ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯುಧ ಪೂಜೆ ಮಾಡಲು ಬಸ್ಸುಗಳಿಗೆ ನೂರು ರೂಪಾಯಿ ಕೊಟ್ಟ ಕೆಎಸ್‌ಆರ್‌ಟಿಸಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05: ಆಯುಧ ಪೂಜೆ ಮಾಡಲು ಪ್ರತಿ ಬಸ್ಸಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಕೊಟ್ಟಿರುವ ಮೊತ್ತ ಕೇವಲ ನೂರು ರೂಪಾಯಿ!

ಹೌದು, ಆಯುಧ ಪೂಜೆ ಮಾಡಿರೆಂದು ಬಸ್ಸುಗಳಿಗೆ ಕೇವಲ ನೂರು ರೂಪಾಯಿ ನೀಡಿದೆ ಇಲಾಖೆ. ನೂರು ರೂಪಾಯಿಯಲ್ಲಿ ಒಂದು ಸಣ್ಣ ಹಾರವೂ ಬರದ ಕಾಲದಲ್ಲಿ ಇಡೀಯ ಬಸ್‌ ಅಲಂಕರಿಸಿ ಪೂಜೆ ಮಾಡಲು ನೀಡಿರುವುದು ಕೇವಲ ನೂರು ರೂಪಾಯಿ.

ಕೆಎಸ್‌ಆರ್‌ಟಿಸಿ ವೋಲ್ವೊ ಬಸ್‌ಗಳಲ್ಲಿ ಇನ್ಮುಂದೆ ನೀರು ಕೊಡಲ್ಲ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್‌ಗಳಲ್ಲಿ ಇನ್ಮುಂದೆ ನೀರು ಕೊಡಲ್ಲ

ಪ್ರತಿ ಬಸ್‌ಗೆ ನೂರು ರೂಪಾಯಿಯಂತೆ ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1000 ರೂಪಾಯಿ ಅಷ್ಟೆ ನೀಡಲಾಗಿದ್ದು ಈ ಬಗ್ಗೆ ಮುಖ್ಯ ಯಾಂತ್ರಿಕ ಅಭಿಯಂತರರು ಆದೇಶ ಹೊರಡಿಸಿದ್ದಾರೆ.

KSRTC Gave 100 Rs For Bus To Celebrate Ayudha Pooja

ಕಳೆದ ಬಾರಿಯೂ ಇಲಾಖೆ ಹೀಗೆಯೇ ಮಾಡಿತ್ತು. ಆದರೆ ಬಹುತೇಕ ಬಸ್ ಚಾಲಕರು ಮತ್ತು ನಿರ್ವಾಹಕರು ತಮ್ಮ ದುಡಿಮೆಯ ಹಣವನ್ನೇ ಖರ್ಚು ಮಾಡಿ ಹೂಗಳಿಂದ ಅಲಂಕರಿಸುತ್ತಾರೆ. ಈ ಬಾರಿಯೂ ಅದೇ ಪುನರಾವರ್ತನೆ ಆಗಲಿದೆ.

ದಸರಾ; ಬೆಂಗಳೂರು-ಬೀದರ್ ವಿಶೇಷ ರೈಲು, ದರಪಟ್ಟಿ ದಸರಾ; ಬೆಂಗಳೂರು-ಬೀದರ್ ವಿಶೇಷ ರೈಲು, ದರಪಟ್ಟಿ

ಮುಖ್ಯ ಯಾಂತ್ರಿಕ ಅಭಿಯಂತರರು ಮಾಡಿರುವ ಆದೇಶದಂತೆ ಹಬ್ಬದ ದಿನ ಬಸ್ಸುಗಳು ಸಂಚಾರ ಮಾಡುವಂತೆಯೂ, ಯಾರೂ ಬಸ್ಸನ್ನು ನಿಲ್ಲಿಸದಂತೆಯೂ ಸೂಚಿಸಿದ್ದಾರೆ. ಜೊತೆಗೆ ಬಸ್ಸುಗಳನ್ನು ಸ್ವಚ್ಛವಾಗಿ ಇಡುವಂತೆ ಸೂಚಿಸಿದ್ದಾರೆ.

English summary
KSRTC gave only 100 rs per bus to celebrate Ayudha Pooja. In 100 rs drivers should decorate their buses and perform pooja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X