ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಬಿಎ ಕೋರ್ಸ್‌ ಆರಂಭಿಸಲು ಮಾನ್ಯತೆ ಪಡೆದ ಕೆಎಸ್‌ಒಯು

|
Google Oneindia Kannada News

ಬೆಂಗಳೂರು, ಜುಲೈ 20; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಎಂಬಿಎ ಕೋರ್ಸ್ ಆರಂಭಿಸಲು ಎಐಸಿಇಟಿ ಒಪ್ಪಿಗೆ ನೀಡಿದೆ. 10 ಸಾವಿರ ಸೀಟುಗಳಿಗೆ ಪ್ರವೇಶ ನೀಡಲು ಅನುಮೋದನೆ ನೀಡಲಾಗಿದೆ.

ಕೇಂದ್ರ ಶಿಕ್ಷಣ ಸಚಿವಾಲಯದ ಶಾಸನಬದ್ಧ ಅಂಗವಾದ ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಇಟಿ) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಎಂಬಿಎ ಕೋರ್ಸ್ ಆರಂಭಿಸಲು ಒಪ್ಪಿಗೆ ಕೊಟ್ಟಿದೆ.

ಉಡುಪಿ: ಎಂಬಿಎ ಪದವೀಧರೆಯ ಕೈಯಲ್ಲಿ ಮತ್ತೆ ಅರಳುತ್ತಿವೆ ಕೈಮಗ್ಗದ ಸೀರೆಗಳುಉಡುಪಿ: ಎಂಬಿಎ ಪದವೀಧರೆಯ ಕೈಯಲ್ಲಿ ಮತ್ತೆ ಅರಳುತ್ತಿವೆ ಕೈಮಗ್ಗದ ಸೀರೆಗಳು

ಮುಕ್ತ ಹಾಗೂ ದೂರ ಶಿಕ್ಷಣ ಮಾದರಿಯಡಿ ಎಂಬಿಎ ಕೋರ್ಸ್ ನಡೆಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಒಪ್ಪಿಗೆ ಸಿಕ್ಕಿದೆ. ಎಂಬಿಎ ಕೋರ್ಸ್ ಆರಂಭಿಸಲು ಮಾನ್ಯತೆ ಪಡೆದಿರುವ ದೇಶದ ಏಕೈಕ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಯನ್ನು ಕೆಎಸ್‌ಒಯು ಪಡೆದಿದೆ.

ಕೆಎಸ್ಒಯು ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೆಮ್ಮದಿ ನೀಡಿದ ಹೈಕೋರ್ಟ್ಕೆಎಸ್ಒಯು ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೆಮ್ಮದಿ ನೀಡಿದ ಹೈಕೋರ್ಟ್

KSOU Get Nod To Launch MBA Course

2021-22ನೇ ಸಾಲಿಗೆ ಮುಕ್ತ ಹಾಗೂ ದೂರ ಶಿಕ್ಷಣ ಕಲಿಕಾ ವಿಧಾನದಡಿ ಎಂಬಿಎ ಕೋರ್ಸ್‌ಗೆ 10,000 ಸೀಟುಗಳಿಗೆ ಪ್ರವೇಶಾತಿ ಕಲ್ಪಿಸಲು ಎಐಸಿಟಿಇ ಅನುಮತಿ ನೀಡಿದೆ. ಯುಜಿಸಿಯಿಂದ ಕೆಲವು ದಿನಗಳ ಹಿಂದೆ ಕೆಎಸ್‌ಓಯು 12-ಬಿ ಮಾನ್ಯತೆಯನ್ನು ಪಡೆದಿತ್ತು.

 ವೇದಾಧ್ಯಯನಕ್ಕಾಗಿ 2 ಖಾಸಗಿ ಶಾಲಾ ಮಂಡಳಿ ರಚನೆ: ಶಿಕ್ಷಣ ಸಚಿವಾಲಯ ವೇದಾಧ್ಯಯನಕ್ಕಾಗಿ 2 ಖಾಸಗಿ ಶಾಲಾ ಮಂಡಳಿ ರಚನೆ: ಶಿಕ್ಷಣ ಸಚಿವಾಲಯ

ಕುಲಪತಿಗಳ ಸಂತಸ; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಎಂಬಿಎ ಕೋರ್ಸ್ ಆರಂಭಿಸಲು ಎಐಸಿಟಿಇ ಅನುಮತಿ ನೀಡಿರುವುದಕ್ಕೆ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಸಂತಸ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ಒಟ್ಟು 18 ಮುಕ್ತ ವಿಶ್ವವಿದ್ಯಾನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಎಐಸಿಟಿಇ ಯಿಂದ ಮಾನ್ಯತೆ ಪಡೆದ ದೇಶದ ಮೊದಲ ವಿಶ್ವವಿದ್ಯಾನಿಲಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವಾಗಿದೆ.

English summary
AICET has permitted Karnataka State Open University (KSOU) to launch MBA courses on open and distant learning mode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X