ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿಯಿಂದ ಟ್ಯಾಕ್ಸಿ ಸೇವೆ ಆರಂಭ?

|
Google Oneindia Kannada News

ಬೆಂಗಳೂರು, ಆಗಸ್ಟ್ 25 : ಕೆಎಸ್ಆರ್‌ಟಿಸಿ ಟ್ಯಾಕ್ಸಿ ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಈ ಕುರಿತು ಪ್ರಾಥಮಿಕ ಹಂತದ ಮಾತುಕತೆಗಳು ಆರಂಭವಾಗಿವೆ. ಇಸ್ರೋ ಈ ಸೇವೆಗೆ ತಂತ್ರಜ್ಞಾನದ ಸಹಕಾರವನ್ನು ಒದಗಿಸಲಿದೆ.

Recommended Video

Chris Gayle went to a party with Usain Bolt, who has now tested Corona Positive | Oneindia Kannada

ಲಾಕ್ ಡೌನ್ ಅವಧಿಯಲ್ಲಿ ಉಂಟಾದ ನಷ್ಟದಿಂದ ಹೊರ ಬರಲು ಕೆಎಸ್ಆರ್‌ಟಿಸಿ ಮೊಬೈಲ್ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಇದರ ಜೊತೆ ಕೋರಿಯರ್ ಸೇವೆ ಸಹ ಆರಂಭವಾಗಲಿದೆ.

ಭಾನುವಾರ ಹಾಗೂ ರಾತ್ರಿ ವೇಳೆಯೂ ಸಂಚರಿಸಲಿದೆ ಕೆಎಸ್ಆರ್‌ಟಿಸಿ ಭಾನುವಾರ ಹಾಗೂ ರಾತ್ರಿ ವೇಳೆಯೂ ಸಂಚರಿಸಲಿದೆ ಕೆಎಸ್ಆರ್‌ಟಿಸಿ

ಕೆಎಸ್ಆರ್‌ಟಿಸಿ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಇಸ್ರೋ ಜೊತೆ ಈ ಕುರಿತು ಅಂತಿಮ ಹಂತದ ಮಾತುಕತೆ ನಡೆಸಲಿದ್ದಾರೆ. 'ನಮ್ಮ ಕೋರಿಯರ್' ಹೆಸರಿನ ಪಾರ್ಸೆಲ್ ಸೇವೆಯನ್ನು ಆರಂಭ ಮಾಡಲಿದ್ದು, ಇದರಿಂದ ವಾರ್ಷಿಕ 100 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.

ಕೇರಳ-ಕರ್ನಾಟಕ ನಡುವೆ ಬಸ್ ಸಂಚಾರ; ಪ್ರಯಾಣಿಕರಿಗೆ ಸೂಚನೆ ಕೇರಳ-ಕರ್ನಾಟಕ ನಡುವೆ ಬಸ್ ಸಂಚಾರ; ಪ್ರಯಾಣಿಕರಿಗೆ ಸೂಚನೆ

KSRTC May Start App Base Taxi Service

ಕೋರಿಯರ್ ಸರ್ವೀಸ್ ಆರಂಭಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದು ಅಂತಿಮ ಹಂತದಲ್ಲಿದೆ. ಬಸ್ ನಿಲ್ದಾಣದ ಆವರಣದಲ್ಲಿಯೇ ಕೋರಿಯರ್ ಸೇವೆಗೆ ಬೇಕಾದ ಸ್ಥಳವನ್ನು ನೀಡಲಾಗುತ್ತದೆ.

ಬಸ್ ಸಂಚಾರ ಆರಂಭ; ಚೇತರಿಕೆ ಕಂಡ ಸಾರಿಗೆ ಇಲಾಖೆ ಆದಾಯ ಬಸ್ ಸಂಚಾರ ಆರಂಭ; ಚೇತರಿಕೆ ಕಂಡ ಸಾರಿಗೆ ಇಲಾಖೆ ಆದಾಯ

ಕೆಎಸ್ಆರ್‌ಟಿಸಿ ಟ್ಯಾಕ್ಸಿ ಯೋಜನೆ ರೂಪುರೇಷೆ ಸಿದ್ಧವಾಗುತ್ತಿದೆ. ತಂತ್ರಜ್ಞಾನದ ನೆರವು ಪಡೆಯುವ ಮಾತುಕತೆ ಅಂತಿಮಗೊಂಡ ಬಳಿಕ ಸರ್ಕಾರದ ಅನುಮತಿ ಪಡೆದು ಇದನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆ ಇದೆ.

ಮೊದಲೇ ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆಗಳಿಗೆ ಲಾಕ್ ಡೌನ್ ಕಾರಣದಿಂದಾಗಿ ಮತ್ತಷ್ಟು ನಷ್ಟವಾಗಿದೆ. ಇದರಿಂದಾಗಿ ನೌಕರರ ವೇತನ ಪಾವತಿಗೂ ತೊಂದರೆಯಾಗುತ್ತಿದೆ. ಇನ್ನು ಅಂತರರಾಜ್ಯ ಬಸ್ ಸೇವೆಗಳು ಆರಂಭವಾಗಿಲ್ಲ.

English summary
KSRTC is planning to start app-based taxis services. Discussions are still in the preliminary stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X