ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಯ್ಯ, ಶಂಕ್ರಪ್ಪ ಸೇರಿ ಅನ್ನದಾನಿಯನ್ನು ಕೊಂದ ಕಥೆ

|
Google Oneindia Kannada News

ಬೆಂಗಳೂರು, ಜುಲೈ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಎಂದು ಆರೋಪಿಸಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಕಥೆಯೊಂದನ್ನು ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ಶಾಮನೂರು ಶಿವಶಂಕರಪ್ಪ ಸೇರಿ ರೈತರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಬುಧವಾರದ ವಿಧಾನಪರಿಷತ್ ಕಲಾಪದಲ್ಲಿ ಕೆ.ಎಸ್.ಈಶ್ವರಪ್ಪ ಅವರು ರಾಮಯ್ಯ ಮತ್ತು ಶಂಕ್ರಪ್ಪ ಸೇರಿ ಅನ್ನದಾನಿಯನ್ನು ಕೊಂದ ಕಥೆಯನ್ನು ಹೇಳಿದರು. ಕಥೆ ಮುಗಿದ ನಂತರ ರಾಮಯ್ಯ ಮತ್ತು ಶಂಕ್ರಪ್ಪ ಯಾರು? ಎಂದು ಸದನಕ್ಕೆ ವಿವರಣೆ ನೀಡಿದರು. [ರೈತರ ಮನೆಗೆ ಹೊರಟ ಬಿಜೆಪಿ ನಾಯಕರು]

ks eshwarappa

ಈಶ್ವರಪ್ಪ ಹೇಳಿದ ಕಥೆ ಹೀಗಿದೆ : 'ರಾಮಯ್ಯ ಮತ್ತು ಶಂಕಪ್ಪ ಅಣ್ಣ ತಮ್ಮಂದಿರು. ಎಲ್ಲಾ ಕೆಲಸ ಬಿಟ್ಟು ರಾಜಕಾರಣ ಮಾಡಿಕೊಂಡು ಅವರು ಓಡಾಡುತ್ತಿದ್ದರು. ಅನ್ನದಾನಿ ಮನೆಯ ಮಗ, ಉಮಾ ಮನೆಯ ಮಗಳು'. [ಸಾಲ ಮಾಡಿ ಜೀವ ತಕ್ಕಂಡ್ರೆ ನಾವೇನ್ ಮಾಡದು!]

'ರಾಮಯ್ಯ, ಶಂಕಪ್ಪ ರಾಜಕಾರಣದಲ್ಲಿದ್ದರು. ಅನ್ನದಾನಿ ಮನೆಯ ವ್ಯವಹಾರ ನೋಡಿಕೊಳ್ಳುತ್ತಾ ಸಂಕಷ್ಟಕ್ಕೆ ಸಿಲುಕಿದ, ಸಾಲ ಮಾಡಿಕೊಂಡ. ಆದರೆ, ರಾಮಯ್ಯ ಮತ್ತು ಶಂಕ್ರಪ್ಪ ಅನ್ನದಾನಿಗೆ ಸಹಾಯ ಮಾಡಲಿಲ್ಲ. ತನ್ನ ಕಷ್ಟವನ್ನು ಹೇಳಿಕೊಂಡರು ನೆರವು ನೀಡಲಿಲ್ಲ'. [ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ]

'ಕಷ್ಟ ತಡೆಯಲಾರದ ಅನ್ನದಾನಿ ಆತ್ಮಹತ್ಯೆ ಮಾಡಿಕೊಂಡ. ಮನೆ ಮಗಳು ಉಮಾ ಅನ್ನದಾನಿಯ ಆತ್ಮಹತ್ಯೆಯನ್ನು ಅಸಹಾಯಕತೆಯಿಂದ ನೋಡುತ್ತಿದ್ದಳು. ನಮ್ಮ ರಾಜ್ಯದ ರೈತರ ಕಥೆ ಅನ್ನದಾನಿಯಂತೆ ಆಗಿದೆ' ಎಂದು ಈಶ್ವರಪ್ಪ ಕಥೆ ಮುಗಿಸಿದರು.

ಅಂದಹಾಗೆ ಕಥೆಯ ಕೊನೆಯಲ್ಲಿ ಇಲ್ಲಿ ರಾಮಯ್ಯ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಂಕ್ರಪ್ಪ ಎಂದರೆ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ. ಅನ್ನದಾನಿ ನಮ್ಮ ರಾಜ್ಯದ ರೈತರು ಎಂದು ಈಶ್ವರಪ್ಪ ವಿವರಣೆ ನೀಡಿದರು.

English summary
The issue of farmers suicide rocked the legislative council on Wednesday. Leader of opposition KS Eshwarappa demand for a debate on issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X