• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಲಿಗೆ ಬಿಗಿಹಿಡಿದು ಮಾತನಾಡಿ: ಶೋಭಾ ಕರಂದ್ಲಾಜೆ ಆಕ್ರೋಶ

|

ಬೆಂಗಳೂರು, ಜುಲೈ 21: ತನ್ನ ವಿರುದ್ದ ಆರೋಪ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿರುದ್ದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡ ರಹೀಂಖಾನ್ ಅವರನ್ನು ಶೋಭಾ, ಬಿಜೆಪಿಯತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿರುವ ಖಂಡ್ರೆ ಮೇಲೆ ವಾಗ್ದಾಳಿ ನಡೆಸಿರುವ ಶೋಭಾ, ನಾಲಿಗೆ ಬಿಗಿಹಿಡಿದು ಮಾತನಾಡಿ ಎಂದು ಎಚ್ಚರಿಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಲೆಂದು 1001 ಮೆಟ್ಟಿಲೇರಿದ ಶೋಭಾ ಕರಂದ್ಲಾಜೆ

ನಾನಾಗಾಲಿ ಅಥವಾ ನಮ್ಮ ಪಕ್ಷದ ಯಾವುದೇ ಮುಖಂಡರು ರಹೀಂಖಾನ್ ಅವರನ್ನು ಸಂಪರ್ಕಿಸಿದರ ಬಗ್ಗೆ ಈಶ್ವರ್ ಖಂಡ್ರೆ ಅವರಲ್ಲಿ ಸಾಕ್ಷ್ಯಾಧಾರಗಳಿದ್ದರೆ ಬಿಡುಗಡೆ ಮಾಡಲಿ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ರಹೀಂಖಾನ್ ಅವರನ್ನು ಸೆಳೆಯಲು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪ್ರಯತ್ನ ನಡೆಸಿದ್ದರು ಎನ್ನುವ ಆರೋಪವನ್ನು ಈಶ್ವರ್‌ ಖಂಡ್ರೆ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಶೋಭಾ, ಅಸಲಿಗೆ ರಹೀಂಖಾನ್ ಅಂದರೆ ಯಾರು, ಯಾಕೆ ಅವರು ಸುಳ್ಳು ಹೇಳುತ್ತಿದ್ದಾರೆ. ಎಲ್ಲರ ದೂರವಾಣಿ ನಂಬರ್ ಅನ್ನು ಮುಖ್ಯಮಂತ್ರಿಯವರ ಕಚೇರಿ ಟ್ರ್ಯಾಪ್ ಮಾಡುತ್ತಿದೆಯಾ ಎನ್ನುವ ಪ್ರಶ್ನೆಯನ್ನು ಶೋಭಾ ಎತ್ತಿದ್ದಾರೆ.

ಸ್ಪೀಕರ್ ರಮೇಶ್‌ ಕುಮಾರ್ ವಿರುದ್ಧ ಗುಡುಗಿದ ಶೋಭಾ

ಆಪರೇಷನ್ ಕಮಲದ ಹೆಸರಿನಲ್ಲಿ ಬಿಜೆಪಿಯವರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ, ರಾಜ್ಯಪಾಲರಿಗೆ ಇದು ತಿಳಿಯುತ್ತಿಲ್ಲವೇ. ಶೋಭಾ ಕರಂದ್ಲಾಜೆ ಅವರು ರಹೀಂಖಾನ್ ಅವರನ್ನು ಸಂಪರ್ಕಿಸಿದ್ದಾರೆಂದು ಈಶ್ವರ್ ಖಂಡ್ರೆ ಆರೋಪಿಸಿದ್ದರು.

English summary
KPCC Working President Eshwar Khandre should not give wrong statement: BJP MP Shobha Karandlaje statement
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X