ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LPG ಸಬ್ಸಿಡಿ ರದ್ದು, ಮೋದಿ ವಿರುದ್ಧ ಖಂಡ್ರೆ ಗುಡುಗು

|
Google Oneindia Kannada News

ಬೆಂಗಳೂರು, ಸೆ. 07: ಮಹಿಳೆಯರಿಗೆ ಅನುಕೂಲಕರವಾಗಿದ್ದ ಅಡುಗೆ ಅನಿಲ ಸಬ್ಸಿಡಿಯನ್ನು ದಿಢೀರ್ ಎಂದು ರದ್ದುಗೊಳಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅನ್ಯಾಯ ಎಸಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ತೀವ್ರವಾಗಿ ಟೀಕಿಸಿದ್ದಾರೆ.

Recommended Video

ದೆಹಲಿಯಲ್ಲಿ CCB ಬಲೆಗೆ ಬಿದ್ದ ಡ್ರಗ್ ಡೀಲರ್ | Oneindia Kannda

ಕೇಂದ್ರ ಸರ್ಕಾರದ ವಿರುದ್ಧ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿ, ಮಹಿಳೆಯರ ಮತ ಪಡೆದು ಅಧಿಕಾರ ಬಂದ ಮೋದಿ ಸರ್ಕಾರ ಈಗ ಮಹಿಳೆಯರ ಡಬ್ಬಿ ಕಾಸಿಗೆ ಕೈ ಹಾಕುತ್ತಿದೆ ಎಂದಿದೆ.

KPCC working President Eshwar Khandre condemns dis continue of LPG Subsidy by Govt

ಸಬ್ಸಿಡಿ ರಹಿತ LPG ಸಿಲಿಂಡರ್ ಬೆಲೆ ಹೆಚ್ಚು ಬದಲಾವಣೆ ಇಲ್ಲ ಸಬ್ಸಿಡಿ ರಹಿತ LPG ಸಿಲಿಂಡರ್ ಬೆಲೆ ಹೆಚ್ಚು ಬದಲಾವಣೆ ಇಲ್ಲ

ಮಹಿಳೆಯರು ಬಳಸುವ ಗ್ಯಾಸ್ ಸಬ್ಸಿಡಿ ರದ್ದು ಮಾಡುವ ಮೂಲಕ ಮಧ್ಯಮ ವರ್ಗದ ಜನರಿಗೆ ಸರ್ಕಾರ ಮೋಸ ಮಾಡಿದೆ. ಮಹಿಳೆಯರು ಕೂಡಿಡುವ ಡಬ್ಬಿ ಹಣಕ್ಕೂ ಕನ್ನಹಾಕಿದೆ, ಈಗ ಹೇಳಿ ಸಬ್ಸಿಡಿ ರದ್ದು ಮಾಡಿದ್ದು ನಿಮ್ಮ ಸರ್ಕಾರವೋ? ಇಲ್ಲಾ ಅದು ಕೂಡ Act of God ಪರಿಣಾಮವೋ?

 ವಾಟ್ಸಾಪ್ ಮೂಲಕ LPG ಸಿಲಿಂಡರ್ ಬುಕ್ ಮಾಡೋದು ಹೇಗೆ? ವಾಟ್ಸಾಪ್ ಮೂಲಕ LPG ಸಿಲಿಂಡರ್ ಬುಕ್ ಮಾಡೋದು ಹೇಗೆ?

ಉಜ್ವಲ ಹೆಸರಿನಲ್ಲಿ ಪ್ರಚಾರ ಗಿಟ್ಟಿಸುವ ಬಿಜೆಪಿಯವರೇ, ನಿಮ್ಮ ನಿಲುವನ್ನ ಇಲ್ಲಿ ಪ್ರದರ್ಶಿಸಿ ಎಂದು ಸರಣಿ ಟ್ವೀಟ್ ಮೂಲಕ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿ ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?

ಸೆಪ್ಟೆಂಬರ್‌ 1 ರಂದು ಸಬ್ಸಿಡಿ ರಹಿತ ಎಲ್‌ಪಿಜಿ ಅಥವಾ ದ್ರವೀಕೃತ ಪೆಟ್ರೋಲಿಯಂ ಅನಿಲ ಬೆಲೆಗಳು ಹೆಚ್ಚಿನ ಮಹಾನಗರಗಳಲ್ಲಿ ಬದಲಾವಣೆ ಮಾಡಿರಲಿಲ್ಲ. ಇದು ಜೂನ್ ಮತ್ತು ಜುಲೈನಲ್ಲಿ ಅಲ್ಪ ಏರಿಕೆಯ ನಂತರ ಎಲ್‌ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲದ ಎರಡನೇ ತಿಂಗಳಾಗಿತ್ತು. ಆದರೆ ಈ ಖುಷಿ ವಿಚಾರದ ಜೊತೆಗೆ ಸಬ್ಸಿಡಿ ನೀಡುವುದನ್ನು ನಿಲ್ಲಿಸುವುದಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಎಲ್ ಪಿಜಿ ಸಿಲಿಂಡರ್ ಬೆಲೆ ನಿರಂತರ ಏರಿಕೆ, ಜಾಗತಿಕವಾಗಿ ತೈಲ ದರ ಕುಸಿತ ಮುಂತಾದ ಕಾರಣಗಳನ್ನು ಸರ್ಕಾರ ನೀಡಿ, ಸಬ್ಸಿಡಿ ದರವನ್ನು ರದ್ದುಗೊಳಿಸುತ್ತಿರುವುದಾಗಿ ಹೇಳಿತ್ತು.

English summary
KPCC working President Eshwar Khandre tweeted and condemned Union government for dis continuing Subsidy given to LPG cylinder for women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X