ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಸ್‌ಸಿ ನೇಮಕಾತಿ : ವಿಧೇಯಕ ಮಂಡಿಸಿದ ಕರ್ನಾಟಕ ಸರ್ಕಾರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 19 : ಕರ್ನಾಟಕ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಂಬಂಧ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದೆ.

ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳ ನೇಮಕಾತಿಗಾಗಿ ಅಭ್ಯರ್ಥಿಗಳ ಆಯ್ಕೆ ಕಾರ್ಯವಿಧಾನ ವಿಧೇಯಕವನ್ನು ಮಂಡಿಸಲಾಗಿದೆ. ನೇಮಕಾತಿಯಲ್ಲಿ ಆಗಿರುವ ದೋಷವನ್ನು ಸರಿಪಡಿಸಲು ಇದು ಸಹಕಾರಿಯಾಗಲಿದೆ.

ಕೆಪಿಎಸ್‌ಸಿ ನೇಮಕಾತಿ : 381 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ತ್ವರೆ ಮಾಡಿಕೆಪಿಎಸ್‌ಸಿ ನೇಮಕಾತಿ : 381 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ತ್ವರೆ ಮಾಡಿ

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಂಬಂಧ 1998, 1999 ಹಾಗೂ 2004ರಲ್ಲಿ ಆಗಿರುವ ಲೋಪ ಸರಿಪಡಿಸಲು ಸರ್ಕಾರ ಮುಂದಾಗಿದೆ. ರಾಜ್ಯದ ಸಿವಿಲ್ ಸೇವೆಗಳಲ್ಲಿ ಯಾವುದೇ ಹುದ್ದೆ ನೇಮಕಾತಿಗಾಗಿ ಆಯ್ಕೆಯ ಕಾರ್ಯ ವಿಧಾನ ಅನುಸೂಚಿತ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಡಿಸಲು ಸಹಕಾರಿಯಾಗಲಿದೆ.

ಕೆಪಿಎಸ್ ಸಿ 110 ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭ, ಅರ್ಜಿ ಹಾಕಿಕೆಪಿಎಸ್ ಸಿ 110 ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭ, ಅರ್ಜಿ ಹಾಕಿ

KPSC row : Karnataka govt tabled the bill

ವಿಧೇಯಕದ ಅನ್ವಯ ಇನ್ನು ಮುಂದೆ ಆಯ್ಕೆ ಪ್ರಾಧಿಕಾರ. ಮೂರು ಹಂತದಲ್ಲಿ ಅಭ್ಯರ್ಥಿ ಪಟ್ಟಿ ತಯಾರಿಸಲು ತಿದ್ದುಪಡಿ ತರಲಾಗಿದೆ. ಮೊದಲನೆಯದಾಗಿ ಕೇವಲ ಅರ್ಹತೆ ಆಧಾರದ ಮೇಲೆ ಪಟ್ಟಿ ತಯಾರಿಸಬೇಕು.

ಕೆಪಿಎಸ್‌ಸಿ ಎದುರು ಕೈಕಟ್ಟಿನಿಂತ ಪದವೀಧರರ ಕರುಣಾಜನಕ ಕಥೆಗಳುಕೆಪಿಎಸ್‌ಸಿ ಎದುರು ಕೈಕಟ್ಟಿನಿಂತ ಪದವೀಧರರ ಕರುಣಾಜನಕ ಕಥೆಗಳು

2ನೇ ಪಟ್ಟಿಯಲ್ಲಿ ಸಾಮಾನ್ಯ ಅರ್ಹತೆ ಮೇರೆಗೆ ಅಂದರೆ ಪ.ಜಾ/ಪ.ಪಂ ಹಾಗೂ ಹಿಂದುಳಿದ ವರ್ಗಗಳಿಗಾಗಿ ಮೀಸಲಿಡುವ ಹುದ್ದೆಗಳನ್ನು ಬಿಟ್ಟು ಇತರ ಹುದ್ದೆಗಳ ಭರ್ತಿಗೆ ಮೊದಲನೇ ಪಟ್ಟಿಯಿಂದ ಹೆಸರು ತೆಗೆದು ಅರ್ಹತೆ ಆಧಾರದ ಮೇಲೆ ಸಿದ್ಧಪಡಿಸಬೇಕು.

ಮೊದಲು ಮತ್ತು 2ನೇ ಪಟ್ಟಿಯ ಭಾಗವನ್ನು ಹೊರತುಪಡಿಸಿ 3ನೇ ಪಟ್ಟಿಯನ್ನು ಅನುಸೂಚಿತ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಹೆಸರು ಒಳಗೊಂಡಂತೆ ಪ್ರತಿಯೊಂದು ವರ್ಗಕ್ಕೆ ಮೀಸಲಿಡುವ ಹುದ್ದೆಗಳಿಗೆ ಸಮಾನವಾಗಿ ಮೊದಲನೇ ಪಟ್ಟಿಯಲ್ಲಿ ನಿಗದಿಪಡಿಸಿದ ಅರ್ಹತೆಗೆ ಅನುಗುಣವಾಗಿ ಅನುಕ್ರಮ ತಯಾರಿಸಬೇಕು.

ಹೀಗೆ ತಯಾರು ಮಾಡಿದ ಮೂರು ಪಟ್ಟಿಗಳ ಅನ್ವಯವೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹೆಚ್ಚುವರಿ ಪಟ್ಟಿ ತಯಾರು ಮಾಡುವ ಸಂದರ್ಭದಲ್ಲಿಯೂ ಇದೇ ಮಾದರಿಯನ್ನು ಅನುಸರಿಸಬೇಕಾಗುತ್ತದೆ.

English summary
Karnatka government tabled The Karnataka Civil Service (Procedure for Selection of Candidates during Recruitment) Bill, 2018. Bill provides for restoring a rule, wherein candidates belonging to SC/ST and OBC groups securing high marks in KPSC exams would find themselves in the general merit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X