ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬಕಾರಿ ಇಲಾಖೆ ನೇಮಕಾತಿ : ಕೀ ಉತ್ತರ ಪ್ರಕಟಿಸಿದ ಕೆಪಿಎಸ್‌ಸಿ

|
Google Oneindia Kannada News

ಬೆಂಗಳೂರು, ಮೇ 13 : ಕರ್ನಾಟಕ ಲೋಕಸೇವಾ ಆಯೋಗ ಅಬಕಾರಿ ಇಲಾಖೆಯಲ್ಲಿನ ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳ ನೇಮಕಾತಿಗಾಗಿ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿತ್ತು. ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕರ್ನಾಟಕ ಲೋಕಸೇವಾ ಆಯೋಗ ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳ ನೇಮಕಾತಿಗಾಗಿ 17-02-2019 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಸದರಿ ಪರೀಕ್ಷೆಯ ಪತ್ರಿಕೆ -IIರ ಕೀ ಉತ್ತರಗಳನ್ನು http://kpsc.kar.nic.in ವೆಬ್‌ಸೈಟ್‌ಗಳಲ್ಲಿ ಬಿಡುಗಡೆ ಮಾಡಿದೆ.

ನಿಮ್ಹಾನ್ಸ್ ನಲ್ಲಿ 115 ನರ್ಸಿಂಗ್ ಆಫೀಸರ್ ಹುದ್ದೆಗಳಿವೆ, ಅರ್ಜಿ ಹಾಕಿನಿಮ್ಹಾನ್ಸ್ ನಲ್ಲಿ 115 ನರ್ಸಿಂಗ್ ಆಫೀಸರ್ ಹುದ್ದೆಗಳಿವೆ, ಅರ್ಜಿ ಹಾಕಿ

ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯಲಾಗುವುದಿಲ್ಲ. ಕೀ ಉತ್ತರಗಳ ಕುರಿತಂತೆ ಅಭ್ಯರ್ಥಿಗಳ ಆಕ್ಷೇಪಣೆಗಳು ಇದ್ದರೆ ಆಕ್ಷೇಪಣೆಗಳ ವಿವರಗಳನ್ನು ಕಡ್ಡಾಯವಾಗಿ ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದ ನಮೂನೆಯಲ್ಲಿಯೇ ಕನ್ನಡ ಅಥವಾ ಇಂಗ್ಲೀಶ್‌ನಲ್ಲಿ ಸಲ್ಲಿಸಬೇಕು.

ಮಡಿಕೇರಿ : ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಖಾಲಿ ಇದೆಮಡಿಕೇರಿ : ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಖಾಲಿ ಇದೆ

KPSC releases answer key of excise department recruitment exam

ಆಕ್ಷೇಪಣೆ ಸಲ್ಲಿಸುವವರ ಇದರೊಂದಿಗೆ ಪ್ರತಿ ಪ್ರಶ್ನೆಗೆ ರೂ 50 ನಂತೆ ಶುಲ್ಕವನ್ನು ಐ.ಪಿ.ಓ. ಅಥವಾ ಡಿ.ಡಿ.ಮೂಲಕ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು ಇವರ ಹೆಸರಿಗೆ ಸಂದಾಯ ಮಾಡಬೇಕು. ಶುಲ್ಕ ಪಾವತಿಸದ ಆಕ್ಷೇಪಣೆ ತಿರಸ್ಕಾರವಾಗಲಿದೆ.

274 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಫ್‌ಎಸಿಟಿ274 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಫ್‌ಎಸಿಟಿ

ಪ್ರತಿ ಪ್ರಶ್ನೆಯ ಕೀ ಉತ್ತರಕ್ಕೆ ಸಲ್ಲಿಸುವ ಆಕ್ಷೇಪಣೆಗಳಿಗೆ ಪೂರಕವಾಗಿ ಇದನ್ನು ಪುಷ್ಠೀಕರಿಸುವ ಆಧಾರಗಳುಳ್ಳ ಪುಸ್ತಕಗಳ ಹೆಸರು, ಲೇಖಕರ ಹೆಸರು, ಪ್ರಕಶಾನದ ಪ್ರತಿ ಇತ್ಯಾದಿ ವಿವರಣೆಯೊಂದಿಗೆ ನಿಗದಿತ ನಮೂನೆಯಲ್ಲಿ 15-05-2019 ರೊಳಗಾಗಿ ಆಕ್ಷೇಪಣೆ ಸಲ್ಲಿಸಬೇಕು.

ವಿಳಾಸ : ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು - 560 001.

ದಿನಾಂಕ 15-05-2019 ರ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಆಕ್ಷೇಪಣೆ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಕೀ ಉತ್ತರಗಳನ್ನು ಆಯೋಗದ ವೆಬ್‍ಸೈಟ್‍ನಿಂದ ತೆಗೆಯಲಾಗುತ್ತದೆ.

English summary
Karnataka Public Service Commission (KPSC) released the key answer for the excise department recruitment exam held on 17/2/2019. Candidates can file objection before 15/5/2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X