ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಯ್ಯ ಶೆಟ್ಟರಿಗೆ ತೆರೆಯಿತು ಕಾಂಗ್ರೆಸ್ ಬಾಗಿಲು!

|
Google Oneindia Kannada News

ಬೆಂಗಳೂರು, ಮಾ. 24 : ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಮತ್ತೊಮ್ಮೆ ಕಾಂಗ್ರೆಸ್ ಬಾಗಿಲು ತೆರೆದಿದೆ. ಕಾಂಗ್ರೆಸ್ ಹೈ ಕಮಾಂಡ್ ನಾಯಕರು ಕೃಷ್ಣಯ್ಯ ಶೆಟ್ಟಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ಕೋಲಾರ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರ ಬಲ ಹೆಚ್ಚಲಿದೆ.

ಕರ್ನಾಟಕದ ವಿಧಾನಸಭೆ ಚುನಾವಣೆಯ ಕಳೆದ ಬಳಿಕ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಧ್ಯಸ್ಥಿಕೆಯಲ್ಲಿ ಕೃಷ್ಣಯ್ಯ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದರೆ, ಕೆಪಿಸಿಸಿ ಹಾಗೂ ಎಐಸಿಸಿಗೆ ಮಾಹಿತಿ ನೀಡದೆ ಸ್ಥಳೀಯ ಮಟ್ಟದಲ್ಲೆ ಶೆಟ್ಟಿ ಅವರನ್ನು ಬರಮಾಡಿಕೊಳ್ಳಲಾಗಿತ್ತು. [ಶೆಟ್ಟಿಗೆ ಲಡ್ಡು ಕೊಟ್ಟ ಕಾಂಗ್ರೆಸ್]

Krishnaiah Shetty

ಬಿಜೆಪಿ ಸರ್ಕಾರವಿದ್ದಾಗ ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹೈ ಕಮಾಂಡ್ ಅಂತಿಮ ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ ಅವರು ಕಾಂಗ್ರೆಸ್ ಪಕ್ಷಕ್ಕೆ ಸ್ಥಳೀಯ ಮಟ್ಟದಲ್ಲಿ ಮಾತ್ರ ಸೇರ್ಪಡೆಗೊಂಡಿದ್ದರು. [ಕಾಂಗ್ರೆಸ್ ಸೇರಿದ ಶೆಟ್ಟರು]

ಸದ್ಯ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷಾಂತರದ ಪರ್ವ ಆರಂಭವಾಗಿರುವಾಗ, ಕೃಷ್ಣಯ್ಯ ಶೆಟ್ಟಿ ಅವರಿಗೆ ಕಾಂಗ್ರೆಸ್ ಬಾಗಿಲು ತೆರೆಯಲಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಶೆಟ್ಟಿ ಪಕ್ಷ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಪತ್ರವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಕೆಪಿಸಿಸಿಗೆ ರವಾನಿಸಿದ್ದಾರೆ.

ಮನಿಯಪ್ಪ ಬಾಯಿಗೆ ಲಡ್ಡು : ಲಡ್ಡು ಹಂಚಿಕೆ ಖ್ಯಾತಿಯ ಕೃಷ್ಣಯ್ಯ ಶೆಟ್ಟಿ ಕಾಂಗ್ರೆಸ್ ಸೇರುವುದರಿಂದ ಕೋಲಾರದಿಂದ ಮರು ಆಯ್ಕೆ ಬಯಸಿರುವ ಮುನಿಯಪ್ಪ ಅವರ ಕೈ ಮತ್ತಷ್ಟು ಬಲವಾಗಲಿದೆ. ಮಾಲೂರು ಕ್ಷೇತ್ರದ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿರುವ ಕೃಷ್ಣಯ್ಯ ಶೆಟ್ಟಿ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ.

ಕೃಷ್ಣಯ್ಯ ಶೆಟ್ಟಿ ಕಾಂಗ್ರೆಸ್ ಸೇರುವುದರಿಂದ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಹೆಚ್ಚಲಿದೆ. ರಾಜಕೀಯ ಲಾಭದ ಉದ್ದೇಶವೇ ಕೃಷ್ಣಯ್ಯ ಶೆಟ್ಟಿ ಸೇರ್ಪಡೆ ಹಿಂದಿದೆ ಎಂಬ ಮಾತುಗಳಿವೆ. ಸ್ವತಃ ಮುನಿಯಪ್ಪ ಅವರು ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿ ಕೃಷ್ಣಯ್ಯ ಶೆಟ್ಟಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಶೆಟ್ಟರ ವಿರುದ್ಧ ಹಲವು ಪ್ರಕರಣಗಳು : ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಹಲವಾರು ಆರೋಪಗಳಿವೆ. ರಾಚೇನಹಳ್ಳಿ ಡಿನೋಟಿಫೈ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆಗೆ ಒಳಗಾಗಿ ಜೈಲು ಶಿಕ್ಷೆಯನ್ನು ಶೆಟ್ಟರು ಅನುಭವಿಸಿದ್ದಾರೆ. ತಮ್ಮ ಸಹೋದರನ ಪಾಲುದಾರಿಕೆಯ ಸಂಸ್ಥೆಗೆ ಸಾಲ ಪಡೆಯಲು ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ ಸಲ್ಲಿಸಿದ ಆರೋಪವಿದೆ.

English summary
Elections 2014 : The Congress in Karnataka decided to induct former BJP minister Krishnaiah Shetty to party. Congress central leadership has given the green signal for entry of Shetty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X