ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ದಿನದ ಸಂಬಳ ಕೊಡಗಿಗೆ ನೀಡಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 20: ಪ್ರವಾಹ ಪೀಡಿತ ಕೊಡಗಿನ ಜನರ ನೋವಿಗೆ ಸ್ಪಂದಿಸಿರುವ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ನೆರೆ ಪೀಡಿತ ಜನರಿಗಾಗಿ ಉದಾರ ನೆರವು ನೀಡಿದ್ದಾರೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ? ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳ ಎಲ್ಲ ಸಿಬ್ಬಂದಿ ತಮ್ಮ ಒಂದು ದಿನದ ಸಂಬಳವನ್ನು ಕೊಡಗಿನ ಸಹಾಯಕ್ಕೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ಕೊಡಗಿನ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಭರವಸೆಯ ಹೊಂಗಿರಣ ಕೊಡಗಿನ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಭರವಸೆಯ ಹೊಂಗಿರಣ

ಕೆಎಸ್‌ಆರಿಟಿಸಿಯ 1.16 ಲಕ್ಷ ಸಿಬ್ಬಂದಿಯ ಒಂದು ದಿನದ ವೇತನದ ಒಟ್ಟು ಮೊತ್ತ 11.80 ಕೋಟಿ ಆಗಲಿದೆ. ಈ ಬೃಹತ್ ಮೊತ್ತವನ್ನು ಅವರು ಪ್ರವಾಹ ಪೀಡಿತ ಕೊಡಗಿನ ಜನರ ಉಪಯೋಗಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

KSRTC employees give away there one day salary for help Kodagu

ಇತ್ತೀಚೆಗಷ್ಟೆ ಬಿಬಿಎಂಪಿ ಸದಸ್ಯರು ಸಹ ತಮ್ಮ ಒಂದು ತಿಂಗಳ ಸಂಬಳವನ್ನು ಕೊಡಗಿಗಾಗಿ ಕೊಟ್ಟಿದ್ದರು. ಅಲ್ಲದೆ ಬಿಬಿಎಂಪಿ ಸಿಬ್ಬಂದಿ ಸಹ ತಮ್ಮ ಒಂದು ದಿನದ ಸಂಬಳವನ್ನು ಕೊಡಗಿಗೆ ನೀಡಿದ್ದರು. ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಸಹ ತಮ್ಮ ಒಂದು ತಿಂಗಳ ಸಂಬಳವನ್ನು ಕೊಡಗಿಗೆ ನೀಡುವುದಾಗಿ ಹೇಳಿದ್ದಾರೆ.

ಪ್ರವಾಹ ಪೀಡಿತ ಕೊಡಗು, ಕೇರಳಕ್ಕೆ ತಲಾ 1.8 ಲಕ್ಷ ನೀಡಿದ ದೇವೇಗೌಡಪ್ರವಾಹ ಪೀಡಿತ ಕೊಡಗು, ಕೇರಳಕ್ಕೆ ತಲಾ 1.8 ಲಕ್ಷ ನೀಡಿದ ದೇವೇಗೌಡ

ಕಾಂಗ್ರೆಸ್‌ ಪಕ್ಷವು ದೇಶದಾದ್ಯಂತ ತನ್ನ ಪಕ್ಷದ ಶಾಸಕರ, ಸಂಸದರ, ಪರಿಷತ್, ರಾಜ್ಯಸಭಾ ಸದಸ್ಯರ ಒಂದು ತಿಂಗಳ ಸಂಬಳವನ್ನು ಕೇರಳಕ್ಕೆ ನೀಡುತ್ತಿದೆ.

English summary
KSRTC's 1.60 lakh employees give away there one day salary total 11.80 crore rupees to help Kodagu flood victims. KSRTC giving there salary amount to CM relief account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X