ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾಸ್‌ಟ್ಯಾಗ್ ಕಡ್ಡಾಯ; ಕೆಎಸ್ಆರ್‌ಟಿಸಿ, ಬಿಎಂಟಿಸಿ ಕಥೆ ಏನು?

|
Google Oneindia Kannada News

ಬೆಂಗಳೂರು, ನವೆಂಬರ್ 29 : ದೇಶಾದ್ಯಂತ ಡಿಸೆಂಬರ್ 1ರಿಂದ ಟೋಲ್ ಬೂತ್‌ಗಳಲ್ಲಿ ಫಾಸ್‌ಟ್ಯಾಗ್ ಕಡ್ಡಾಯವಾಗಲಿದೆ. ಆದರೆ, ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಎರಡು ತಿಂಗಳ ಕಾಲ ಈ ಗಡುವನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಿವೆ.

ಫಾಸ್‌ಟ್ಯಾಗ್ (FASTag) ಬಳಕೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇನ್ನೂ ಸಿದ್ಧವಾಗಿಲ್ಲ. ಆದ್ದರಿಂದ, ಎರಡು ತಿಂಗಳು ಕಾಲಾವಕಾಶ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಡಿ.1ರಿಂದ ಫಾಸ್ಟ್‌ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಬೇಕು ಡಿ.1ರಿಂದ ಫಾಸ್ಟ್‌ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಬೇಕು

ಬಿಎಂಟಿಸಿಯ 450 ಬಸ್‌ಗಳು ಪ್ರತಿದಿನ ಟೋಲ್ ಪ್ಲಾಜಾ ಮೂಲಕ ಹಾದು ಹೋಗುತ್ತವೆ. ಪ್ರತಿ ತಿಂಗಳು ಸಂಸ್ಥೆ 62.9 ಲಕ್ಷ ರೂ.ಗಳನ್ನು ಟೋಲ್‌ಗಾಗಿ ಪಾವತಿ ಮಾಡುತ್ತದೆ. ಆದರೆ, ಈಗ ಡಿಸೆಂಬರ್ 1ರಿಂದ ಫಾಸ್ ಟ್ಯಾಗ್ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿದೆ.

ಮೋದಿ ಸರ್ಕಾರ್ 2.0: ಹೆದ್ದಾರಿ 'ಟೋಲ್' ವ್ಯವಸ್ಥೆಯಲ್ಲಿ ನೋ 'ಚೇಂಜ್' ಮೋದಿ ಸರ್ಕಾರ್ 2.0: ಹೆದ್ದಾರಿ 'ಟೋಲ್' ವ್ಯವಸ್ಥೆಯಲ್ಲಿ ನೋ 'ಚೇಂಜ್'

KSRTC BMTC Seeks Time To Install FASTag

4,170 ಕೆಎಸ್ಆರ್ ಬಸ್‌ಗಳು 81 ಟೋಲ್ ಪ್ಲಾಜಾ ಮೂಲಕ ಪ್ರತಿದಿನ ಸಂಚಾರ ನಡೆಸುತ್ತವೆ. ಇದರಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳು ಸೇರಿವೆ.

ಜುಲೈ 1 ರಿಂದ ಎಲೆಕ್ಟ್ರಾನಿಕ್ಸ್‌ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ ಜುಲೈ 1 ರಿಂದ ಎಲೆಕ್ಟ್ರಾನಿಕ್ಸ್‌ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ

ಕೆಎಸ್ಆರ್‌ಟಿಸಿ ಪ್ರತಿ ತಿಂಗಳು 6 ಕೋಟಿಯನ್ನು ಟೋಲ್‌ಗಾಗಿ ಖರ್ಚು ಮಾಡುತ್ತದೆ. ಬಸ್‌ಗಳಿಗೆ ಫಾಸ್ ಟ್ಯಾಗ್ ಅಳವಡಿಸುವ ಕುರಿತು ಚರ್ಚೆ ನಡೆಯುತ್ತಿದೆ. ಎರಡು ತಿಂಗಳು ಕಾಲಾವಕಾಶ ನೀಡುವಂತೆ ಎನ್‌ಎಚ್‌ಎಐಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2017ರಲ್ಲಿ ಕೆಎಸ್ಆರ್‌ಟಿಸಿ ಬಸ್ ಟೋಲ್‌ ಗೇಟ್‌ನಲ್ಲಿ ಕಾಯುವ ಸಮಯ ಕಡಿಮೆ ಮಾಡಲು 5 ಸಾವಿರ ಬಸ್‌ಗಳಿಗೆ ಫಾಸ್‌ಟ್ಯಾಗ್ ಪಡೆದಿತ್ತು. ಖಾಸಗಿ ಬ್ಯಾಂಕ್ ಜೊತೆ ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಟೋಲ್ ಶುಲ್ಕ ಹೆಚ್ಚಾದ ಕಾರಣ ಇದನ್ನು ವಾಪಸ್ ಪಡೆಯಲಾಯಿತು.

ಈಗ ಎಲ್ಲಾ ಹೆದ್ದಾರಿಗಳಲ್ಲಿ ಡಿಸೆಂಬರ್ 1ರಿಂದ ಫಾಸ್‌ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ತನ್ನ ಬಸ್‌ಗಳಿಗೆ ಟ್ಯಾಗ್ ಅಳವಡಿಕೆ ಮಾಡುವುದು ಅನಿವಾರ್ಯವಾಗಿದೆ.

English summary
KSRTC and BMTC need two months time to install FASTag for the bus. FASTag becoming mandatory for all vehicles at toll from December 1, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X