ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಪಂಪಾ ಸರ್ಕಾರಿ ಬಸ್ ವೇಳಾಪಟ್ಟಿ, ದರ

|
Google Oneindia Kannada News

ಬೆಂಗಳೂರು, ನವೆಂಬರ್ 23 : ಕೆಎಸ್ಆರ್ ಬೆಂಗಳೂರು-ಪಂಪಾ ಮಾರ್ಗದಲ್ಲಿ ರಾಜಹಂಸ ಹಾಗೂ ವೋಲ್ವೋ ಬಸ್ ಸೇವೆಯನ್ನು ಆರಂಭಿಸಲಿದೆ. ಡಿಸೆಂಬರ್ 1ರಿಂದ ಈ ಮಾರ್ಗದಲ್ಲಿ ಬಸ್‌ಗಳು ಸಂಚಾರ ನಡೆಸಲಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ಕೇಂದ್ರ ವಿಭಾಗದ ವತಿಯಿಂದ ಈ ಬಸ್ ಸೇವೆ ಆರಂಭಿಸಲಾಗುತ್ತಿದೆ. ಬೆಂಗಳೂರು-ಪಂಪಾ (ಶಬರಿಮಲೈ) ಮಾರ್ಗದಲ್ಲಿ ಹೊಸದಾಗಿ ಐಷಾರಾಮಿ ಬಸ್‌ಗಳು ಸಂಚಾರ ನಡೆಸುತ್ತವೆ.

ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು

ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಪಂಪಾಗೆ ರಾಜಹಂಸ ಮತ್ತು ವೋಲ್ವೋ ಬಸ್‌ಗಳು ಸಂಚಾರ ನಡೆಸಲಿವೆ. ರಾಜಹಂಸ ಬಸ್‌ನಲ್ಲಿ 940 ರೂ.ಗಳು, ವೋಲ್ವೋ ಬಸ್‌ಗಳಲ್ಲಿ 1250 ರೂ. ಗಳ ಪ್ರಯಾಣ ದರವನ್ನು ವಯಸ್ಕರಿಗೆ ನಿಗದಿ ಮಾಡಲಾಗಿದೆ.

ಬೆಂ-ಹೈದರಾಬಾದ್‌ ನಡುವೆ ಹೊಸ ಬಸ್ ಘೋಷಿಸಿದ ಕೆಎಸ್ಆರ್‌ಟಿಸಿ ಬೆಂ-ಹೈದರಾಬಾದ್‌ ನಡುವೆ ಹೊಸ ಬಸ್ ಘೋಷಿಸಿದ ಕೆಎಸ್ಆರ್‌ಟಿಸಿ

KSRTC

ವೇಳಾಪಟ್ಟಿ ಇಲ್ಲಿದೆ....

* ಬೆಂಗಳೂರು-ಪಂಪಾ (ರಾಜಹಂಸ) : ಶಾಂತಿನಗರದಿಂದ ಹೊರಡುವ ಸಮಯ ಮಧ್ಯಾಹ್ನ 1 ಗಂಟೆ, ಪಂಪಾ ತಲುಪುವ ಸಮಯ 8.15. ಪಂಪಾದಿಂದ 5ಗಂಟೆಗೆ ಹೊರಡಲಿರುವ ಬಸ್ ರಾತ್ರಿ 12 ಗಂಟೆಗೆ ಬೆಂಗಳೂರು ತಲುಪಲಿದೆ.

4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ 4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ

* ಬೆಂಗಳೂರು-ಪಂಪಾ (ವೋಲ್ವೋ) : ಶಾಂತಿನಗರದಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ಬಸ್ ಪಂಪಾಗೆ 6.45ಕ್ಕೆ ತಲುಪಲಿದೆ. ಪಂಪಾದಿಂದ 6 ಗಂಟೆಗೆ ಹೊರಡುವ ಬಸ್ 9.45ಕ್ಕೆ ಬೆಂಗಳೂರು ತಲುಪಲಿದೆ.

ಕಳೆದ ವರ್ಷ ಕೆಎಸ್ಆರ್‌ಟಿಸಿ ಬೆಂಗಳೂರಿನಿಂದ ಪಂಪಾಗೆ ಪ್ರಾಯೊಗಿಕವಾಗಿ ಬಸ್ ಸಂಚಾರ ಆರಂಭಿಸಿತ್ತು.ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು ಆದ್ದರಿಂದ, ಈ ವರ್ಷ ಐಷಾರಾಮಿ ಬಸ್‌ಗಳನ್ನು ಓಡಿಸುತ್ತಿದೆ.

English summary
Karnataka State Road Transport Corporation (KSRTC) will run Rajaamsa and Volvo bus service to Pampa from December 1, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X