ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ ಉಚಿತ ಬಸ್ ಸಂಚಾರ ಶುಕ್ರವಾರದಿಂದ ಸ್ಥಗಿತ?

|
Google Oneindia Kannada News

ಬೆಂಗಳೂರು, ಮೇ 07 : ಬೆಂಗಳೂರು ನಗರದಿಂದ ವಲಸೆ ಕಾರ್ಮಿಕರನ್ನು ತಮ್ಮ ಊರಿಗೆ ತಲುಪಿಸಲು ಕೆಎಸ್ಆರ್‌ಟಿಸಿ ಆರಂಭಿಸಿದ್ದ ಬಸ್ ಸೇವೆ ಮೇ 8ರಿಂದ ಸ್ಥಗಿತಗೊಳ್ಳಲಿದೆ. ಗುರುವಾರದ ತನಕ ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ.

ಕಳೆದ 5 ದಿನಗಳಿಂದ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ವಲಸೆ ಕಾರ್ಮಿಕರು ತೆರಳಿದ್ದಾರೆ. ಉಚಿತ ಪ್ರಯಾಣಕ್ಕೆ ಗುರುವಾರ ಕೊನೆ ದಿನವಾಗಿದ್ದು, ಶುಕ್ರವಾರದಿಂದ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ.

ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಊರಿಗೆ ಹೋದ 59 ಸಾವಿರ ವಲಸೆ ಕಾರ್ಮಿಕರುಕೆಎಸ್ಆರ್‌ಟಿಸಿ ಬಸ್‌ನಲ್ಲಿ ಊರಿಗೆ ಹೋದ 59 ಸಾವಿರ ವಲಸೆ ಕಾರ್ಮಿಕರು

ಇದುವರೆಗೂ ಸುಮಾರು 3,500 ಬಸ್‌ಗಳನ್ನು ಕೆಎಸ್ಆರ್‌ಟಿಸಿ ಓಡಿಸಿದ್ದು, 1 ಲಕ್ಷಕ್ಕೂ ಅಧಿಕ ಜನರು ತಮ್ಮ-ತಮ್ಮ ಊರುಗಳಿಗೆ ತೆರಳಿದ್ದಾರೆ. ಬಸ್‌ಗಳಿಗಾಗಿ ಬೇಡಿಕೆ ಬರುತ್ತಲೇ ಇದೆ. ಇನ್ನೂ ನೂರಾರು ಕಾರ್ಮಿಕರು ಊರಿಗೆ ಹೋಗಲು ತಯಾರಾಗುತ್ತಿದ್ದಾರೆ.

ಲಾಕ್ ಡೌನ್; ನಷ್ಟದ ಲೆಕ್ಕ ಕೊಟ್ಟ ಕೆಎಸ್ಆರ್‌ಟಿಸಿ ಲಾಕ್ ಡೌನ್; ನಷ್ಟದ ಲೆಕ್ಕ ಕೊಟ್ಟ ಕೆಎಸ್ಆರ್‌ಟಿಸಿ

ಲಾಕ್ ಡೌನ್ ಘೋಷಣೆಯಾದ ಬಳಿಕ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಎರಡನೇ ಹಂತದ ಲಾಕ್ ಡೌನ್ ಮುಗಿಯುವುದಕ್ಕೂ ಒಂದು ದಿನ ಮೊದಲು ಕರ್ನಾಟಕ ಸರ್ಕಾರ ವಲಸೆ ಕಾರ್ಮಿಕರು ಊರುಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟಿತ್ತು.

ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಸಂಚಾರ ನಡೆಸುವ ಕಾರ್ಮಿಕರಿಗೆ ಸೂಚನೆಗಳು ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಸಂಚಾರ ನಡೆಸುವ ಕಾರ್ಮಿಕರಿಗೆ ಸೂಚನೆಗಳು

1 ಲಕ್ಷಕ್ಕೂ ಅಧಿಕ ಕಾರ್ಮಿಕರು

1 ಲಕ್ಷಕ್ಕೂ ಅಧಿಕ ಕಾರ್ಮಿಕರು

ಕೆಎಸ್ಆರ್‌ಟಿಸಿಯ ಉಚಿತ ಬಸ್ ವ್ಯವಸ್ಥೆ ಬಳಕೆ ಮಾಡಿಕೊಂಡು ಸುಮಾರು 1 ಲಕ್ಷ ವಲಸೆ ಕಾರ್ಮಿಕರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ಪ್ರಯಾಣ ಮಾಡಿದ್ದಾರೆ. ರಾಜ್ಯದ ವಿವಿಧ ಒಟ್ಟು72 ಸ್ಥಳಗಳಿಗೆ ಬಸ್ ಕಾರ್ಯಚರಣೆ ಮಾಡಲಾಗಿದೆ. ಅತ್ಯಧಿಕ ಬಸ್ಸುಗಳು ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು, ಸುರಪುರ ಮುಂತಾದ ಸ್ಥಳಗಳಿಗೆ ತೆರಳಿವೆ.

ವಿವಿಧ ಜಿಲ್ಲೆಗಳಿಂದಲೂ ಬಸ್

ವಿವಿಧ ಜಿಲ್ಲೆಗಳಿಂದಲೂ ಬಸ್

ಕೆಎಸ್ಆರ್‌ಟಿಸಿ ಬಸ್‌ಗಳು ಬೆಂಗಳೂರು ನಗರದಿಂದ ಮಾತ್ರ ಸಂಚಾರ ನಡೆಸಿಲ್ಲ. ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಿಂದ ಉಚಿತ ಬಸ್‌ಗಳು ಕಾರ್ಮಿಕರನ್ನು ಕರೆದುಕೊಂಡು ಹೋಗಿವೆ. ಬೆಂಗಳೂರು ನಗರದಿಂದ ಹೆಚ್ಚಿನ ಬಸ್‌ಗಳು ಸಂಚಾರ ನಡೆಸಿವೆ.

ಎಲ್ಲರಿಗೂ ಗೌರವ ಸಲ್ಲಿಕೆ

ಎಲ್ಲರಿಗೂ ಗೌರವ ಸಲ್ಲಿಕೆ

ಬುಧವಾರ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟಿದ್ದರು. ಕಾರ್ಮಿಕರನ್ನು ಸುರಕ್ಷಿತವಾಗಿ ತವರು ಜಿಲ್ಲೆಗೆ ತಲುಪಿಸುತ್ತಿರುವ ಮತ್ತು ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಪುಷ್ಪವೃಷ್ಟಿ ಮಾಡಿ ಗೌರವ ಸಲ್ಲಿಸಿದರು.

ಆರೋಗ್ಯ ತಪಾಸಣೆ ಕಡ್ಡಾಯ

ಆರೋಗ್ಯ ತಪಾಸಣೆ ಕಡ್ಡಾಯ

ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಸಂಚಾರ ನಡೆಸುವ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಕಡ್ಡಾಯವಾಗಿದೆ. ಬಸ್‌ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಕಾರ್ಮಿಕರು ತಮ್ಮ ಊರಿಗೆ ತೆರಳಿದಾಗ ಅಲ್ಲಿಯೂ ಸಹ ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಕೊರೊನಾ ಸೋಂಕು ಕಾರ್ಮಿಕರಿಂದ ಹಳ್ಳಿಗಳಲ್ಲಿ ಹಬ್ಬದಂತೆ ಕ್ರಮ ಕೈಗೊಳ್ಳಲಾಗಿದೆ.

English summary
Karnataka government allowed workers and poor wage labourers to travel in KSRTC buses free of charge from the district centers and Bengaluru to their hometowns. Free bus service may come end on May 6, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X