ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಯುವ ಘಟಕದ ಕಿತ್ತಾಟಕ್ಕೆ ತುಪ್ಪ ಸುರಿದ ಡಿ.ಕೆ.ಶಿವಕುಮಾರ್!

|
Google Oneindia Kannada News

ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇರವಾಗಿ ಒಬ್ಬರನ್ನು ಆಯ್ಕೆ ಮಾಡುವುದನ್ನು ಬಿಟ್ಟು, ಆಂತರಿಕ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮುಂದಾದಾಗಲೇ ಭಿನ್ನಮತ ಆರಂಭವಾಗಲು ಶುರುವಾಯಿತು.

ಚಲಾವಣೆಯಾದ ಮತಗಳ ಪೈಕಿ ಅತಿಹೆಚ್ಚು ಮತಗಳು ಮೊಹಮ್ಮದ್ ನಲಪಾಡ್ ಅವರಿಗೆ ಬಂದಿದ್ದರೂ, ರಕ್ಷಾ ರಾಮಯ್ಯ ಅವರನ್ನು ಯುವ ಘಟಕದ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.

ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾಗೆ ಮೊಹಮದ್ ನಲಪಾಡ್ ಧಮ್ಕಿ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾಗೆ ಮೊಹಮದ್ ನಲಪಾಡ್ ಧಮ್ಕಿ

ಅಲ್ಲಿಂದ, ಎರಡು ಬಣಗಳ (ರಕ್ಷಾ ರಾಮಯ್ಯ, ನಲಪಾಡ್ ) ನಡುವೆ ಸದಾ ಒಂದಲ್ಲಾ ಒಂದು ಮೇಲಾಟ ನಡೆಯುತ್ತಲೇ ಬರುತ್ತಿದೆ. ಅದಕ್ಕೆ, ಎರಡು ದಿನಗಳ ಹಿಂದೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.

ಕೆಪಿಸಿಸಿ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ಭವ್ಯಾ ಅವರಿಗೆ ನಲಪಾಡ್ ಎಂಡ್ ಗ್ಯಾಂಗ್ ಧಮ್ಕಿ ಹಾಕಿದ ವಿದ್ಯಮಾನ ನಡೆದಿದೆ. ಇದಕ್ಕೆ, ಕೆಪಿಸಿಸಿ ಅಧ್ಯಕ್ಷರು ಪ್ರತಿಕ್ರಿಯಿಸಿದ ರೀತಿ, ಯುವ ಘಟಕದ ಒಂದು ಬಣ ಹುಬ್ಬೇರಿಸುವಂತೆ ಮಾಡಿದೆ.

 ದೇಶವನ್ನು ಉದ್ದೇಶಿಸಿ ಮೋದಿ 'ಪ್ರವಚನ': ಶವಗಳ ಮೆರವಣಿಗೆಯ ನಡುವೆ ಭಾಷಣದ ತೆವಲು ದೇಶವನ್ನು ಉದ್ದೇಶಿಸಿ ಮೋದಿ 'ಪ್ರವಚನ': ಶವಗಳ ಮೆರವಣಿಗೆಯ ನಡುವೆ ಭಾಷಣದ ತೆವಲು

 ಭವ್ಯಗೆ ಅವರಿಗೆ ನಲಪಾಡ್ ಮತ್ತು ಅವರ ಪಟಾಲಂ ಧಮ್ಕಿ

ಭವ್ಯಗೆ ಅವರಿಗೆ ನಲಪಾಡ್ ಮತ್ತು ಅವರ ಪಟಾಲಂ ಧಮ್ಕಿ

ಬುಧವಾರ (ಏ 21) ಸಂಜೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರೋ ಕಾಂಗ್ರೆಸ್ ಭವನದಲ್ಲಿ ಕೋವಿಡ್ ವಾರ್ ರೂಂ ನಿರ್ಮಾಣದ ಕೆಲಸದ ವೇಳೆ ಭವ್ಯಗೆ ಅವರಿಗೆ ನಲಪಾಡ್ ಮತ್ತು ಅವರ ಪಟಾಲಂ ಧಮ್ಕಿ ಹಾಕಿತ್ತು. ಈ ಸಂಬಂಧ ಭವ್ಯಾ ಅವರು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರನ್ನೂ ನೀಡಿದ್ದರು.

 ಅದೆಲ್ಲಾ ಬೋಗಸ್ ಕಂಪ್ಲೇಂಟ್, ಅದರಲ್ಲಿ ರಾಜಕೀಯ ಮಾಡಿದ್ದಾರೆ

ಅದೆಲ್ಲಾ ಬೋಗಸ್ ಕಂಪ್ಲೇಂಟ್, ಅದರಲ್ಲಿ ರಾಜಕೀಯ ಮಾಡಿದ್ದಾರೆ

ಕೆಪಿಸಿಸಿ ಕಚೇರಿಯಲ್ಲೇ ನಡೆದ ಘಟನೆ, ನಂತರ ಈ ವಿಚಾರ ಠಾಣೆಯ ಮೆಟ್ಟಲೇರಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, "ಅದೆಲ್ಲಾ ಬೋಗಸ್ ಕಂಪ್ಲೇಂಟ್, ಅದರಲ್ಲಿ ರಾಜಕೀಯ ಮಾಡಿದ್ದಾರೆ"ಎಂದು ಕೆಪಿಸಿಸಿ ಅಧ್ಯಕ್ಷರು ಹೇಳುವ ಮೂಲಕ, ನಲಪಾಡ್ ಸಮರ್ಥನೆಗೆ ನಿಂತುಕೊಂಡಿದ್ದಾರೆ.

 ಭವ್ಯಾ ಮತ್ತು ನಲಪಾಡ್ ಇಬ್ಬರೂ ಯುವ ಘಟಕದ ಮುಖಂಡರು

ಭವ್ಯಾ ಮತ್ತು ನಲಪಾಡ್ ಇಬ್ಬರೂ ಯುವ ಘಟಕದ ಮುಖಂಡರು

ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ಪಕ್ಷದ ವಲಯದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಭವ್ಯಾ ಮತ್ತು ನಲಪಾಡ್ ಇಬ್ಬರೂ ಯುವ ಘಟಕದ ಮುಖಂಡರು. ಹಾಗಿದ್ದಾಗ್ಯೂ, ಒಬ್ಬರ ಪರವಾಗಿ ಡಿಕೆಶಿ ನಿಂತಿರುವುದು ಎಷ್ಟು ಸರಿ ಎನ್ನುವ ಮಾತು ಕೆಪಿಸಿಸಿ ವಲಯದಲ್ಲಿ ಕೇಳಿ ಬರುತ್ತಿದೆ.

Recommended Video

Punjab ವಿರುದ್ಧ ರನ್ ಗಳಿಸೋಕೆ ಪರದಾಡಿದ್ರು ಮುಂಬೈ ಬ್ಯಾಟ್ಸ್ ಮೆನ್ ಗಳು | Oneindia Kannada

ಮಹಿಳೆಯರು ಎಂದರೆ ಕೇವಲ ಲಕ್ಷ್ಮಿ ಹೆಬ್ಬಾಳ್ಕರ್, ಸೌಮ್ಯ ರೆಡ್ಡಿ ಮಾತ್ರವೇ?

ಕೆಪಿಸಿಸಿ ಅಧ್ಯಕ್ಷರು ಈ ವಿಚಾರವನ್ನು ಸರಿಯಾಗಿ ನಿಭಾಯಿಸಬೇಕಿತ್ತು. ಇಲ್ಲದಿದ್ದರೆ, ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎನ್ನುವ ಸಂದೇಶ ರವಾನೆಯಾಗುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಅದಕ್ಕೆ ಸರಿಯಾಗಿ, ಬಿಜೆಪಿ ಕೂಡಾ ಈ ನಿಟ್ಟಿನಲ್ಲಿ ಟ್ವೀಟ್ ಮಾಡಿ, "ಮಹಿಳೆಯರು ಎಂದರೆ ಕೇವಲ ಲಕ್ಷ್ಮಿ ಹೆಬ್ಬಾಳ್ಕರ್, ಸೌಮ್ಯ ರೆಡ್ಡಿ ಮಾತ್ರವೇ? ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾ ಅವರು ಮಹಿಳೆ ಅಲ್ಲವೇ? ರೌಡಿಯೊಬ್ಬನಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಮಹಿಳೆಯ ಮೇಲಿನ ದಬ್ಬಾಳಿಕೆ ಪ್ರಕರಣವನ್ನು ಮುಚ್ಚಿ ಹಾಕುತ್ತಿರುವುದು ಖಂಡನೀಯ"ಎಂದು ಹೇಳಿದೆ.

English summary
KPCC Youth Wing Leaders Fight President D K Shivakumar Reaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X