ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮಗಳಲ್ಲಿ ವ್ಯಾಕ್ಸಿನ್ ನೀಡಲು ಸರ್ಕಾರಿ ಬಸ್ ಬಾಡಿಗೆಗೆ ಲಭ್ಯ

|
Google Oneindia Kannada News

ಬೆಂಗಳೂರು, ಮೇ 30; ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಜೂನ್ 7ರ ತನಕ ಲಾಕ್‌ಡೌನ್ ಜಾರಿಯಲ್ಲಿರಲಿದ್ದು, ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ಕೆಎಸ್ಆರ್‌ಟಿಸಿ ಆರೋಗ್ಯ ಇಲಾಖೆಯ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಕೋವಿಡ್ ಲಸಿಕೆ ನೀಡಲು ಬಸ್‌ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ವಿವಿಧ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಬಸ್‌ಗಳನ್ನು ಬಾಡಿಗೆಗೆ ಪಡೆಯಬಹುದು.

ರಾಜ್ಯದಲ್ಲಿ ಲಸಿಕೆ ಹಗರಣ; ಹೈಕೋರ್ಟ್ ಮಧ್ಯ ಪ್ರವೇಶಕ್ಕೆ ಡಿಕೆಶಿ ಮನವಿರಾಜ್ಯದಲ್ಲಿ ಲಸಿಕೆ ಹಗರಣ; ಹೈಕೋರ್ಟ್ ಮಧ್ಯ ಪ್ರವೇಶಕ್ಕೆ ಡಿಕೆಶಿ ಮನವಿ

ಬಸ್‌ಗಳನ್ನು ಬಾಡಿಗೆ ಪಡೆಯಲು ಕೆಲವು ರಿಯಾಯಿತಿಗಳನ್ನು ಘೋಷಣೆ ಮಾಡಿದೆ. ಸಾಮಾಜಿ ಹೊಣೆಗಾರಿಕೆ/ ಸಾರ್ವಜನಿಕ ಹಿತದೃಷ್ಟಿಯನ್ನು ಗಮದಲ್ಲಿಟ್ಟುಕೊಂಡು ರಿಯಾಯಿತಿಗಳನ್ನು ನೀಡಲಾಗಿದೆ.

ಒಂದೇ ವ್ಯಕ್ತಿ 2 ಪ್ರತ್ಯೇಕ ಕೊರೊನಾ ಲಸಿಕೆ ಪಡೆದರೆ ಆಗುವ ಪರಿಣಾಮವೇನು?ಒಂದೇ ವ್ಯಕ್ತಿ 2 ಪ್ರತ್ಯೇಕ ಕೊರೊನಾ ಲಸಿಕೆ ಪಡೆದರೆ ಆಗುವ ಪರಿಣಾಮವೇನು?

KSRTC Announced Concession On Bus Rent Service

ಕರ್ನಾಟಕ ಸರ್ಕಾರಿಗೆಯ 55/47/49 ಆಸನಗಳ ಬಸ್‌ಗಳನ್ನು ಲಸಿಕೆ ನೀಡಲು ಸಂಚಾರ ನಡೆಸಲು ಬಳಕೆ ಮಾಡಿಕೊಳ್ಳಬಹುದು. ಪ್ರತಿ ದಿನಕ್ಕೆ ಕನಿಷ್ಠ 200 ಕಿ. ಮೀ. ಸಂಚಾರ ನಡೆಸಿದರೆ ಪ್ರತಿ ಕಿ. ಮೀ.ಗೆ 39 ರೂ. ದರವನ್ನು ಪಾವತಿ ಮಾಡಬೇಕು.

ವರ್ಷದ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ ಎಂದ ಕೇಂದ್ರ - ಭಾರತ್‌ ಬಯೋಟೆಕ್‌ ಹೇಳಿದ್ದೇನು? ವರ್ಷದ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ ಎಂದ ಕೇಂದ್ರ - ಭಾರತ್‌ ಬಯೋಟೆಕ್‌ ಹೇಳಿದ್ದೇನು?

Recommended Video

ಕೊರೊನಾದಿಂದ ಮೃತಪಟ್ಟ ವ್ಯಕ್ತಿಯಿದ್ದ ಆಂಬುಲೆನ್ಸ್ ಚಾಲನೆ ಮಾಡಿದ Renukacharya | Oneindia Kannada

ಈ ದರದಲ್ಲಿ ಬಸ್ಸುಗಳನ್ನು ವ್ಯಾಕ್ಸಿನ್ ನೀಡುವ ಸಂಬಂಧ ಬೇಡಿಕೆ ಬಂದರೆ ಒದಗಿಸಬೇಕು ಎಂದು ವಿವಿಧ ನಿಗಮಗಳಿಗೆ ಸೂಚನೆ ನೀಡಲಾಗಿದೆ. ಉಳಿದಂತೆ ಸಾಂಧರ್ಭಿಕ ಒಪ್ಪಂದದ ಮೇಲೆ ಬಸ್‌ಗಳನ್ನು ಒದಗಿಸುವ ಇನ್ನಿತರೆ ಯಾವುದೇ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

English summary
The Karnataka State Road Transport Corporation announced concession on bus rent service which go for village to Covid vaccine drive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X