ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತದ ಸಂವಿಧಾನದ ಬಗ್ಗೆ ಮಾತಾಡಿ ಎಂದರೆ, ಹಾಸನ ಪಂಚಾಯ್ತಿ ಬಗ್ಗೆ ಮಾತಾಡ್ತಾರೆ'

|
Google Oneindia Kannada News

ವಿಧಾನಸಭೆ, ಮಾ. 13: ಭಾರತದ ಸಂವಿಧಾನದ ಬಗ್ಗೆ ವಿಶೇಷ ಚರ್ಚೆಯಲ್ಲಿ ಮಾತನಾಡುವಾಗ ಹಾಸನದ ಪಂಚಾಯತಿ ಬಗ್ಗೆ ಮಾತಾಡ್ತಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಕಿಚಾಯಿಸಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು.

ವಿಧಾನಸಭೆಯಲ್ಲಿ ನಡೆಯುತ್ತಿರುವ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಹೊಳೆನರಸಿಪುರ ಶಾಸಕ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು, ಮಹಿಳಾ ಮೀಸಲಾತಿ ಕೊಡಬೇಕು, ಶೇಕಡಾ 49 ರಷ್ಟು ಮಹಿಳೆಯರಿದ್ದಾರೆ ಎಂದರು. ಮಧ್ಯೆ ಪ್ರವೇಶ ಮಾಡಿದ ಕಾನೂನು ಸಚಿವ ಮಾಧುಸ್ವಾಮಿ ಅವರು, ಹಾಸನ ಜಿಲ್ಲಾ ಪಂಚಾಯತ್ ನಲ್ಲಿ ಹೆಣ್ಣುಮಗಳೊಬ್ಬಳು ಸಭೆ ಮಾಡೋಕೆ ಬಿಡ್ತಿಲ್ಲ, ನೀವು ನೋಡಿದ್ರೆ ಮಹಿಳಾ ಮೀಸಲಾತಿ ಬಗ್ಗೆ ಮಾತಾಡ್ತೀರಿ ಎಂದು ಕಾಲೆಳೆದರು.

Talk about the Constitution not about the Hassan Panchayat

'ಸರ್ಕಾರದ ವೈಫಲ್ಯದಿಂದ ರಾಜ್ಯದಲ್ಲಿ ಕೊರೋನಾಗೆ ಮೊದಲ ಬಲಿ'

ಆಗ ರೇವಣ್ಣ ಉತ್ತರಿಸಿ, ಅಯ್ಯೋ ನಮ್ದು ತಪ್ಪಲ್ಲ, ಅವರ ಪಕ್ಷದವರೇ ಸಭೆಗೆ ಹೋಗಿಲ್ಲ, ನಾವೇನ್ ಮಾಡೋದು ಎಂದು ಸಮರ್ಥನೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ ಮಧ್ಯಪ್ರವೇಶ ಮಾಡಿ, ಭಾರತದ ಸಂವಿಧಾನದ ಬಗ್ಗೆ ಮಾತನಾಡುವಾಗ ಹಾಸನದ ಪಂಚಾಯತಿ ಬಗ್ಗೆ ಮಾತಾಡ್ತಾರೆ, ಬೇಕಾದ್ರೆ ಹಾಸನದ ಪಂಚಾಯ್ತಿ ಬಗ್ಗೆ ಮಾತಾಡೋದಕ್ಕೆ ಬೇರೆ ಟೈಮ್ ಕೊಡಿ ಅವರಿಗೆ ಎಂದು ಸದನದ ಸಮಯ ಹಾಳಾಗ್ತಿದೆ ಎಂದು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಆಗ ಎಚ್.ಡಿ. ರೇವಣ್ಣ ಅವರು ಕೃಷ್ಣ ಭೈರೇಗೌಡ ಅವರಿಗೆ, ನಾನೇನು ಹಾಸನ ಪಾಲಿಟಿಕ್ಸ್ ಮಾಡೋದಕ್ಕೆ ಬಂದಿಲ್ಲ, ಮಹಿಳಾ ಮೀಸಲಾತಿ ಬಗ್ಗೆ ಮಾತಾಡಿದ್ದು ಎಂದು ತಿರುಗೇಟು ನೀಡಿದ್ರು.

English summary
Talk about the constitution in the assembly means not talk about the panchayat of Hassan says Krishna Byre gowda in assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X