ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಳಾಪಟ್ಟಿ ಪ್ರಕಟಿಸುವುದು ಮರೆತು ಅಲಸ್ಯ ತೋರಿದ ಕೆಪಿಎಸ್‌ಸಿ

|
Google Oneindia Kannada News

ಬೆಂಗಳೂರು, ಜನವರಿ 22: ಕರ್ನಾಟಕ ಲೋಕಸೇವಾ ಆಯೋಗ ಕೆಪಿಎಸ್‌ಸಿಯು ಎರಡು ವರ್ಷಗಳಿಂದ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿಸದೆ ಅಲಸ್ಯ ತೋರುತ್ತಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಯಗಳ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸುವ ಕೆಪಿಎಸ್‌ಸಿ ಏಕೆ ಇಷ್ಟು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಅಭ್ಯರ್ಥಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ವೇಳಾಪಟ್ಟಿಯಲ್ಲಿ ಎ, ಬಿ, ಸಿ ವರ್ಗದ ಹುದ್ದೆಗಳಿಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ವರ್ಷದ ಇಂತಿಷ್ಟೇ ಅವಧಿಯಲ್ಲಿ ನಡೆಸುವ ಸಮಯ ನಮೂದಾಗಿರುತ್ತದೆ. ಜೊತೆಗೆ ಇಲಾಖೆ ಪರೀಕ್ಷೆಗಳು, ನೇರ ನೇಮಕ, ಹೈದರಾಬಾದ್ ಕರ್ನಾಟಕ ಭಾಗದ ಹುದ್ದೆಗಳ ಭರ್ತಿಗೂ ಮೊದಲೇ ನೇಮಕ ಸಮಯ ನಿಗದಿಯಾಗಿರುತ್ತದೆ.

KPSC continue its negligence over publishing yearly time table

ಯುಪಿಎಸ್‌ಸಿ ಕೂಡ ವಾರ್ಷಿಕ ವೇಳಾಪಟ್ಟಿಯನ್ನು ಆಯಾ ವರ್ಷಾರಂಭಕ್ಕೂ ಮುನ್ನವೇ ಅಧಿಸೂಚನೆ ಹೊರಡಿಸುತ್ತದೆ. ಈ ತಿಂಗಳಲ್ಲಿ ನೇಮಕ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಲಾಗುತ್ತದೆ. ಈ ಮಾದರಿಯನ್ನು 2016ಕ್ಕೂ ಮುನ್ನ ಎರಡು ವರ್ಷ ಪಾಲಿಸಿ ಬಳಿಕ ಕೈಬಿಟ್ಟಿದೆ.

ಕೆಪಿಎಸ್‌ಸಿ ವಿವಿಧ ಪರೀಕ್ಷೆಗಳನ್ನು ಒಂದೇ ಅವಧಿಯಲ್ಲಿ ನಡೆಸಿ ತನ್ನ ಮೇಲೆ ಹೊರೆಯನ್ನು ಹೇರಿಕೊಳ್ಳುತ್ತಿದೆ. ಕಾಲ ಕಾಲಕ್ಕೆ ಪರೀಕ್ಷೆ ನಡೆಸಲು ಅಡ್ಡಿಯಾಗಿದೆ. ಫಲಿತಾಂಶವೂ ಕೂಡ ವಿಳಂಭವಾಗುತ್ತಿದೆ.

English summary
KPSC shows its negligence over publishing yearly time table for different examination. Last year it published time table like UPSC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X