• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ: ಆಕ್ರೋಶ ಹೊರಹಾಕಿದ ಕೃಷ್ಣ ಬೈರೇಗೌಡ

|

ಬೆಂಗಳೂರು, ಮೇ 18: ಮಾಜಿ ಸಚಿವ ಕೃಷ್ಣ ಬೈರೇಗೌಡ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾಯಕರ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಹೈಕೋರ್ಟ್ ಆದೇಶದ ಪರಿಣಾಮವಾಗಿ ರಾಜ್ಯಕ್ಕೆ ಆಮ್ಲಜನಕ ಪೂರೈಕೆಯಾಗುತ್ತಿದೆ. ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸುಪ್ರೀಂ ಕೋರ್ಟ್ ಮೊರೆ ಹೋದರೂ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು. ಆದರೆ ರಾಜ್ಯ ನಾಯಕರು ಪ್ರಧಾನಿಯೇ ಆಕ್ಸಿಜನ್ ಕೊಟ್ಟಿದ್ದಾರೆ ಎಂದು ಪೋಸ್ ಕೊಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ರಾಜ್ಯಕ್ಕೆ ಅಗತ್ಯವಿರುವ 1200 ಮೆಟ್ರಿಕ್ ಟನ್ ಆಮ್ಲಜನಕದ ಬದಲಿಗೆ ಈಗಲೂ ಕೇಂದ್ರದಿಂದ 730 ಮೆಟ್ರಿಕ್ ಟನ್ ಆಕ್ಸಿಜನ್ ಮಾತ್ರವೇ ಪೂರೈಕೆಯಾಗುತ್ತಿದೆಎಂದಿದ್ದಾರೆ.

ಇನ್ನು ಚಾಮರಾಜನಗರದ ಆಮ್ಲಜನಕ ದುರಂತದ ಬಗ್ಗೆಯೂ ಪ್ರಸ್ತಾಪಿಸಿದ ಕೃಷ್ಣ ಬೈರೇಗೌಡ ಈ ದುರ್ಘಟನೆಯಲ್ಲಿ 3 ಜನ ಮಾತ್ರವೇ ಸಾವನ್ನಪ್ಪಿದ್ದಾರೆ ಎಂದು ಸಚಿವರು ಹೇಳಿದ್ದರು. ಆಗ ನ್ಯಾಯಮೂರ್ತಿಗಳೇ 26 ಸಾವು ಎಂದು ಉಲ್ಲೇಖಿಸಿದ್ದಾರೆ. ಆದರೆ ನಂತರ ಸತ್ಯ ಹೊರಬಂದಿದ್ದಕ್ಕೆ ಅವರು ಸರ್ವಜ್ಞರಲ್ಲ ಎನ್ನುತ್ತಿದ್ದಾರೆ. ಈಗ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಬದಲಾವಣೆಗೆ ಕೆಲವರು ಪ್ರಯತ್ನ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಸತ್ಯ ಬಹಿರಂಗಪಡಿಸಿದ ಕಾರಣಕ್ಕೆ ಅವರ ಮೇಲೆ ಮುಗಿಬಿದ್ದಿದ್ದಾರೆ ಎಂದು ಕೃಷ್ಣ ಬೈರೇಗೌಡ ಆರೋಪವನ್ನು ಮಾಡಿದ್ದಾರೆ.

ಕಾಳಸಂತೆಯಲ್ಲಿ ಮಾರಾಟ

ಕಾಳಸಂತೆಯಲ್ಲಿ ಮಾರಾಟ

ಇದೇ ಸಂದರ್ಭದಲ್ಲಿ ರೆಮಿಡಿಸಿವಿರ್ ವಿಚಾರವಾಗಿ, ನಮ್ಮವರೇ ಕೇಂದ್ರದಲ್ಲಿ ರಾಸಾಯನಿಕ ಸಚಿವರಾಗಿದ್ದಾರೆ. ಆದರೆ ರಾಜ್ಯಕ್ಕೆ ರೆಮಿಡಿಸಿವಿರ್ ಕೊಡಲು ಆಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ. ಕಾಳಸಂತೆಯಲ್ಲಿ ರೆಮಿಡಿಸಿವಿರ್ಮಾರಾಟವಾಗುತ್ತಿದ್ದು ಬಿಜೆಪಿ ಶಾಸಕರೇ ಬ್ಲಾಕ್ ಮಾರ್ಕೆಟ್‌ನಲ್ಲಿ ಖರೀದಿಸಿ ಅದನ್ನು ಹಂಚಿದ್ದಾರೆ. ಆದರೆ ಯಾವ ಶಾಸಕರು ಅಂತ ನಾನು ಹೇಳಲ್ಲ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಹಣಕಾಸು ಆಯೋಗದ ಶಿಫಾರಸಿಗೆ ಅಡ್ಡಿ

ಹಣಕಾಸು ಆಯೋಗದ ಶಿಫಾರಸಿಗೆ ಅಡ್ಡಿ

ಇನ್ನು ರಾಜ್ಯಕ್ಕೆ 5 ಸಾವಿರ ಕೋಟಿ ನೀಡಲು ಹಣಕಾಸು ಆಯೋಗವೇ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅದನ್ನ ತಡೆದು ಶಿಫಾರಸನ್ನು ವಾಪಸ್ ಪಡೆಯಿರಿ ಎಂದು ಕಳುಹಿಸಿದ್ದಾರೆ. ಇವರು ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿ ಹೋದವರು ಎಂದು ಅವರು ಕಿಡಿಕಾರಿದರು.

ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ

ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ

ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಡಬಲ್ ಎಂಜಿನ್ ಸರ್ಕಾರಗಳು ವಿಫಲವಾಗಿದೆ. ಬ್ರೋಕನ್ ಎಂಜಿನ್ ಮಧ್ಯೆ ನಾವು ಸಿಲುಕಿದ್ದೇವೆ ಎಂದು ಕೃಷ್ಣ ಬೈರೇಗೌಡ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿಲುವುಗಳ ಬಗ್ಗೆ ಆಕ್ರೋಶವನ್ನು ಹೊರಹಾಕಿದ್ದಾರೆ.

  ಶಾಸಕ ರೇಣುಕಾಚಾರ್ಯ ಅವರ ಸಮಯಪ್ರಜ್ಞೆಯಿಂದ ತಪ್ಪಿತು ದೊಡ್ಡ ಅನಾಹುತ | Oneindia Kannada
   ದೀಪ ಹಚ್ಚಿ ಎಂದಾಗ ವಿರೋಧಿಸಿದ್ದೆವಾ?

  ದೀಪ ಹಚ್ಚಿ ಎಂದಾಗ ವಿರೋಧಿಸಿದ್ದೆವಾ?

  ಲಸಿಕೆ ವಿಚಾರದಲ್ಲಿ ಕೈ ನಾಯಕರ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ಚಪ್ಪಾಳೆ ಹೊಡೆಯಿರಿ ಎಂದಾಗ ಹೊಡೆಯಲಿಲ್ವೇ? ದೀಪ ಹಚ್ಚಿ ಅಂದಾಗ ನಾವು ವಿರೋಧ ಮಾಡಿದೆವಾ? ವ್ಯಾಕ್ಸಿನ್‌ಗೆ ನಾವು ವಿರೋಧ ಪಡಿಸಲಿಲ್ಲ. ಫೆಬ್ರವರಿ,ಮಾರ್ಚ್ ನಲ್ಲಿ ಎಷ್ಟು ವ್ಯಾಕ್ಸಿನ್ ಬಂತು? ಕೊರೊನಾಗೆ ಸಾವು ಉಣಿಸಿದ್ದೇವೆಂದು ಕುಣಿದಾಡಿದ್ರು. ಆಗ ಮೈಮರೆತು ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದೀರಿ. ಫೆಬ್ರವರಿಯಲ್ಲಿ ವ್ಯಾಕ್ಸಿನ್ ಕಂಪನಿ ಆರ್ಡರ್ ಕೊಡುವಂತೆ ಕೇಳಿಕೊಂಡಿದೆ. ಆಗ ಯಾವುದೇ ಆರ್ಡರ್ ಕೊಡಲಿಲ್ಲ. ಇವತ್ತು ಬಿಜೆಪಿ ಮುಖವಾಡ ಕಳಚಿಬಿದ್ದಿದೆ. ಒಳ್ಳೆಯದಾದರೆ ಮಾತ್ರ ಎಲ್ಲರೂ ಫೋಟೋಗೆ ಫೋಸ್ ಕೊಡ್ತಾರೆ. ಎಡವಟ್ಟಾದರೆ ಬೇರೆಯವರ ಮೇಲೆ ಹಾಕಿ ನುಣುಚಿಕೊಂಡು ಓಡಿಹೋಗ್ತಾರೆ. ಜನರ ಪ್ರಾಣ ಉಳಿಸುವ ಕೆಲಸ ಮಾಡ್ತಿಲ್ಲ ಎಂದು ಕೃಷ್ಣ ಬೈರೇಗೌಡ ಟೀಕಿಸಿದ್ದಾರೆ.

  English summary
  Krishna Byre Gowda fires on central and Karnataka govt leaders for not handling Covid-19 crisis properly in karnataka. Read on.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X