ಲಿ ಸಹ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಬಿಎಂಟಿಸಿ ಮಾಸಿಕ ಬಸ್ ಪಾಸ್ ಅವಧಿಯನ್ನು ಸಹ ಜುಲೈ 8ರ ತನಕ ವಿಸ್ತರಣೆ ಮಾಡಲಾಗಿದೆ.

Recommended Video

ಎಚ್ಚರ!! ರಾಜ್ಯದ 3 ಲಕ್ಷಕ್ಕಿಂತ ಅಧಿಕ ಮಕ್ಕಳು ಕೊರೊನಾ ಮೂರನೇ ಅಲೆಯ ಟಾರ್ಗೆಟ್! | Oneindia Kannada

English summary
After unlock announcement Karnataka State Road Transport Corporation (KSRTC) resumed bus service from June 21. Monthly bus pass date extended till 8/7/2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X