ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಶಿತಾ ಸೇರಿ ಎಷ್ಟು ಹೆಣ್ಣು ಮಕ್ಕಳನ್ನು ಕಾಡಿದ್ದೀರಿ: ನಳಿನ್ ಕಟೀಲ್‌ಗೆ ಕಾಂಗ್ರೆಸ್ ಪ್ರಶ್ನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಉಪ ಚುನಾವಣೆಯ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ, ಚುನಾವಣಾ ಪ್ರಚಾರ ಮುಗಿದ ನಂತರವೂ ಮುಂದುವರಿದಿದೆ.

ಬಿಜೆಪಿ ಮತ್ತು ಜೆಡಿಎಸ್ ಉಪ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದ ಕಟೀಲ್, "ಅದೆಲ್ಲಾ ಕಾಂಗ್ರೆಸ್‌ನವರು ಮಾಡುವ ರಾಜಕೀಯ, ಒಳ ಒಪ್ಪಂದ. ಎಷ್ಟಾದರೂ ಅದು ತಲೆಹಿಡುಕ ಪಕ್ಷವಲ್ಲವೇ"ಎಂದು ಹೇಳಿದ್ದರು.

 ರಾಜಕೀಯ, ವೈಯಕ್ತಿಕ ಸಂಬಂಧ ಬೇರೆ ಬೇರೆ: ಮತ್ತೆ ಋಜುವಾತು ಮಾಡಿದ ಬಿಜೆಪಿ, ಕಾಂಗ್ರೆಸ್ ನಾಯಕರು ರಾಜಕೀಯ, ವೈಯಕ್ತಿಕ ಸಂಬಂಧ ಬೇರೆ ಬೇರೆ: ಮತ್ತೆ ಋಜುವಾತು ಮಾಡಿದ ಬಿಜೆಪಿ, ಕಾಂಗ್ರೆಸ್ ನಾಯಕರು

ಇದಕ್ಕೆ ಕೆಪಿಸಿಸಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು ಹೀಗೆ, "ಕಾಮಿಡಿ ಕಿಂಗ್ @nalinkateel ಅವರ ನಾಲಿಗೆಗೂ ಮೆದುಳಿಗೂ ಕನೆಕ್ಷನ್ ತಪ್ಪಿ ಹೋಗಿದೆ. ತಲೆಹಿಡುಕ ಯಾರೆಂದು ಕೇಳಿದರೆ ಮಂಗಳೂರು ಭಾಗದ ಜನತೆ ಬಗೆಬಗೆಯಾಗಿ ಕಟೀಲ್‌ರ ರಾಸಲೀಲೆ ವಿವರಿಸುತ್ತಾರೆ" ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

KPCC Serious Questions To BJP State President Nalin Kumar Kateel Through Tweet

"ಕಟೀಲ್‌ರೇ ನೀವು ತಲೆಹಿಡಿದ ಪಟ್ಟಿ ದೊಡ್ಡದಿದೆ ಅಲ್ಲವೇ? ನಿಶಿತಾ ಪೂಜಾರಿಯಿಂದ ಹಿಡಿದು ಕರಾವಳಿಯ ಎಷ್ಟು ಹೆಣ್ಣು ಮಕ್ಕಳನ್ನು ಕಾಡಿದ್ದೀರಿ ಹೇಳುವಿರಾ?" ಎಂದು ಕೆಪಿಸಿಸಿ, ನಳಿನ್ ಕಟೀಲ್ ಅವರನ್ನು ಪ್ರಶ್ನಿಸಿದೆ.

"ಬಿಜೆಪಿ ಪಕ್ಷ ತಲೆಹಿಡುಕರ ಅಡ್ಡೆಯಾಗಿದೆ ಎಂದು ಈ ಹಿಂದೆಯೇ ಹೇಳಿದ್ದೆವು, ಆ ಸಾಧನೆಯಲ್ಲಿ ಕಟೀಲ್ ಅವರ ಕೊಡುಗೆ ದೊಡ್ಡದಿದೆ. ಕರಾವಳಿ ಭಾಗದ ಜನ ಇವರ ಲೀಲೆಗಳ ಬಣ್ಣನೆ, ವರ್ಣನೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. @nalinkateel ಅವರೇ ಬಹಳ ಹಿಂದೆ ನಿಮ್ಮದೂ ಒಂದು ಸಿಡಿ ಸದ್ದು ಮಾಡಿತ್ತಲ್ಲ, ಏನದು ನೀವು ಹೇಳುವಿರಾ, ನಾವೇ ಹೇಳಬೇಕೆ?!"ಎಂದು ಕೆಪಿಸಿಸಿ ಟ್ವೀಟ್ ಮೂಲಕ ನಳಿನ್ ಕಟೀಲ್ ಗೆ ತಿರುಗೇಟು ನೀಡಿದೆ.

ಕೈನತ್ತ ಬೆರಳು ತೋರಿ ಟಾಂಗ್ ಕೊಟ್ಟ ನಳಿನ್ ಕುಮಾರ್ ಕಟೀಲ್ ! ಕೈನತ್ತ ಬೆರಳು ತೋರಿ ಟಾಂಗ್ ಕೊಟ್ಟ ನಳಿನ್ ಕುಮಾರ್ ಕಟೀಲ್ !

Recommended Video

ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಸಿಮ್ ಕಾರ್ಡ್ ಇದ್ದ ಹಾಗೆ | Oneindia Kannada

ಈ ಹಿಂದೆ ಕೂಡಾ, "ಎಲ್ಲೆಲ್ಲೋ ಹೋಗಿ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ @BJP4Karnataka ನಾಯಕರಿಗೆ ದಾನ ಮಾಡೋಣ ಎಂದು 90 ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ. ಬೇಕಿದ್ದರೆ @nalinkateel ಅವರಿಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡ್ತೀನಿ. ಇನ್ನೂ 19 ಸಿಡಿ ಇದೆಯಂತೆ, ಎಲ್ಲವೂ ಹಿಡಿತದಲ್ಲಿರಲಿ, ನಾಲಗೆ ಕೂಡಾ"ಎಂದು ಸಿದ್ದರಾಮಯ್ಯ ಕೂಡಾ ಲೇವಡಿ ಮಾಡಿದ್ದರು.

English summary
KPCC Serious Questions To BJP State President Nalin Kumar Kateel Through Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X