ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ದರ ಎರಡನೇ ಬಾರಿ ಏರಿಕೆ, ಸಾಲಮನ್ನಾ ಹೊರೆ ಸರಿದೂಗಿಸಲು ಕ್ರಮ?

|
Google Oneindia Kannada News

Recommended Video

ವಿದ್ಯುತ್ ದರ ಎರಡನೇ ಬಾರಿ ಏರಿಕೆ | Oneindia Kannada

ಬೆಂಗಳೂರು, ಅಕ್ಟೋಬರ್ 01: ರಾಜ್ಯದಲ್ಲಿ ವಿದ್ಯುತ್ ದರ ಮತ್ತೆ ಹೆಚ್ಚಳವಾಗಿದೆ. ಈ ಬಾರಿ ಪ್ರತಿ ಯುನಿಟ್‌ಗೆ 14 ಪೈಸೆ ಹೆಚ್ಚಿಸಲಾಗಿದೆ. ಇದೇ ವರ್ಷದ ಮೇ ತಿಂಗಳಿನಲ್ಲಿ 25 ರಿಂದ 38 ಪೈಸೆ ಪ್ರತಿ ಯುನಿಟ್‌ಗೆ ಏರಿಸಲಾಗಿತ್ತು.

ಪರಿಷ್ಕೃತ ದರವು ಅಕ್ಟೋಬರ್‌ 01 ರಿಂದಲೇ ಜಾರಿಗೆ ಬರುವಂತೆ ಇಂಧನ ಹೊಂದಾಣಿಕೆ ಶುಲ್ಕ(ಎಫ್‌ಎಸಿ) ಸಂಗ್ರಹ ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಎಲ್ಲ ಪ್ರಸರಣ ನಿಗಮ ಮಂಡಳಿಗಳಿಗೆ ಆದೇಶ ಹೊರಡಿಸಿದೆ. ಸಾಲಮನ್ನಾದ ಹೊರೆಯನ್ನು ತಗ್ಗಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮಧ್ಯರಾತ್ರಿಯಿಂದ ಮತ್ತೆ ಮೇಲೇರಿತು ಅಡುಗೆ ಇಂಧನ ದರಮಧ್ಯರಾತ್ರಿಯಿಂದ ಮತ್ತೆ ಮೇಲೇರಿತು ಅಡುಗೆ ಇಂಧನ ದರ

ಪ್ರಸ್ತುತ ಪರಿಸ್ಥಿತಿಯಲ್ಲಿ ಕಲ್ಲಿದ್ದಲು ಕೊರತೆ ಇದೆ. ಪ್ರಕೃತಿ ವಿಕೋಕಪದ ಕಾರಣದಿಂದ ಹಲವೆಡೆ ಸಾಗಾಟ ತೊಂದರೆಗಳು ಆಗಿವೆ. ವಿದ್ಯುತ್ ಉತ್ಪಾದನೆಗೂ ಪೆಟ್ಟು ಬಿದ್ದಿದೆ. ಹಾಗಾಗಿ ವಿದ್ಯುತ್ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

KPTCL hiked power price by 14 paise per unit

ಮತ್ತೆ ಜನಸಾಮಾನ್ಯನ ಜೇಬಿಗೆ ಕತ್ತರಿ!ತೈಲಬೆಲೆ ಕಡಿಮೆನೇ ಆಗ್ವಲ್ದು ರೀ!ಮತ್ತೆ ಜನಸಾಮಾನ್ಯನ ಜೇಬಿಗೆ ಕತ್ತರಿ!ತೈಲಬೆಲೆ ಕಡಿಮೆನೇ ಆಗ್ವಲ್ದು ರೀ!

ಕಳೆದ ತ್ರೈಮಾಸಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 94 ಕೋಟಿ ಹೆಚ್ಚುವರಿ ಹೊರೆ ಇಲಾಖೆಯ ಮೇಲೆ ಬಿದ್ದಿದೆ, ಅದನ್ನು ಗ್ರಾಹಕರ ಮೇಲೆ ವರ್ಗಾಯಿಸಲೇ ಬೇಕಾಗಿದೆ ಹಾಗಾಗಿ ಬೆಲೆ ಏರಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಪರಿಷ್ಕೃತ ದರವು ಡಿಸೆಂಬರ್ 31ರ ವರೆಗೆ ಇರಲಿದೆ. ಆ ನಂತರ ಮತ್ತೆ ದರ ಪರೀಷ್ಕರಣೆ ನಡೆಯಲಿದೆ. ಆಗ ವಿದ್ಯುತ್ ಬೆಲೆ ಇಳಿಯಬಹುದು ಅಥವಾ ಏರಬಹುದು.

ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು? ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು?

ರಾಜ್ಯಾದ್ಯಂತ ಶೇ.6ರಷ್ಟು ವಿದ್ಯುತ್ ದರ ಹೆಚ್ಚಳ ಮಾಡಿದ ಕೆಇಆರ್‌ಸಿ ರಾಜ್ಯಾದ್ಯಂತ ಶೇ.6ರಷ್ಟು ವಿದ್ಯುತ್ ದರ ಹೆಚ್ಚಳ ಮಾಡಿದ ಕೆಇಆರ್‌ಸಿ

English summary
KPTCL hiked power price by 14 paise per unit. It will be affect from October 1st. This is the second time price hike by KPTCL in this year. Last time in May KPTCL hiked 25 to 35 paise per unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X