ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KSRTC ಬಸ್ ಸಂಚಾರದಲ್ಲಿ ಪ್ರಮುಖ ಬದಲಾವಣೆ: ಮಾಹಿತಿ ಇಲ್ಲಿದೆ

|
Google Oneindia Kannada News

ಬೆಂಗಳೂರು, ಮೇ 20: ಕರ್ನಾಟಕದಲ್ಲಿ ನಿನ್ನೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಗೊಂಡಿದೆ. 55 ದಿನಗಳ ಬಳಿಕ ಕೆ.ಎಸ್.ಆರ್.ಟಿ.ಸಿ ಬಸ್ ಗಳು ರಸ್ತೆಗಿಳಿದಿದ್ದು, ಜಿಲ್ಲೆಯಿಂದ ಜಿಲ್ಲೆಗೆ ಜನರ ಪ್ರಯಾಣ ಪ್ರಾರಂಭವಾಗಿದೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 7 ರವರೆಗೆ ಸಂಚಾರಕ್ಕೆ ಅವಕಾಶ ಇರುವುದರಿಂದ, ಸಂಜೆ 7 ಗಂಟೆಯೊಳಗೆ ಬಸ್ ಗಳು ಡೆಸ್ಟಿನೇಷನ್ ತಲುಪಬೇಕಿತ್ತು. ಸಂಜೆ 7 ಗಂಟೆಯೊಳಗೆ ಡೆಸ್ಟಿನೇಷನ್ ತಲುಪುವ ಹಾಗೆ ಬೆಂಗಳೂರಿನಿಂದ ಹೊರಡುವ ಕಡೆಯ ಬಸ್ ಗಳ ಸಮಯ ಮತ್ತು ಮಾರ್ಗದ ವಿವರಗಳನ್ನು ನಿನ್ನೆಯಷ್ಟೇ ಕೆ.ಎಸ್.ಆರ್.ಟಿ.ಸಿ ನೀಡಿತ್ತು.

KSRTC: ಬೆಂಗಳೂರಿನಿಂದ ಹೊರಡುವ ಕಡೆಯ ಬಸ್ ಗಳ ಸಮಯ ಮತ್ತು ವಿವರKSRTC: ಬೆಂಗಳೂರಿನಿಂದ ಹೊರಡುವ ಕಡೆಯ ಬಸ್ ಗಳ ಸಮಯ ಮತ್ತು ವಿವರ

ಆದ್ರೀಗ, ಇದೇ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಇಂದಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಕಾರ್ಯಾಚರಣೆ ಸಮಯವನ್ನು ಸಂಜೆ 7 ಗಂಟೆಯವರೆಗೆ ವಿಸ್ತರಿಸಲಾಗಿದೆ.

ಸಂಜೆ 7 ಗಂಟೆಗೆ ಕೊನೆಯ ಬಸ್.!

ಸಂಜೆ 7 ಗಂಟೆಗೆ ಕೊನೆಯ ಬಸ್.!

ಕರ್ನಾಟಕ ರಾಜ್ಯದ ವಿವಿಧ ಜಿಲ್ಲಾ ಸ್ಥಳಗಳಿಗೆ ಕೆ.ಎಸ್.ಆರ್.ಟಿ.ಸಿ ಸಾರಿಗೆಯ ಕಡೆಯ ವಾಹನ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಡಲಿದೆ.

ಉದಾಹರಣೆ: ಕಲಬುರಗಿಯ ಕೊನೆಯ ಬಸ್ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟು, ಮಾರನೇ ದಿನ ಬೆಳಗ್ಗೆ ಕಲಬುರಗಿ ತಲುಪುತ್ತದೆ.

ಎಲ್ಲಾ ಸ್ಥಳಗಳಿಗೂ ಅನ್ವಯ

ಎಲ್ಲಾ ಸ್ಥಳಗಳಿಗೂ ಅನ್ವಯ

ಜನ ಮತ್ತು ಆನ್ ಲೈನ್ ಬುಕ್ಕಿಂಗ್ ಆಧಾರದ ಮೇಲೆ ಈ ಹೊಸ ನಿಯಮ ಎಲ್ಲಾ ಸ್ಥಳಗಳಿಗೆ ಕಾರ್ಯಾಚರಣೆಯಾಗುವ ಬಸ್ ಗಳಿಗೆ ಅನ್ವಯಿಸುತ್ತದೆ (ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಿಂದ ಕಾರ್ಯಾಚರಣೆಯಾಗುವ ಬಸ್ ಗೂ ಸೇರಿದಂತೆ)

ಮುಂದಿನ ಆದೇಶದವರೆಗೂ ಬಸ್ ಗಳ ಕಾರ್ಯಾಚರಣೆ ಇದೇ ರೀತಿ ಮುಂದುವರೆಯಲಿದೆ.

KSRTC ಸಂಚಾರ: 'ಈ' ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ಕಿಂಗ್ ಪ್ರಾರಂಭKSRTC ಸಂಚಾರ: 'ಈ' ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ಕಿಂಗ್ ಪ್ರಾರಂಭ

ಇಂದು 2 ಸಾವಿರ ಬಸ್

ಇಂದು 2 ಸಾವಿರ ಬಸ್

ಇಂದು ಒಟ್ಟು 2000 ಬಸ್ ಗಳನ್ನು ನಿಗಮದ ವ್ಯಾಪ್ತಿಯ ವಿಭಾಗಗಳಿಂದ ಕಾರ್ಯಾಚರಣೆಗೊಳ್ಳಲಿದೆ. ಬೆಂಗಳೂರಿನಿಂದ 400 (300 ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ + 100 ಬಸ್ ಮೈಸೂರು ರಸ್ತೆ ಬಸ್‌ ನಿಲ್ದಾಣದಿಂದ)

ಇಂದು ಸಂಜೆ 7 ಗಂಟೆಯವರೆಗೆ ಬಸ್ ಗಳ ಕಾರ್ಯಚರಣೆ ಇರಲಿದೆ.

ನಿನ್ನೆ ಪ್ರಯಾಣ ಮಾಡಿದವರೆಷ್ಟು.?

ನಿನ್ನೆ ಪ್ರಯಾಣ ಮಾಡಿದವರೆಷ್ಟು.?

ನಿನ್ನೆ ಒಂದೇ ದಿನ 1606 ಬಸ್ ಗಳು ಸಂಚಾರ ನಡೆಸಿದ್ದು, ಒಟ್ಟು 53,506 ಮಂದಿ ಪ್ರಯಾಣಿಸಿದ್ದಾರೆ. ನಿನ್ನೆ ಬೆಂಗಳೂರಿನಿಂದ 213 ಬಸ್ ಗಳು ಹಾಗೂ 6000 ಪ್ರಯಾಣಿಕರು ರಾಜ್ಯದ ವಿವಿಧ ಜಿಲ್ಲೆಗಳಾದ ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ, ದಾವಣಗೆರೆ, ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ರಾಯಚೂರು, ಹೊಸಪೇಟೆ, ಕಲಬುರಗಿ, ಚಿಕ್ಕಮಗಳೂರು, ಮಡಿಕೇರಿಗೆ ಪ್ರಯಾಣಿಸಿದ್ದಾರೆ.

ಬಸ್ ಸಂಚಾರ ಆರಂಭ; ಮೊದಲ ದಿನ ಸಂಚಾರ ನಡೆಸಿದವರೆಷ್ಟು?ಬಸ್ ಸಂಚಾರ ಆರಂಭ; ಮೊದಲ ದಿನ ಸಂಚಾರ ನಡೆಸಿದವರೆಷ್ಟು?

English summary
Coronavirus Lockdown 4: KSRTC bus operation extended upto 7 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X