ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಾಲ್ಕು ಮಾರ್ಗಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಬಸ್‌ಗಳು ರಸ್ತೆಗೆ ಇಳಿಯಲಿವೆ.

ಶೇ 100ರಷ್ಟು ಚಾರ್ಜ್ ಮಾಡಿದ ಬಸ್‌ಗಳು ಬೆಂಗಳೂರು ನಗರದಿಂದ 250 ಕಿ. ಮೀ. ದೂರವಿರುವ ನಗರಗಳಿಗೆ ಸಂಚಾರ ನಡೆಸಲಿವೆ. ಪ್ರಾಯೋಗಿಕವಾಗಿ 4 ಮಾರ್ಗಗಳಲ್ಲಿ 2020ರ ಫೆಬ್ರವರಿಯಿಂದ ಬಸ್‌ಗಳು ಸಂಚಾರ ನಡೆಸುವ ನಿರೀಕ್ಷೆ ಇದೆ.

ಕೆಎಸ್‌ಆರ್‌ಟಿಸಿಯ ಡಬಲ್ ಡೆಕ್ಕರ್ ಬಸ್ ರಸ್ತೆಗಿಳಿಯುವುದು ಯಾವಾಗ? ಕೆಎಸ್‌ಆರ್‌ಟಿಸಿಯ ಡಬಲ್ ಡೆಕ್ಕರ್ ಬಸ್ ರಸ್ತೆಗಿಳಿಯುವುದು ಯಾವಾಗ?

ಬಸ್ ಹೊರಡುವ ಮತ್ತು ತಲುಪುವ ಸ್ಥಳದಲ್ಲಿ ಎರಡು ಚಾರ್ಜಿಂಗ್ ಪಾಯಿಂಟ್‌ಗಳು ಇರುತ್ತವೆ. ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಬಸ್‌ ಚಾರ್ಜ್ ಮಾಡಲು ಯಾವುದೇ ವ್ಯವಸ್ಥೆ ಇರುವುದಿಲ್ಲ ಎಂದು ಕೆಎಸ್ಆರ್‌ಟಿಸಿ ಹೇಳಿದೆ.

ಬಿಎಂಟಿಸಿ ಬಸ್‌ನಲ್ಲಿ ಹಾಡು ಕೇಳುವಂತಿಲ್ಲ; ಬಂತು ಸುತ್ತೋಲೆ ಬಿಎಂಟಿಸಿ ಬಸ್‌ನಲ್ಲಿ ಹಾಡು ಕೇಳುವಂತಿಲ್ಲ; ಬಂತು ಸುತ್ತೋಲೆ

ಕೆಎಸ್ಆರ್ 400 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿ ಮಾಡಲು ಟೆಂಡರ್ ಕರೆದಿದೆ. ಕೇಂದ್ರ ಸರ್ಕಾರದ ನಿಯಮದಂತೆ ಇವುಗಳಲ್ಲಿ 300 ಬಸ್ ಬಿಎಂಟಿಸಿಗೆ, 50 ಕೆಎಸ್ಆರ್‌ಟಿಸಿಗೆ ಮತ್ತು 50 ಬಸ್‌ಗಳು NWKRTCಗೆ ಹಂಚಿಕೆ ಮಾಡಲಾಗುತ್ತದೆ.

ಕೇಂದ್ರದಿಂದ ಬೆಂಗಳೂರಿಗೆ 300 ಎಲೆಕ್ಟ್ರಿಕ್ ಬಸ್ ಕೊಡುಗೆ?ಕೇಂದ್ರದಿಂದ ಬೆಂಗಳೂರಿಗೆ 300 ಎಲೆಕ್ಟ್ರಿಕ್ ಬಸ್ ಕೊಡುಗೆ?

4 ಮಾರ್ಗಗಳು ಅಂತಿಮ

4 ಮಾರ್ಗಗಳು ಅಂತಿಮ

ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ ಸಂಚಾರ ನಡೆಸುವ 4 ಮಾರ್ಗಗಳನ್ನು ಅಂತಿಮಗೊಳಿಸಿದೆ. ಬೆಂಗಳೂರಿನಿಂದ ಹೊರಡುವ ಬಸ್‌ಗಳು ನಾಲ್ಕು ನಗರ ತಲುಪಲಿವೆ.

* ಬೆಂಗಳೂರು-ಮೈಸೂರು
* ಬೆಂಗಳೂರು-ದಾವಣಗೆರೆ
* ಬೆಂಗಳೂರು-ತುಮಕೂರು
* ಬೆಂಗಳೂರು- ಶಿವಮೊಗ್ಗ

250 ಕಿ.ಮೀ. ಸಂಚಾರ

250 ಕಿ.ಮೀ. ಸಂಚಾರ

Olectra ಕಂಪನಿ ತಯಾರಿಸಿರುವ ಬಸ್‌ಗಳು 100ರಷ್ಟು ಚಾರ್ಜ್ ಮಾಡಿದರೆ 250 ಕಿ. ಮೀ. ಸಂಚಾರ ನಡೆಸಲಿವೆ. ಬೆಂಗಳೂರು ಮತ್ತು ಬಸ್ ತಲುಪುವ ಅಂತಿಮ ನಿಲ್ದಾಣದಲ್ಲಿ ಮಾತ್ರ ಚಾರ್ಜಿಂಗ್ ವ್ಯವಸ್ಥೆ ಇರಲಿವೆ. 100ರಷ್ಟು ಚಾರ್ಜ್ ಆಗಿದೆ ಎಂದು ಖಾತ್ರಿ ಪಡಿಸಿಕೊಂಡ ಬಳಿಕವೇ ಬಸ್ ಹೊರಡಲಿದೆ.
ಒಮ್ಮೆ ಬಸ್ ಸಂಪೂರ್ಣ ಚಾರ್ಜ್ ಆಗಲಿ 4 ರಿಂದ 5 ಗಂಟೆ ಬೇಕಾಗುತ್ತದೆ.

ಪ್ರಯಾಣ ದರ ಎಷ್ಟಿರುತ್ತದೆ?

ಪ್ರಯಾಣ ದರ ಎಷ್ಟಿರುತ್ತದೆ?

ಕೆಎಸ್ಆರ್‌ಟಿಸಿಯಲ್ಲಿರುವ ಐರಾವತ ವೋಲ್ವೊ ಬಸ್ ಹಳೆಯದಾಗಿವೆ. ಈಗ ಖರೀದಿ ಮಾಡುತ್ತಿರುವ ಎಲೆಕ್ಟ್ರಿಕ್ ಬಸ್‌ಗಳಿಂದ ಇವುಗಳನ್ನು ಬದಲಾವಣೆ ಮಾಡಲಾಗುತ್ತದೆ. ವೋಲ್ವೊ ಬಸ್‌ ಪ್ರಯಾಣ ದರವೇ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಇರುತ್ತದೆ.

ಶಾಂತಿನಗರ ಬಸ್ ನಿಲ್ದಾಣ

ಶಾಂತಿನಗರ ಬಸ್ ನಿಲ್ದಾಣ

ಸದ್ಯಕ್ಕೆ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಬಸ್ ಚಾರ್ಜಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. 2020ರ ಫೆಬ್ರವರಿ ಅಥವ ಮಾರ್ಚ್ ವೇಳೆಗೆ ಎಲೆಕ್ಟ್ರಿಕ್ ಬಸ್ ರಸ್ತೆಗೆ ಇಳಿಯುವ ನಿರೀಕ್ಷೆ ಇದೆ.

English summary
Karnataka State Road Transport Corporation (KSRTC) all set to run electric buses. Corporation finalized 4 routes. Bus will run 250 km with full charge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X