ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15ನೇ ವಿಧಾನಸಭೆಯಿಂದ 17 ಶಾಸಕರು ಅನರ್ಹ, ಮುಂದೇನು?

|
Google Oneindia Kannada News

ಬೆಂಗಳೂರು, ಜುಲೈ 28: ಕಾಂಗ್ರೆಸ್ -ಜೆಡಿಎಸ್ ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ಕುರಿತಂತೆ ಭಾನುವಾರ ಬೆಳಗ್ಗೆ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಸುದ್ದಿಗೋಷ್ಠಿ ಕರೆದಿದ್ದರು. "ರಾಜೀನಾಮೆ ನೀಡಿರುವ 14 ಶಾಸಕರನ್ನು 15ನೇ ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ" ಎಂದು ಪ್ರಕಟಿಸಿದರು

ಗುರುವಾರ ಜುಲೈ 25ರಂದು ಮೂರು ಶಾಸಕರನ್ನು 15ನೇ ವಿಧಾನಸಭೆಯಿಂದ ಅನರ್ಹಗೊಳಿಸಿ, ಆದೇಶ ಹೊರಡಿಸಿದ್ದರು. ಈ ಮೂಲಕ ಒಟ್ಟಾರೆ, 17 ಶಾಸಕರು ಹಾಲಿ ವಿಧಾನಸಭೆ ಅವಧಿ ಮುಗಿಯುವ ತನಕ ವಿಧಾನಸಭೆ ಪ್ರವೇಶಿಸುವಂತಿಲ್ಲ, ಉಪ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಸ್ಪೀಕರ್ ರಮೇಶ್ ಕುಮಾರ್ ಪತ್ರಿಕಾಗೋಷ್ಠಿ : 14 ಶಾಸಕರು ಅನರ್ಹಸ್ಪೀಕರ್ ರಮೇಶ್ ಕುಮಾರ್ ಪತ್ರಿಕಾಗೋಷ್ಠಿ : 14 ಶಾಸಕರು ಅನರ್ಹ

ಈ ನಡುವೆ ಸುದ್ದಿಗೋಷ್ಠಿಯಲ್ಲಿ ಜೈಪಾಲ್ ರೆಡ್ಡಿ ಸ್ಮರಿಸಿ ಕಣ್ಣೀರಿಟ್ಟ ಸ್ಪೀಕರ್ ರಮೇಶ್ ಕುಮಾರ್, ದಿವಂಗತ ಜೈಪಾಲ್ ರೆಡ್ಡಿ ನನ್ನ ಸಾರ್ವಜನಿಕ ಬದುಕಿನ ಮಾರ್ಗದರ್ಶಿ ಎಂದರು.

ಅನರ್ಹತೆ ಬಗ್ಗೆ : ಜುಲೈ 28ರಿಂದ ಜಾರಿಗೆ ಬರುವಂತೆ ಕಾಂಗ್ರೆಸ್ 11 ಶಾಸಕರು ಹಾಗೂ 3 ಜೆಡಿಎಸ್ ಶಾಸಕರನ್ನು ಇಂದು ಅನರ್ಹಗೊಳಿಸಲಾಗಿದೆ. ಜುಲೈ 25ರಂದು 3 ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಒಟ್ಟಾರೆ 17 ಶಾಸಕರನ್ನು 2023ರ ತನಕ ಅನರ್ಹಗೊಳಿಸಲಾಗಿದೆ.

ಸಂವಿಧಾನದ 10ನೇ ಶೆಡ್ಯೂಲ್ ಬಗ್ಗೆ ಸಿದ್ದರಾಮಯ್ಯ

ಸಂವಿಧಾನದ 10ನೇ ಶೆಡ್ಯೂಲ್ ಬಗ್ಗೆ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಕಲಾಪದಲ್ಲಿ ವಿವರಿಸಿದಂತೆ : "ಸಂವಿಧಾನದ 10ನೇ ಶೆಡ್ಯೂಲ್ ನ ಪ್ಯಾರಗ್ರಾಫ್‌ 2ಎ ಮತ್ತು 1ಎ, ಬಿ ಎಂಬ ಕ್ಲಾಸ್‌ಗಳಿವೆ. ಒಂದರಲ್ಲಿ ವಿಪ್‌, ರಾಜೀನಾಮೆ ಕೊಡಬೇಕಾಗಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳು ನಡೆದರೆ ಅನರ್ಹತೆಗೆ ಅವಕಾಶವಿದೆ. 2ಎ ಬಿನಲ್ಲಿ ಕೂಡ ಅನರ್ಹತೆಗೆ ಅವಕಾಶವಿದೆ". ಪಕ್ಷೇತರ ಶಾಸಕರಾಗಿ ಕೆಪಿಜೆಪಿಯಿಂದ ಸ್ಪರ್ಧಿಸಿ ನಂತರ ಕಾಂಗ್ರೆಸ್ ಜತೆ ಪಕ್ಷ ವಿಲೀನಗೊಳಿಸಿದ ರಾಣೇಬೆನ್ನೂರು ಕ್ಷೇತ್ರದಿಂದ ಗೆದ್ದ ಆರ್ ಶಂಕರ್ ಅವರು ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ, ಹೀಗಾಗಿ, ಮೂವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ರಮೇಶ್ ಕುಮಾರ್ ಗೆ ದೂರು ಸಲ್ಲಿಸಿದ್ದರು.

ಅನರ್ಹತೆಗೆ ಕಾರಣ

ಅನರ್ಹತೆಗೆ ಕಾರಣ

ಅನರ್ಹತೆಗೆ ಕಾರಣ: ಜನಪ್ರತಿನಿಧಿ ಕಾಯ್ದೆ 164 1ಬಿ ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ಶಾಸಕರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ದೂರು ದಾಖಲಾಗಿದೆ. ತಮಿಳುನಾಡು ಮಾದರಿಯಲ್ಲಿ ವಿಪ್ ಉಲ್ಲಂಘನೆ ಎಲ್ಲವನ್ನು ಪರಿಗಣಿಸಿ ಶಾಸಕ ಆರ್ ಶಂಕರ್ ರನ್ನು ಅನರ್ಹಗೊಳಿಸಲಾಗಿದೆ. ರವಿ ನಾಯ್ಕ್ ಪ್ರಕರಣ, ಎಂ ವೆಂಕಯ್ಯನಾಯ್ಡು ಅವರು ನೀಡಿದ ತೀರ್ಪು ಮುಂತಾದ ಅನೇಕ ಪ್ರಕರಣಗಳನ್ನು ಮುಂದಿಟ್ಟುಕೊಂಡು, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಪರಿಗಣಿಸಿ, ಕಾಂಗ್ರೆಸ್ಸಿನ ಎರಡು ದೂರು ಹಾಗು ಜೆಡಿಎಸ್ ನೀಡಿದ ಒಂದು ದೂರನ್ನು ಅಂಗೀಕರಿಸಿ, ಕ್ರಮ ಕೈಗೊಂಡಿದ್ದಾರೆ.

ಆರ್.ಶಂಕರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅನರ್ಹತೆಗೆ ಕಾರಣಆರ್.ಶಂಕರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅನರ್ಹತೆಗೆ ಕಾರಣ

ಅನರ್ಹಗೊಂಡವರ ಮುಂದಿನ ನಡೆ

ಅನರ್ಹಗೊಂಡವರ ಮುಂದಿನ ನಡೆ

ಒಟ್ಟು ಮೂರು ಶಾಸಕರು 15ನೇ ವಿಧಾನಸಭೆಯಿಂದ ಅನರ್ಹಗೊಂಡಿದ್ದಾರೆ. ಈ ಮೂರು ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ, ಹಾಲಿ ವಿಧಾನಸಭೆ ವಿಸರ್ಜನೆಯಾದರೆ ಮಾತ್ರ ಸಾಧ್ಯತೆ, ರಾಣೇಬೆನ್ನೂರು ಶಾಸಕ ಆರ್ ಶಂಕರ್ ನಂತರ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಕೂಡಾ ಅನರ್ಹ. ಮೂವರು ಸೇರಿದಂತೆ ಇಂದು ಅನರ್ಹಗೊಂಡ 14 ಶಾಸಕರು, ಸ್ಪೀಕರ್ ರಮೇಶ್ ಕುಮಾರ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೊರೆ ಹೋಗಲಿದ್ದಾರೆ. ಆರ್ ಶಂಕರ್ ಅವರು ಪಕ್ಷೇತರರಾಗಿದ್ದು, ಹೈಕೋರ್ಟಿನಲ್ಲಿ ಪ್ರಶ್ನಿಸಲಿದ್ದಾರೆ.

ಪಕ್ಷಗಳಿಂದ ಅಮಾನತು, ಉಚ್ಚಾಟನೆ ಸಾಧ್ಯತೆ

ಪಕ್ಷಗಳಿಂದ ಅಮಾನತು, ಉಚ್ಚಾಟನೆ ಸಾಧ್ಯತೆ

ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಶಾಸಕರು ಮತ್ತೆ ಅರ್ಜಿ ಸಲ್ಲಿಸಿದರೆ ಅದರ ವಿಚಾರಣೆಯೂ ಆ ಅರ್ಜಿಗಳ ಜೊತೆಗೆ ನಡೆಯಲಿದೆ. ಅನರ್ಹಗೊಂಡಿರುವ ಶಾಸಕರು ಶಾಸಕ ಸ್ಥಾನದಿಂದ ಮಾತ್ರ ಅನರ್ಹಗೊಂಡಿದ್ದಾರೆ. ಪಕ್ಷದಲ್ಲಿ ಇನ್ನೂ ಉಳಿದುಕೊಂಡಿದ್ದಾರೆ. ಕಾಂಗ್ರೆಸ್ 14 ಹಾಗೂ ಜೆಡಿಎಸ್ 3 ಶಾಸಕರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡುವ ಸಾಧ್ಯತೆಯೂ ದಟ್ಟವಾಗಿವೆ. ಅನರ್ಹತೆ ಆದೇಶಕ್ಕೂ ಮುಂಚಿತವಾಗಿ ಪಕ್ಷದಿಂದ ಅಮಾನತು ಅಥವಾ ಉಚ್ಚಾಟನೆ ಮಾಡಿದ್ದರೆ ರೆಬೆಲ್ ಗಳಿಗೆ ಅನುಕೂಲವಾಗುತ್ತಿತ್ತು. ಪಕ್ಷದಿಂದ ಹೊರಬಿದ್ದ ಕಾರಣ, ಬಿಜೆಪಿಗೆ ಸೇರಬಹುದಾಗಿತ್ತು. ಹಾಲಿ ವಿಧಾನಸಭೆಗೆ ಹಾಜರಾಗಬಹುದಾಗಿತ್ತು. ಆದರೆ, ಸದನಕ್ಕೆ ಹಾಜರಾಗದಂತೆ ತಡೆಯಲು

English summary
Karnataka Assembly Speaker KR Ramesh Kumar rules that 14 MLAs with previous 3 MLAs also disqualified from the legislative assembly till it's expiry. These disqualified MLAs can't contest in the by-polls till 2023 if it completes full term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X