ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು-ಕೆಐಎಎಲ್‌ಗೆ ಹೊಸ ಫ್ಲೈ ಬಸ್ ಸೇವೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 2: ಮೈಸೂರಿನಿಂದ ಹೊರ ರಾಜ್ಯ ಮತ್ತು ವಿದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೆಎಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಹೊಸ ಬಸ್ ವ್ಯವಸ್ಥೆಯನ್ನು ಕೆಎಸ್ಆರ್‌ಟಿಸಿ ಆರಂಭಿಸುತ್ತಿದೆ.

Recommended Video

ಆಸ್ಪತ್ರೆಯಿಂದ ಕೆಲಸ ಮಾಡುತ್ತಿರುವ Minister | Oneindia Kannada

ಮೈಸೂರಿನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಫ್ಲೈ ಬಸ್ ಸೇವೆಗಳನ್ನು ಕೆಎಸ್ಆರ್‌ಟಿಸಿ ಪ್ರಾರಂಭಿಸುತ್ತಿದೆ. ಇದು ಸೆ.10ರಿಂದ ಆರಂಭವಾಗಲಿದೆ. ದಿನಕ್ಕೆ ನಾಲ್ಕು ಬಾರಿ ಈ ಫ್ಲೈ ಬಸ್‌ಗಳು ಓಡಾಟ ನಡೆಸಲಿವೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಈ ಬಸ್ ಸೇವೆಗಳು ಇರಲಿವೆ. ಅಂದಹಾಗೆ ಮೈಸೂರು-ಬೆಂಗಳೂರು ವಿಮಾನ ನಿಲ್ದಾಣದ ನಡುವಿನ ಸಂಚಾರಕ್ಕೆ ಒಂದು ಟಿಕೆಟ್‌ಗೆ ಪ್ರಯಾಣಿಕರು 750 ರೂ. ಪಾವತಿಸಬೇಕಾಗುತ್ತದೆ.

ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇನ್ನು ಎಲ್ಲಾ ಸೀಟು ಭರ್ತಿಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇನ್ನು ಎಲ್ಲಾ ಸೀಟು ಭರ್ತಿ

KSRTC Introduces New FlyBus Services From Bengaluru Airport To Mysuru From Sept 10

ಫ್ಲೈ ಬಸ್ ಓಡಾಟದ ವೇಳಾಪಟ್ಟಿ ಹೀಗಿದೆ.

ಕೆಐಎಎಲ್‌ನಿಂದ ಮೈಸೂರು ಪ್ರಯಾಣ:

* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.30ಕ್ಕೆ ಹೊರಟು ಮಧ್ಯಾಹ್ನ 1.30ಕ್ಕೆ ಮೈಸೂರು.

* ಬೆಳಿಗ್ಗೆ 11.30 (ಕೆಐಎಎಲ್)- ಮಧ್ಯಾಹ್ನ 3.30 (ಮೈಸೂರು)

* ಸಂಜೆ 6.30- ರಾತ್ರಿ 10.30

* ರಾತ್ರಿ 8.30- ರಾತ್ರಿ 1.30

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಕೆಎಸ್ಆರ್‌ಟಿಸಿಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಕೆಎಸ್ಆರ್‌ಟಿಸಿ

ಮೈಸೂರಿನಿಂದ ಕೆಐಎಎಲ್ ಪ್ರಯಾಣ:

* ಬೆಳಗ್ಗೆ 4.00- ಬೆಳಿಗ್ಗೆ 8.00

* ಮಧ್ಯಾಹ್ನ 2.00- ಸಂಜೆ 6.00

* ಸಂಜೆ 4.00- ರಾತ್ರಿ 8.00

* ರಾತ್ರಿ 12.15- ಬೆಳಿಗ್ಗೆ 4.00

English summary
KSRTC Introduces new FlyBus services from Bengaluru Airport to Mysuru from Sept 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X