ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕ್ಷಣಗಣನೆ ಆರಂಭ: ವೇಳಾಪಟ್ಟಿ ಪ್ರಕಟ

By Srinath
|
Google Oneindia Kannada News

ಬೆಂಗಳೂರು, ನ.7: ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಗೆ ಕೌಂಟ್ ಡೌನ್ ಶುರುವಾಗಿದ್ದು, ವೇಳಾಪಟ್ಟಿ ಪ್ರಕಟವಾಗಿದೆ.

2014 ರ ಮಾರ್ಚ್ 28 ರಿಂದ ಏಪ್ರಿಲ್ 9 ರ ವರೆಗೆ ಈ ಪರೀಕ್ಷೆಗಳು ನಡೆಯಲಿವೆ. ಈ ಬಾರಿಯೂ ಕೂಡ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗುವುದು ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯದರ್ಶಿ ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.

ಪರೀಕ್ಷಾ ದಿನಗಳ ನಡುವೆ ಯುಗಾದಿ ಹಬ್ಬ, ಭಾನುವಾರ ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ಆರು ದಿನಗಳ ರಜೆ (ಮಾರ್ಚ್ 30, 31, ಏಪ್ರಿಲ್ 2, 5, 6 ಮತ್ತು 8) ದೊರೆಯಲಿದೆ. ಸಂಗೀತ ಹಾಗೂ ಇಂಜಿನಿಯರಿಂಗ್‌ ಡ್ರಾಯಿಂಗ್‌ ವಿಷಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ಪರೀಕ್ಷೆಗಳು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.45ರ ವರೆಗೆ ನಡೆಯಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ ಸೈಟ್‌ ತಿಳಿಸಿದೆ.
ವೇಳಾಪಟ್ಟಿ ಹೀಗಿದೆ:

KSEEB SSLC exam 2013-14 time table announced- Official list,
ಮಾರ್ಚ್ 28: ಕನ್ನಡ, ತೆಲುಗು, ತಮಿಳು, ಮರಾಠಿ, ಹಿಂದಿ, ಉರ್ದು, ಸಂಸ್ಕೃತ, ಇಂಗ್ಲಿಷ್‌ (ಪ್ರಥಮ ಭಾಷೆ)
ಮಾರ್ಚ್ 29: ಎಲಿಮೆಂಟ್ಸ್‌ ಆಫ್ ಇಂಜಿನಿಯರಿಂಗ್‌, ಎಲಿಮೆಂಟ್ಸ್‌ ಆಫ್ ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌, ಎಲಿಮೆಂಟ್ಸ್‌ ಆಫ್ ಕಂಪ್ಯೂಟರ್‌ ಸೈನ್ಸ್‌ ಹಾಗೂ ಭಾರತೀಯ ಅರ್ಥಶಾಸ್ತ್ರ (ಬೆಳಗ್ಗೆ), ಇಂಜಿನಿಯರಿಂಗ್‌ ಡ್ರಾಯಿಂಗ್‌ (ಮಧ್ಯಾಹ್ನ ).

ಏಪ್ರಿಲ್ 1 : ಗಣಿತ ಮತ್ತು ಭಾರತೀಯ ಸಮಾಜಶಾಸ್ತ್ರ
ಏಪ್ರಿಲ್ 3 : ವಿಜ್ಞಾನ, ಭಾರತೀಯ ರಾಜ್ಯಶಾಸ್ತ್ರ ಮತ್ತು ಪೌರನೀತಿ (ಬೆಳಗ್ಗೆ), ಕರ್ನಾಟಕ ಸಂಗೀತ/ಹಿಂದೂಸ್ಥಾನಿ ಸಂಗೀತ (ಮಧ್ಯಾಹ್ನ)
ಏಪ್ರಿಲ್ 4: ತೃತೀಯ ಭಾಷೆಗಳಾದ ಹಿಂದಿ, ಇಂಗ್ಲೀಷ್‌, ಕನ್ನಡ, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ ಹಾಗೂ ಕೊಂಕಣಿ.
ಏಪ್ರಿಲ್ 7 : ಸಮಾಜ ವಿಜ್ಞಾನ.
ಏಪ್ರಿಲ್ 9 : ದ್ವಿತೀಯ ಭಾಷೆ ಇಂಗ್ಲೀಷ್‌, ಕನ್ನಡ.

English summary
The Karnataka Secondary Education Examination Board has announced the SSLC and other examinations for the academic year 2013-14. The exams begin March 28 and ends on April 9. Here is the official list of time table.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X