ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಲ್‌ಸಿಯಲ್ಲಿ ಇನ್ನು ಯಾರೂ ಫೇಲ್ ಆಗಲ್ಲ..!

By Kiran B Hegde
|
Google Oneindia Kannada News

ಬೆಂಗಳೂರು, ಜ. 15: ಇನ್ನು ಮುಂದೆ ಎಸ್ಎಸ್ಎಲ್‌ಸಿ ಕಲಿತವರು ಯಾರೂ ಫೇಲಾಗಲ್ಲ. ಅವರಿನ್ನೂ ತರಗತಿ ಪೂರ್ಣಗೊಳಿಸಿರುವುದಿಲ್ಲ ಅಷ್ಟೇ! ಹೀಗೆಂದು ಶಿಕ್ಷಣ ಇಲಾಖೆ ಹೊರಡಿಸಿರುವ ಹೊಸ ಆದೇಶದಲ್ಲಿ ತಿಳಿಸಲಾಗಿದೆ.

ಎಸ್ಎಸ್ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ 2014-15ನೇ ಸಾಲಿನಿಂದ ನೂತನ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಹಾಗೂ ಶ್ರೇಣಿ ವ್ಯವಸ್ಥೆಯ ಫಲಿತಾಂಶ ಪದ್ಧತಿಯನ್ನು ಜಾರಿಗೊಳಿಸಲು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ ಅನುತ್ತೀರ್ಣ ಬದಲು ನಾಟ್ ಕಂಪ್ಲೀಟೆಡ್ ಎಂದು ನಮೂದಿಸಲು ನಿರ್ಧರಿಸಲಾಗಿದೆ. [ಎಸ್ಎಸ್ಎಲ್ ಸಿ ಮಾರ್ಗದರ್ಶಿಗೆ ಮೆಚ್ಚುಗೆ]

ವಿದ್ಯಾರ್ಥಿಯೋರ್ವ ಒಟ್ಟು 219ಕ್ಕಿಂತ ಕಡಿಮೆ ಅಂಕ ಪಡೆದಲ್ಲಿ ಅಥವಾ ಪ್ರತಿ ವಿಷಯದಲ್ಲಿ ಶೇ. 30ಕ್ಕಿಂತ ಕಡಿಮೆ ಅಂಕ ಪಡೆದರೆ ಅವರನ್ನು ಮೊದಲು 'ಅನುತ್ತೀರ್ಣ' ಎಂದು ಪರಿಗಣಿಸಲಾಗುತ್ತಿತ್ತು. ಇನ್ನು ಮುಂದೆ 'ನಾಟ್ ಕಂಪ್ಲೀಟೆಡ್' ಎಂದು ಪರಿಗಣಿಸಲಾಗುವುದು. ಅಂದರೆ ಇಂತಹ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದಿಲ್ಲ ಅಷ್ಟೇ.

kseeb

ಆಂತರಿಕ ಮೌಲ್ಯಮಾಪನಕ್ಕೆ ಕನಿಷ್ಠ ಅಂಕವಿಲ್ಲ : ಈ ಮೊದಲು ವಿದ್ಯಾರ್ಥಿಗಳು ಉತ್ತೀರ್ಣರಾಗಲು ಆಂತರಿಕ ಮೌಲ್ಯಮಾಪನದಲ್ಲಿಯೂ ನಿಗದಿತ ಅಂಕ ಪಡೆಯಬೇಕಾಗಿತ್ತು. ಈ ನಿಯಮ ರದ್ದುಪಡಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಯೋರ್ವ ಉತ್ತೀರ್ಣನಾಗಲು ಪ್ರತಿ ವಿಷಯದಲ್ಲಿ ಕನಿಷ್ಠ ಶೇ. 30 ಹಾಗೂ ಒಟ್ಟೂ ಶೇ. 35 ಅಂಕ ಗಳಿಸಿದರೆ ಸಾಕು. [ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ]

ಅಲ್ಲದೆ, ಪ್ರತಿ ಶ್ರೇಣಿಯಲ್ಲಿ ಒಂದೊಂದು ಅಂಕ ಹೆಚ್ಚಳ ಮಾಡಿದೆ. ಈ ಮೊದಲು ಉತ್ತೀರ್ಣನಾಗಲು ವಿದ್ಯಾರ್ಥಿಯೋರ್ವ 625 ಅಂಕಗಳಿಗೆ 219 ಅಂಕ ಪಡೆಯಲೇ ಬೇಕಾಗಿತ್ತು. ಆದರೆ, 'ಸಿ' ಗ್ರೇಡ್ ಫಲಿತಾಂಶಕ್ಕಾಗಿ 219ರಿಂದ 311 ಅಂಕ ಗಳಿಸುವುದು ಕಡ್ಡಾಯವಾಗಿತ್ತು. ಶೇಕಡಾವಾರು ಲೆಕ್ಕಾಚಾರದಲ್ಲಿಯೂ ಶೇ. 35ರಿಂದ 49 ಎಂದು ಅಂಕ ನೀಡುವ ಬದಲು ಶೇ. 30ರಿಂದ 49 ಎಂದು ತಿಳಿಸಲಾಗಿತ್ತು. ಪ್ರಸ್ತುತ ಸರ್ಕಾರ ಈ ತಪ್ಪು ಸರಿಪಡಿಸಲಾಗಿದೆ. 219ರಿಂದ 312 ಅಂಕ ಗಳಿಸಿದವರು ಅಂದರೆ ಶೇ. 35ರಿಂದ ಶೇ. 50 ಅಂಕ ಗಳಿಸಿದವರಿಗೆ 'ಸಿ' ಗ್ರೇಡ್ ಸಿಗಲಿದೆ. [ಮಕ್ಕಳು ನಿದ್ದೆ ಮಾಡ್ತಿದ್ರೆ ಮೇಷ್ಟ್ರು ಫೋನ್ ಮಾಡ್ತಾರೆ]

ಆಂತರಿಕ ಮೌಲ್ಯಮಾಪನಕ್ಕೆ ಶೇ. 20 ಅಂಕ : ಮೊದಲು ಸಿಸಿಇ ಪದ್ಧತಿಯಲ್ಲಿ ಶೇ. 100ರಷ್ಟು ಅಂಕಗಳಿಗೆ ಲಿಖಿತ ಪರೀಕ್ಷೆ ಪದ್ಧತಿ ಇತ್ತು. ಇದೀಗ ಬದಲಾಗಿದೆ. ಶೇ. 80 ಅಂಕಗಳಿಗೆ ಮಾತ್ರ ಬಾಹ್ಯ ಲಿಖಿತ ಪರೀಕ್ಷೆ ನಡೆಯಲಿದೆ. ಆಂತರಿಕ ಮೌಲ್ಯಮಾನಪಕ್ಕಾಗಿ ಶೇ. 20 ಅಂಕಗಳನ್ನು ನಿಗದಿಪಡಿಸಲಾಗಿದೆ. [ಶಿಕ್ಷಣ ಕ್ಷೇತ್ರ ಸುಧಾರಣೆಯ ಕನಸು]

ಒಟ್ಟು 625 ಅಂಕಗಳಿಗೆ ಪರಿಷ್ಕೃತ ಅಂಕ ಹಾಗೂ ಶ್ರೇಣಿ ಈ ಕೆಳಗಿನಂತಿದೆ.

  • 563ರಿಂದ 625 ಅಂಕಗಳಿಗೆ (ಶೇ. 90ರಿಂದ ಶೇ.100) ಎ+ ಶ್ರೇಣಿ
  • 500ರಿಂದ 562 ಅಂಕಗಳಿಗೆ (ಶೇ. 80ರಿಂದ ಶೇ. 90) ಎ ಶ್ರೇಣಿ
  • 438ರಿಂದ 499 ಅಂಕಗಳಿಗೆ (ಶೇ. 70ರಿಂದ ಶೇ. 80) ಬಿ+ ಶ್ರೇಣಿ
  • 375ರಿಂದ 437 ಅಂಕಗಳಿಗೆ (ಶೇ. 60ರಿಂದ ಶೇ. 70) ಬಿ
  • 313ರಿಂದ 374 ಅಂಕಗಳಿಗೆ (ಶೇ. 50ರಿಂದ ಶೇ. 60) ಸಿ+ ಶ್ರೇಣಿ
  • 219ರಿಂದ 312 ಅಂಕಗಳಿಗೆ (ಶೇ. 35ರಿಂದ ಶೇ. 50) ಸಿ

ಪ್ರಥಮ ಭಾಷೆ (125 ಅಂಕ) ಗೆ ಪರಿಷ್ಕೃತ ಅಂಕ ಹಾಗೂ ಶ್ರೇಣಿ

  • 113ರಿಂದ 125 ಅಂಕಗಳಿಗೆ (ಶೇ. 90ರಿಂದ ಶೇ. 100) ಎ+ ಶ್ರೇಣಿ
  • 100ರಿಂದ 112 ಅಂಕಗಳಿಗೆ (ಶೇ. 80ರಿಂದ ಶೇ. 90) ಎ ಶ್ರೇಣಿ
  • 88ರಿಂದ 99 ಅಂಕಗಳಿಗೆ (ಶೇ. 70ರಿಂದ ಶೇ. 80) ಬಿ+ ಶ್ರೇಣಿ
  • 75ರಿಂದ 87 ಅಂಕಗಳಿಗೆ (ಶೇ. 60ರಿಂದ ಶೇ. 70) ಬಿ ಶ್ರೇಣಿ
  • 63ರಿಂದ 74 ಅಂಕಗಳಿಗೆ (ಶೇ. 50ರಿಂದ ಶೇ. 60) ಸಿ+ ಶ್ರೇಣಿ
  • 44ರಿಂದ 62 ಅಂಕಗಳಿಗೆ (ಶೇ. 35ರಿಂದ ಶೇ. 50) ಸಿ ಶ್ರೇಣಿ

ಇತರೆ ವಿಷಯಗಳ ತಲಾ 100 ಅಂಕಗಳಿಗೆ ಪರಿಷ್ಕೃತ ವಿವರ

  • 90ರಿಂದ 100 ಅಂಕಗಳಿಗೆ (ಶೇ. 90ರಿಂದ ಶೇ. 100) ಎ+ ಶ್ರೇಣಿ
  • 80ರಿಂದ 89 ಅಂಕಗಳಿಗೆ (ಶೇ. 80ರಿಂದ ಶೇ. 90) ಎ ಶ್ರೇಣಿ
  • 70ರಿಂದ 79 ಅಂಕಗಳಿಗೆ (ಶೇ. 70ರಿಂದ ಶೇ. 80) ಬಿ+ ಶ್ರೇಣಿ
  • 60ರಿಂದ 69 ಅಂಕಗಳಿಗೆ (ಶೇ. 60ರಿಂದ ಶೇ. 70) ಬಿ ಶ್ರೇಣಿ
  • 50ರಿಂದ 59 ಅಂಕಗಳಿಗೆ (ಶೇ. 50ರಿಂದ ಶೇ. 60) ಸಿ+ ಶ್ರೇಣಿ
  • 35ರಿಂದ 49 ಅಂಕಗಳಿಗೆ (ಶೇ. 35ರಿಂದ ಶೇ. 50) ಸಿ ಶ್ರೇಣಿ
English summary
Karnataka Secondary Education Examination Board has revised the evaluation of sslc examination and grade system from 2014-2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X