ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಆರ್‌ಟಿಸಿ ಸಹಾಯವಾಣಿ ಬದಲಾವಣೆ, ನೂತನ ಸಹಾಯವಾಣಿ ಸಂಖ್ಯೆ ಇಲ್ಲಿದೆ

|
Google Oneindia Kannada News

ಬೆಂಗಳೂರು, ಡಿ. 27: ಪ್ರಯಾಣಿಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ಒದಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮುಂದಾಗಿದ್ದು, ತನ್ನ ಸೇವೆಯನ್ನು ಮತ್ತಷ್ಟು ಸರಳಗೊಳಿಸುತ್ತಿದೆ. ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರ ಪ್ರಯಾಣವನ್ನು ಸುಗಮಗೊಳಿಸಲು ಸಹಾಯವಾಣಿ ವ್ಯವಸ್ಥೆ ಮಾಡಿತ್ತು. ಯಾವುದೇ ಬಸ್, ಮುಂಗಡ ಬುಕ್ಕಿಂಗ್, ಬಸ್ ವೇಳಾಪಟ್ಟಿ ಸೇರಿದಂತೆ ಎಲ್ಲ ಮಾಹಿತಿಯನ್ನು ಪಡೆಯಲು ಸಹಾಯವಾಣಿ ಸಂಖ್ಯೆ 94495 96666ಯನ್ನು ಕೊಟ್ಟಿತ್ತು. ಆದರೆ ಇದೀಗ ಅದನ್ನು ಹಿಂದಕ್ಕೆ ಪಡೆಯಲು ಕೆಎಸ್‌ಆರ್‌ಟಿಸಿ ನಿರ್ಧಾರ ಮಾಡಿದೆ.

ಹಳೆಯ ಸಹಾಯವಾಣಿ ಸಂಖ್ಯೆಯ ಬದಲಿಗೆ ಹೊಸ ದೂರವಾಣಿ ಸಂಖ್ಯೆಯನ್ನು ಕೆಎಸ್‌ಆರ್‌ಟಿಸಿ ಒದಗಿಸಿದ್ದು, ಇನ್ನು ಮುಂದೆ ಹೊಸ ಸಹಾಯವಾಣಿ ಸಂಖ್ಯೆ 080-26252625ಗೆ ಕರೆ ಮಾಡುವ ಮೂಲಕ ಅಗತ್ಯ ಮಾಹಿತಿ ಪಡೆಯ ಬಹುದಾಗಿದೆ. ನೂತನ ಸಹಾಯವಾಣಿ ಸಂಖ್ಯೆಯು ಹೊಸ ವರ್ಷದ ಮೊದಲ ದಿನದಿಂದ ಅಂದರೆ ಜನವರಿ 1, 2021 ರಿಂದ ಕಾರ್ಯಾರಂಭ ಮಾಡಲಿದೆ.

KSRTC has changed its helpline number and has announced a new helpline

ಕೊರೋನಾ ವಿಚಾರದಲ್ಲಿ KSRTC ನೌಕರರಿಗೆ ಮಹಾ ಮೋಸ..! ಕೊರೋನಾ ವಿಚಾರದಲ್ಲಿ KSRTC ನೌಕರರಿಗೆ ಮಹಾ ಮೋಸ..!

Recommended Video

Chinaದಿಂದ 50 Droneಗಳನ್ನು ಖರೀದಿಸಿದ Pakistanನ | Oneindia Kannada

ಪ್ರಯಾಣಿಕರು ಜನವರಿ 1, 2021 ರಿಂದ ಸಲಹೆ, ದೂರುಗಳು ಹಾಗೂ ಸಂಸ್ಥೆಯ ಇನ್ನಿತರ ವಿವರ ಅಥವಾ ಮಾಹಿತಿ ಪಡೆಯಲು ಕಾಲ್ ಸೆಂಟರ್ ಸಹಾಯವಾಣಿಗೆ ಕರೆ ಮಾಡುವ ಮೂಲಕ ತಿಳಿದು ಕೊಳ್ಳಬಹುದು ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯಾಚರಣೆ) ತಿಳಿಸಿದ್ದಾರೆ.

English summary
Karnataka State Road Transport Corporation has changed its helpline number and has announced a new helpline. The new helpline will be launched from January 1, 2021, KSRTC said in a statement. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X