ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಪ್ರವಾಸಿ ಪ್ಯಾಕೇಜ್ ಘೋಷಿಸಿದ ಕೆಎಸ್‌ಆರ್‌ಟಿಸಿ; ವಿವರಗಳು

|
Google Oneindia Kannada News

ಬೆಂಗಳೂರು, ಜುಲೈ 29; ಲಾಕ್‌ಡೌನ್ ಅವಧಿಯಲ್ಲಾದ ನಷ್ಟವನ್ನು ತುಂಬಿಕೊಳ್ಳಲು ಕೆಎಸ್ಆರ್‌ಟಿಸಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಪ್ರವಾಸ ಹೋಗುವ ಜನರಿಗಾಗಿ ಮೂರು ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ.

ಬೆಂಗಳೂರು-ಜೋಗ, ಬೆಂಗಳೂರು-ಸಿಗಂದೂರು-ಜೋಗ, ಬೆಂಗಳೂರು-ಚಿತ್ರದುರ್ಗ-ವಾಣಿ ವಿಲಾಸ ಸಾಗರ ಪ್ಯಾಕೇಜ್ ಘೋಷಣೆ ಮಾಡಿದೆ. ಜುಲೈ 30ರಿಂದ ಪ್ಯಾಕೇಜ್‌ ಬಸ್‌ಗಳು ಸಂಚಾರ ನಡೆಸಲಿವೆ.

ಬೆಂಗಳೂರಿಗೆ ಹಣ್ಣು, ತರಕಾರಿ ಹೊತ್ತು ತರಲಿವೆ ಸರ್ಕಾರಿ ಬಸ್!ಬೆಂಗಳೂರಿಗೆ ಹಣ್ಣು, ತರಕಾರಿ ಹೊತ್ತು ತರಲಿವೆ ಸರ್ಕಾರಿ ಬಸ್!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ ಸೇರಿದಂತೆ ವಿವಿಧ ವಿಭಾಗದ ವತಿಯಿಂದ ಪ್ರತಿನಿತ್ಯ ಹಾಗೂ ವಾರಂತ್ಯಗಳ ಪ್ರವಾಸಿ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಲಾಗಿದೆ.

ಜೋಗ ವೀಕ್ಷಣೆಗೆ ಬಂದವರಿಗೆ ಇವತ್ತು ನಿರಾಸೆ, ರಾಜ, ರಾಣಿ, ರೋರರ್, ರಾಕೆಟ್ ನಾಪತ್ತೆ ಜೋಗ ವೀಕ್ಷಣೆಗೆ ಬಂದವರಿಗೆ ಇವತ್ತು ನಿರಾಸೆ, ರಾಜ, ರಾಣಿ, ರೋರರ್, ರಾಕೆಟ್ ನಾಪತ್ತೆ

ಅನ್‌ಲಾಕ್ ಘೋಷಣೆಯಾದ ಮೇಲೆ ಸಂಚಾರ ನಡೆಸುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಜನರು ಹೆಚ್ಚಾಗಿ ಪ್ರವಾಸ ಹೋಗುತ್ತಾರೆ. ಆದ್ದರಿಂದ ಕೆಎಸ್ಆರ್‌ಟಿಸಿ ಹಲವಾರು ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಿದೆ.

ಬೆಂಗಳೂರು-ತಿರುಪತಿ ಪ್ಯಾಕೇಜ್ ಮತ್ತೆ ಆರಂಭ; ದರಪಟ್ಟಿ ಬೆಂಗಳೂರು-ತಿರುಪತಿ ಪ್ಯಾಕೇಜ್ ಮತ್ತೆ ಆರಂಭ; ದರಪಟ್ಟಿ

ಕೆಎಸ್ಆರ್‌ಟಿಸಿ ಕೆಲವು ದಿನಗಳ ಹಿಂದೆ ತಿರುಪತಿಗೆ ಹೋಗುವ ಭಕ್ತರಿಗಾಗಿ ಬೆಂಗಳೂರು-ತಿರುಪತಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಈಗ ಮತ್ತಷ್ಟು ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ.

ಬೆಂಗಳೂರು-ಜೋಗ ಪ್ಯಾಕೇಜ್

ಬೆಂಗಳೂರು-ಜೋಗ ಪ್ಯಾಕೇಜ್

ಬೆಂಗಳೂರು-ಜೋಗ ಪ್ರವಾಸಿ ಪ್ಯಾಕೇಜ್‌ನಲ್ಲಿ ಎಸಿ ರಹಿತ ಸ್ಲೀಪರ್, ರಾಜಹಂಸ ಬಸ್‌ಗಳಲ್ಲಿ ಸಂಚಾರ ನಡೆಸಬಹುದು. ರಾತ್ರಿ ಬೆಂಗಳೂರಿನಿಂದ ಹೊರಟು ಸಾಗರದಲ್ಲಿ ವಿಶ್ರಾಂತಿ, ಉಪಹಾರವಿದೆ. ಬಳಿಕ ವರದಹಳ್ಳಿ, ಇಕ್ಕೇರಿ, ಕೆಳದಿ, ಜೋಗ ವೀಕ್ಷಣೆ. ರಾತ್ರಿ ಸಾಗರದಿಂದ ಹೊರಟು ಬೆಳಗ್ಗೆ ಬೆಂಗಳೂರಿಗೆ ವಾಪಸ್.
ಸ್ಲೀಪರ್‌ನಲ್ಲಿ ವಯಸ್ಕರಿಗೆ 2,200 ರೂ. ಮತ್ತು ಮಕ್ಕಳಿಗೆ 2 ಸಾವಿರ ದರವಿದೆ. ರಾಜಹಂಸ ಬಸ್‌ನಲ್ಲಿ ವಯಸ್ಕರಿಗೆ 2 ಸಾವಿರ ಮತ್ತು ಮಕ್ಕಳಿಗೆ 1,700 ರೂ. ದರ ನಿಗದಿ ಮಾಡಲಾಗಿದೆ.

ಬೆಂಗಳೂರು-ಸಿಗಂದೂರು-ಜೋಗ

ಬೆಂಗಳೂರು-ಸಿಗಂದೂರು-ಜೋಗ

ಬೆಂಗಳೂರು-ಸಿಗಂದೂರು-ಜೋಗ ಪ್ಯಾಕೇಜ್‌ನಲ್ಲಿ ಐರಾವತ ಕ್ಲಬ್ ಕ್ಲಾಸ್‌ ಬಸ್‌ನಲ್ಲಿ ಸಂಚಾರ ಮಾಡಬಹುದು. ರಾತ್ರಿ ಬೆಂಗಳೂರಿನಿಂದ ಹೊರಟು ಸಾಗರದಲ್ಲಿ ಉಪಹಾರ ಸೇವನೆ. ಸಿಗಂದೂರು, ಜೋಗ ವೀಕ್ಷಣೆ ಮಾಡಿ ರಾತ್ರಿ ಸಾಗರದಿಂದ ಹೊರಟರೆ ಬೆಳಗ್ಗೆ ಬೆಂಗಳೂರಿಗೆ ವಾಪಸ್. ವಯಸ್ಕರಿಗೆ 2,500 ರೂ. ಮತ್ತು ಮಕ್ಕಳಿಗೆ 2,300 ರೂ. ದರವನ್ನು ನಿಗದಿ ಮಾಡಲಾಗಿದೆ.

ಬೆಂಗಳೂರು-ಚಿತ್ರದುರ್ಗ-ವಾಣಿ ವಿಲಾಸ ಸಾಗರ ಪ್ಯಾಕೇಜ್

ಬೆಂಗಳೂರು-ಚಿತ್ರದುರ್ಗ-ವಾಣಿ ವಿಲಾಸ ಸಾಗರ ಪ್ಯಾಕೇಜ್

ಈ ಪ್ಯಾಕೇಜ್‌ನಲ್ಲಿ ಕರ್ನಾಟಕ ಸಾರಿಗೆ, ರಾಜಹಂಸ ಮತ್ತು ಐರಾವತ ಬಸ್ ಸಂಚಾರ ನಡೆಸಲಿದೆ. ಬೆಳಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು ಚಿತ್ರದುರ್ಗದಲ್ಲಿ ಉಪಹಾರ. ಬಳಿಕ ಚಂದವಳ್ಳಿಯ ತೋಟ, ಚಿತ್ರದುರ್ಗ ಕೋಟೆ, ವಾಣಿ ವಿಲಾಸ ಸಾಗರ ಡ್ಯಾಂ ಭೇಟಿ. ರಾತ್ರಿ 9ಕ್ಕೆ ಬೆಂಗಳೂರಿಗೆ ವಾಪಸ್. ಬೇರೆ ಬೇರೆ ಬಸ್‌ಗಳಲ್ಲಿ ಬೇರೆ ಬೇರೆ ದರವಿದೆ.

Recommended Video

B S Yediyurappa ಮುಂದೆ ಮೂರನೇ ಬಾರಿ ಮಂಡಿಯೂರಿದ ಹೈಕಮಾಂಡ್ | Oneindia Kannada
ದಾವಣಗೆರೆ-ಹಂಪಿ ಪ್ಯಾಕೇಜ್

ದಾವಣಗೆರೆ-ಹಂಪಿ ಪ್ಯಾಕೇಜ್

ಕೆಎಸ್ಆರ್‌ಟಿಸಿ ದಾವಣಗೆರೆ ವಿಭಾಗ ದಾವಣಗೆರೆ-ಹಂಪಿ ಪ್ಯಾಕೇಜ್ ಆರಂಭಿಸಿದೆ. ಪ್ರತಿ ಭಾನುವಾರ ಬೆಳಗ್ಗೆ 7ಕ್ಕೆ ದಾವಣಗೆರೆಯಿಂದ ಹೊರಡುವ ಬಸ್ ಹೊಸಪೇಟೆ, ಹಂಪಿ, ಕಮಲಾಪುರ, ಹುಲಿಗಿ ದೇವಸ್ಥಾನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ರಾತ್ರಿ 9 ಗಂಟೆಗೆ ದಾವಣಗೆರೆಗೆ ವಾಪಸ್ ಆಗಲಿದೆ. ಪ್ರಯಾಣ ದರ ರೂ. 500 ಆಗಿದೆ.

English summary
Karnataka State Road Transport Corporation (KSRTC) announced 3 tourist package from Bengaluru. Package bus will run from July 30, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X