• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರ್ಚ್ 20, 21ರಂದು ನಡೆಯಬೇಕಿದ್ದ ಎಸ್‌ಡಿಎ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದೂಡಿಕೆ

|

ಬೆಂಗಳೂರು, ಮಾರ್ಚ್ 11: ಪೂರ್ವಸಿದ್ಧತೆ ತಯಾರಿಗೆ ಸಮಯದ ಕೊರತೆ ಉಂಟಾಗಿರುವುದರಿಂದ ಇದೇ ತಿಂಗಳ 20 ಮತ್ತು 21ರಂದು ನಿಗದಿಯಾಗಿದ್ದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮುಂದೂಡಿದೆ.

ಮುಂದೂಡಲಾಗಿರುವ ಎಸ್‌ಡಿಎ ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆ: ಹೆಚ್ಚುವರಿ ಅವಕಾಶವಿಲ್ಲ ಎಂದ ಸುಪ್ರೀಂಕೋರ್ಟ್ಯುಪಿಎಸ್‌ಸಿ ಪರೀಕ್ಷೆ: ಹೆಚ್ಚುವರಿ ಅವಕಾಶವಿಲ್ಲ ಎಂದ ಸುಪ್ರೀಂಕೋರ್ಟ್

ಮಾರ್ಚ್ 20ರಂದು ಕಡ್ಡಾಯ ಕನ್ನಡ ಮತ್ತು ಮಾರ್ಚ್ 21ರಂದು ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಕನ್ನಡ ಪತ್ರಿಕೆಗಳ ಪರೀಕ್ಷೆಗಳನ್ನು ನಿಗದಿಗೊಳಿಸಲಾಗಿತ್ತು. ಆದರೆ, ಫೆಬ್ರವರಿ 28ರಂದು ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಹುದ್ದೆಗಳ ಭರ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುವುದು ಎಸ್‌ಡಿಎ ಪರೀಕ್ಷೆ ಮೇಲೆ ಪರಿಣಾಮ ಬೀರಿದೆ.

   Ramesh Jarkiholi ಏನು ಅಂಥ ನನಿಗೆ ಚೆನ್ನಾಗೇ ಗೊತ್ತು?? | D K Shivakumar | Oneindia Kannada

   ಜನವರಿ 24ರಂದು ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆಯ ಹಿಂದಿನ ದಿನ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದ ಪರೀಕ್ಷೆಯನ್ನು ಫೆ. 28ಕ್ಕೆ ಮುಂದೂಡಲಾಗಿತ್ತು. ಹೀಗಾಗಿ ಎಸ್‌ಡಿಎ ಪರೀಕ್ಷೆಗೆ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶ ಸಿಗುತ್ತಿಲ್ಲ. ಇದರಿಂದಾಗಿ ಪರೀಕ್ಷೆಯನ್ನು ಮುಂದೂಡಲಾಗುತ್ತಿದೆ ಎಂದು ಜಿ. ಸತ್ಯವತಿ ಹೇಳಿದ್ದಾರೆ.

   English summary
   KPSC in a statement said, SDA exam which were to be held on March 20 and 21 has been postponed till further orders.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X