ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗಾಗಿ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಕೃಷಿ ಭಾಗ್ಯ

By ಆರ್ ರೂಪಕಲಾ, ವಾರ್ತಾ ಇಲಾಖೆ, ತುಮಕೂರು
|
Google Oneindia Kannada News

ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆಯಾಶ್ರಿತ ಪ್ರದೇಶದ ರೈತರ ಜೀವನೋಪಾಯ ಉತ್ತಮಪಡಿಸಲು 'ಕೃಷಿ ಭಾಗ್ಯ' ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಸ್ವಾಭಾವಿಕ ಸಂಪನ್ಮೂಲ ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ ಮತ್ತು ರೈತರು ಹಾಗೂ ಕೃಷಿ ಕಾರ್ಮಿಕರ ಆದಾಯ ಮಟ್ಟ ಹೆಚ್ಚಿಸುವುದು ಕೃಷಿ ಭಾಗ್ಯ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಮೊದಲ ಹಂತದಲ್ಲಿ ಕೃಷಿ ಭಾಗ್ಯ ಯೋಜನೆಯನ್ನು 23 ಜಿಲ್ಲೆಗಳ ವ್ಯಾಪ್ತಿಯ 5 ಮುಖ್ಯ ಒಣ ಭೂಮಿ ವಲಯಗಳ 45 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಕೃಷಿ ಸಂಬಂಧಿತ ನಾನಾ ಇಲಾಖೆಗಳ ಯೋಜನೆಗಳನ್ನು ಸಮ್ಮಿಲನಗೊಳಿಸಿ 2014-15ನೇ ಸಾಲಿನಲ್ಲಿ 9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

Krishi Bhagya

ಮಳೆಯಾಶ್ರಿತ ಕೃಷಿ ನೀತಿಯನ್ನು ಒಣ ವಲಯದಲ್ಲಿ ಅಳವಡಿಸಿ ರೈತ ಸಮುದಾಯದ ಸುಧಾರಿತ ಜೀವನೋಪಾಯವನ್ನು ಉತ್ತಮಪಡಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯನ್ನು ಮಿಷನ್ ಮೋಡ್ ಮಾದರಿಯಲ್ಲಿ ಹಂತ ಹಂತವಾಗಿ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.

ಯೋಜನೆಯ ಅನುಷ್ಠಾನ : 2014-15ನೇ ಸಾಲಿಗೆ ವರ್ಷಕ್ಕೆ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್, ರೇಷ್ಮೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ, ಸಹಕಾರ ಹಾಗೂ ಅರಣ್ಯ ಇಲಾಖೆಗಳು ತಮ್ಮ ಚಾಲ್ತಿಯಲ್ಲಿರುವ ಯೋಜನೆಗಳೊಂದಿಗೆ ಈ ಯೋಜನೆಯನ್ನೂ ಸಹ ಅನುಷ್ಠಾನಗೊಳಿಸಲಿವೆ.

ಪ್ಯಾಕೇಜ್ ಘಟಕಗಳು : ಕೃಷಿ ಭಾಗ್ಯ ಯೋಜನೆಯಡಿ ಮಳೆ ನೀರು ಸಂಗ್ರಹಣೆ ಮತ್ತು ಸಂರಕ್ಷಿತ ನೀರಾವರಿಗೆ ವಿಶೇಷ ಪ್ಯಾಕೇಜ್‌ಅನ್ನು ರೂಪಿಸಲಾಗಿದ್ದು, ಈ ಪ್ಯಾಕೇಜ್‌ನಡಿ ಪಾಲಿಥೀನ್/ಟಾರ್ಪಾಲಿನ ಸಹಿತ ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ಕೃಷಿ ಹೊಂಡದಿಂದ ನೀರನ್ನು ಬಳಸಲು ಗರಿಷ್ಠ 5 ಹೆಚ್.ಪಿ. ಡೀಸೆಲ್ ಪಂಪ್‌ಸೆಟ್ ಅನ್ನು ಶೇ.80ರ ರಿಯಾಯಿತಿ ದರದಲ್ಲಿ ನೀಡಲಾಗುವುದು ಹಾಗೂ ಗರಿಷ್ಠ 2 ಹೆಚ್.ಪಿ. ಸಾಮರ್ಥ್ಯದ ಸೋಲಾರ್ ಪಂಪ್‌ಸೆಟ್ ಅಳವಡಿಸಲು ಶೇ.50ರಷ್ಟು ಸಹಾಯಧನ ನೀಡಲಾಗುತ್ತದೆ.

ಪಾಲಿಹೌಸ್ ಸಹಿತ ಮಾದರಿ : ಈ ಘಟಕಕ್ಕೆ ಅರ್ಜಿ ಸಲ್ಲಿಸುವ ರೈತರು ತಮ್ಮ ಪಾಲಿನ ವೆಚ್ಚವನ್ನು ಸ್ವಂತ ಹೂಡಿಕೆಯಿಂದಾಗಲಿ, ಬ್ಯಾಂಕ್ ಸಾಲದ ಮುಖಾಂತರವಾಗಲಿ ಹೂಡಿಕೆ ಮಾಡುವ ಬಗ್ಗೆ ಖಾತ್ರಿ ನೀಡಿದಲ್ಲಿ ಒಟ್ಟು ವೆಚ್ಚಕ್ಕೆ ಗರಿಷ್ಠ ಶೇ.50ರ ಸಹಾಯಧನ ನೀಡಲಾಗುವುದು. ಈಗಾಗಲೇ ರೈತನು ಪಾಲಿಹೌಸ್ ಘಟಕವನ್ನು ಅಳವಡಿಸಿದ್ದಲ್ಲಿ ಉಳಿದ ಘಟಕಗಳಾದ ಕೃಷಿ ಹೊಂಡ, ಡೀಸೆಲ್ ಪಂಪ್‌ಸೆಟ್, ಲಘು ನೀರಾವರಿ ಘಟಕಗಳ ಅಳವಡಿಕೆಗೆ ಆದ್ಯತೆ ನೀಡಲಾಗುವುದು.

ಪಾಲಿಹೌಸ್ ರಹಿತ ಮಾದರಿ : ಈ ಘಟಕದಡಿ ತೋಟಗಾರಿಕೆ ಬೆಳೆ ಬೆಳೆಯಲು ಸಾಮಾನ್ಯ ರೈತರಿಗೆ ಶೇ.80 ಹಾಗೂ ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಶೇ.9೦ರಷ್ಟು ಸಹಾಯಧನವಿದ್ದು, ಕೃಷಿ ಬೆಳೆಗಳಲ್ಲಿ ಪರಿವರ್ತಿತ ಬೆಳೆ ಪದ್ಧತಿಗೆ ಗರಿಷ್ಠ 5ಸಾವಿರ ರೂ.ಗಳ ಸಹಾಯಧನ ನೀಡಲಾಗುವುದು. ರೈತರು ಈ ಯೋಜನೆಯ ಲಾಭ ಪಡೆಯಲು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೃಷಿ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕು.

ಯಾವ ಜಿಲ್ಲೆಗಳು : ಮೊದಲ ಹಂತದಲ್ಲಿ ರಾಜ್ಯದ 23 ಜಿಲ್ಲೆಗಳ 105 ತಾಲೂಕುಗಳಲ್ಲಿ ಯೋಜನೆ ಅನುಷ್ಠಾನವಾಗಲಿದ್ದು, ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ, ಗುಲ್ಬರ್ಗ, ಯಾದಗಿರಿಗಳಲ್ಲಿ ಜಾರಿಯಾಗಲಿದೆ.

English summary
A new scheme called ‘Krishi Bhagya’ was introduced for the benefit of rain-fed farmers in Karnataka. The Rs 500-crore scheme will be initially implemented in five major dry land zones, covering 45 lakh hectares across 23 districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X