ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡುಗು, ಹೊಗೆಯಂತೆ ಎಚ್. ಡಿ. ಕುಮಾರಸ್ವಾಮಿ ಕಣ್ಣೀರು!

|
Google Oneindia Kannada News

Recommended Video

Minister K. S. Eshwarappa tweet against Kumaraswamy criying | Oneindia Kannada

ಬೆಂಗಳೂರು, ನವೆಂಬರ್ 28 : ಮಂಡ್ಯದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರು ಹಾಕಿದ್ದರು. ಪ್ರತಿಪಕ್ಷಗಳು ಕುಮಾರಸ್ವಾಮಿ ಅಳುವನ್ನು ವ್ಯಂಗ್ಯವಾಡಿವೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಟ್ವೀಟ್ ಮಾಡಿದ್ದು, "ಎಲೆಕ್ಷನ್ ಮುಂಚೆ ಕುಮಾರಸ್ವಾಮಿಯವರಿಗೆ ಕಣ್ಣೀರು ಬರುವುದು ಸರ್ವೆ ಸಾಮಾನ್ಯ"ಎಂದು ಲೇವಡಿ ಮಾಡಿದ್ದಾರೆ. ಈ ಮೂಲಕ ವಾಕ್ಸಮರಕ್ಕೆ ಆಹ್ವಾನ ನೀಡಿದ್ದಾರೆ.

ಕುಮಾರಸ್ವಾಮಿ ಎಲೆಕ್ಷನ್ ಟೈಮಲ್ಲಿ ಮಾತ್ರ ಕಣ್ಣೀರ್ ಹಾಕ್ತಾರಂತೆ...ಕುಮಾರಸ್ವಾಮಿ ಎಲೆಕ್ಷನ್ ಟೈಮಲ್ಲಿ ಮಾತ್ರ ಕಣ್ಣೀರ್ ಹಾಕ್ತಾರಂತೆ...

ಕೆ. ಆರ್. ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಎಚ್. ಡಿ. ಕುಮಾರಸ್ವಾಮಿ ಬುಧವಾರ ಪಕ್ಷದ ಅಭ್ಯರ್ಥಿ ಬಿ. ಎಲ್. ದೇವರಾಜು ಪರ ಮತಯಾಚನೆ ಮಾಡಿದ್ದರು. ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದರು.

ನಾರಾಯಣಗೌಡ ಬರೆದ ಪತ್ರ ಓದಿ ಕಣ್ಣೀರಿಟ್ಟ ಕುಮಾರಸ್ವಾಮಿನಾರಾಯಣಗೌಡ ಬರೆದ ಪತ್ರ ಓದಿ ಕಣ್ಣೀರಿಟ್ಟ ಕುಮಾರಸ್ವಾಮಿ

ನಾರಾಯಣ ಗೌಡ ಬರೆದ ಪತ್ರ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದರು. ಇದೇ ವಿಚಾರ ಈಗ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ಡಿಸೆಂಬರ್ 5ರಂದು ಕೆ. ಆರ್. ಪೇಟೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ನಾರಾಯಣ ಗೌಡ, ಕಾಂಗ್ರೆಸ್‌ನಿಂದ ಕೆ. ಬಿ. ಚಂದ್ರಶೇಖರ್ ಮತ್ತು ಜೆಡಿಎಸ್‌ನಿಂದ ಬಿ. ಎಲ್. ದೇವರಾಜ್ ಕಣದಲ್ಲಿದ್ದಾರೆ. ಡಿಸೆಂಬರ್ 9ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಮಂಡ್ಯ ರಾಜಕೀಯಕ್ಕೆ ಹೊಸ ಜೋಡೆತ್ತುಗಳ ಆಗಮನ!ಮಂಡ್ಯ ರಾಜಕೀಯಕ್ಕೆ ಹೊಸ ಜೋಡೆತ್ತುಗಳ ಆಗಮನ!

ಕೆ. ಎಸ್. ಈಶ್ವರಪ್ಪ ಟ್ವೀಟ್

ಕೆ. ಎಸ್. ಈಶ್ವರಪ್ಪ ಟ್ವೀಟ್

"ಮಳೆ ಬರುವ ಮುಂಚೆ ಗುಡುಗು ಬರುವುದು. ಬೆಂಕಿ ಹತ್ತುವ ಮುಂಚೆ ಹೊಗೆ ಬರುವುದು. ಸಭೆ ಸಮಾರಂಭಗಳಲ್ಲಿ ಸಿದ್ದರಾಮಯ್ಯನವರಿಗೆ ನಿದ್ದೆ ಬರುವುದು. ಎಲೆಕ್ಷನ್ ಮುಂಚೆ ಕುಮಾರಸ್ವಾಮಿಯವರಿಗೆ ಕಣ್ಣೀರು ಬರುವುದು ಸರ್ವೆ ಸಾಮಾನ್ಯ" ಎಂದು ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ನಾರಾಯಣ ಗೌಡ ವಿರುದ್ಧ ವಾಗ್ದಾಳಿ

ನಾರಾಯಣ ಗೌಡ ವಿರುದ್ಧ ವಾಗ್ದಾಳಿ

ಉಪ ಚುನಾವಣೆ ರಪ್ರಚಾರದ ವೇಳೆ ನಾರಾಯಣ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದ ಎಚ್. ಡಿ. ಕುಮಾರಸ್ವಾಮಿ, "2018ರಲ್ಲಿ ನಮ್ಮ ತಂದೆಯ ವಿರೋಧದ ನಡುವೆಯೂ ಟಿಕೆಟ್ ಕೊಟ್ಟು ಗೆಲ್ಲಿಸಿದೆ. ನಾನು ಬಜೆಟ್ ಸಿದ್ಧತೆಯಲ್ಲಿದ್ದಾಗ ಬಿಜೆಪಿಯವರಿಂದ ಹಣ ಪಡೆದು ಬಾಂಬೆಯಲ್ಲಿ ಚಿಕಿತ್ಸೆಯ ನಾಟಕವಾಡಿ ಆಸ್ಪತ್ರೆಯಲ್ಲಿ ಮಲಗಿದ್ದ" ಎಂದು ಟೀಕಿಸಿದ್ದರು.

ಅಧಿಕಾರದಲ್ಲಿ ಇರಬೇಕಾ?

ಅಧಿಕಾರದಲ್ಲಿ ಇರಬೇಕಾ?

"ಮಂಡ್ಯ ಜಿಲ್ಲೆಯ ಜನರ ಪ್ರೀತಿಯೇ ಇಲ್ಲದ ಮೇಲೆ ನಾನು ಅಧಿಕಾರದಲ್ಲಿ ಇರಬೇಕಾ?. ಮುಖ್ಯಮಂತ್ರಿ ಸ್ಥಾನ, ಅಧಿಕಾರ ಯಕಶ್ಚಿತ್. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಒಂದೇ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ. ನನ್ನನ್ನು ಗುಲಾಮನ ರೀತಿ ನಡೆಸಿಕೊಂಡರು" ಎಂದು ಕುಮಾರಸ್ವಾಮಿ ಕಣ್ಣೀರು ಹಾಕಿದ್ದರು.

ಸಾಲಮನ್ನಾ ಮಾಡಿದ್ದೇ ತಪ್ಪಾ?

ಸಾಲಮನ್ನಾ ಮಾಡಿದ್ದೇ ತಪ್ಪಾ?

"ಮಂಡ್ಯದಲ್ಲಿ ಮಗನನ್ನು ಚುನಾವಣೆಗೆ ನಿಲ್ಲಿಸಬೇಕು ಎಂದು ಅಂದುಕೊಂಡಿರಲಿಲ್ಲ. ನಿವೇ ಒತ್ತಾಯ ಮಾಡಿ ನಿಲ್ಲಿಸಿಕೊಂಡಿರಿ. ಮಗನ ಸೋಲಿಗಾಗಿ ನಾನು ಅಳುತ್ತಿಲ್ಲ. ಜಿಲ್ಲೆಯ ಹೆಣ್ಣು ಮಕ್ಕಳ ಸ್ಥಿತಿ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದೆ. ಈಗ ಅದು ನೀರಾಗಿ ಬರುತ್ತಿದೆ. ನಾನು ಸಾಲಮನ್ನಾ ಮಾಡಿದ್ದೇ ತಪ್ಪಾ?" ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು.

English summary
Former Karnataka chief minister H.D.Kumaraswamy turned emotional in Mandya during by elections campaign. Minister K. S. Eshwarappa tweet against Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X