• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡ್ರಗ್ಸ್: ಕಾಂಗ್ರೆಸ್ ಬಿಡುಗಡೆ ಮಾಡಿದ ಹೊಸ ಫೋಟೋ, ಬಿಜೆಪಿ ತತ್ತರ

|

ಬೆಂಗಳೂರು, ಸೆ 15: ಡ್ರಗ್ಸ್ ಪ್ರಕರಣ ಸ್ಯಾಂಡಲ್ ವುಡ್ ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದರೆ, ರಾಜ್ಯ ರಾಜಕೀಯದಲ್ಲೂ ಸಂಚಲನ ಮೂಡಿಸುತ್ತದೆ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಆರೋಪ ಪ್ರತ್ಯಾರೋಪಕ್ಕೆ ಹೊಸ ಸರಕಾಗಿರುವ ಈ ಪ್ರಕರಣದಲ್ಲಿ, ಡ್ರಗ್ಸ್ ಕಿಂಗ್ ಪಿನ್ ಗಳು ಹಿಂದೆ ರಾಜಕಾರಣಿಗಳ ಜೊತೆ ತೆಗೆದುಕೊಂಡಿದ್ದ ಫೋಟೋಗಳು ಈಗ ಒಂದೊಂದಾಗಿ ಹೊರಗೆ ಬರುತ್ತಿವೆ.

ಬಿ.ಎಸ್. ಯಡಿಯೂರಪ್ಪ ಈಸ್ ಮೈ ಕ್ಯಾಪ್ಟನ್!

ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಪರ ರಾಗಿಣಿ ದ್ವಿವೇದಿ ಸ್ಟಾರ್ ಪ್ರಚಾರಕಿಯಾಗಿದ್ದರು ಎಂದು ಕಾಂಗ್ರೆಸ್ ಆರೋಪಕ್ಕೆ, ಸಿಸಿಬಿ ಬಂಧನದಲ್ಲಿರುವ ನಟಿ ಸಂಜನಾ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಜೊತೆ ಸಂಪರ್ಕದಲ್ಲಿದ್ದರು ಎಂದು ಬಿಜೆಪಿ ತಿರುಗೇಟು ನೀಡಿದೆ.

ಈ ನಡುವೆ, ಕೆಪಿಸಿಸಿ ಹೊಸ ಚಿತ್ರವೊಂದನ್ನು ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ, ರಾಜ್ಯ ಕಂದಾಯ ಸಚಿವ ಆರ್.ಅಶೋಕ್, ಕಿಂಗ್ ಪಿನ್ ಗೆ ಸಿಹಿತಿನ್ನಿಸುವ ಚಿತ್ರ, ಸಾಮಾಜಿಕ ತಾಣದಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ.

ಶಾಸಕ ಜಮೀರ್ ಅಹ್ಮದ್‌ಗೆ ವಾಚ್‌ ಮ್ಯಾನ್ ಕೆಲಸ ಖಾಲಿಯಿದೆ!

ಡ್ರಗ್ಸ್ ಹಗರಣದ ಕಿಂಗ್ ಪಿನ್ ರಾಹುಲ್ ಜೊತೆಯಲ್ಲಿ ಆರ್ ಅಶೋಕ್

ಡ್ರಗ್ಸ್ ಹಗರಣದ ಕಿಂಗ್ ಪಿನ್ ರಾಹುಲ್ ಜೊತೆಯಲ್ಲಿ ಆರ್ ಅಶೋಕ್

ಈ ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ಟ್ವೀಟ್ ಹೀಗಿದೆ, "ಡ್ರಗ್ಸ್ ಹಗರಣದ ಕಿಂಗ್ ಪಿನ್ ರಾಹುಲ್ ಜೊತೆಯಲ್ಲಿನ @RAshokaBJP ಅವರ ಈ ಚಿತ್ರಗಳು ಆಕಸ್ಮಿಕ ಭೇಟಿಯಾಗಿರದೆ ಹೆಚ್ಚಿನ ನಿಕಟ ಸಂಬಂಧವಿರುವುದನ್ನ ಸೂಚಿಸುತ್ತದೆ, ತಮ್ಮ ಹಗರಣ ಮುಚ್ಚಿಕೊಳ್ಳಲು ಅನ್ಯಪಕ್ಷದವರತ್ತ ಆರೋಪಿಸುವ @BJP4Karnataka ನಾಯಕರನ್ನ ಮೊದಲು ತನಿಖೆಗೆ ಒಳಪಡಿಸುವ ಅಗತ್ಯವಿದೆ" ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

ಅಶೋಕ್, ಗ್ರೂಪ್ ಫೋಟೋಗೆ ಕ್ಯಾಮರಾ ಮುಂದೆ ನಿಂತಿರುವ ಚಿತ್ರ

ಅಶೋಕ್, ಗ್ರೂಪ್ ಫೋಟೋಗೆ ಕ್ಯಾಮರಾ ಮುಂದೆ ನಿಂತಿರುವ ಚಿತ್ರ

ಕಾರ್ಯಕ್ರಮವೊಂದರ ಚಿತ್ರವನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್, ಅದರಲ್ಲಿ ಅಶೋಕ್, ಗ್ರೂಪ್ ಫೋಟೋಗೆ ಕ್ಯಾಮರಾ ಮುಂದೆ ನಿಂತಿರುವ ಚಿತ್ರವನ್ನು ಹಾಕಿದೆ. ಇದರಲ್ಲಿ ಡ್ರಗ್ಸ್ ಕಿಂಗ್ ಪಿನ್ ರಾಹುಲ್ ಕೂಡಾ ಅಶೋಕ್ ಪಕ್ಕದಲ್ಲಿ ನಿಂತಿದ್ದಾರೆ.

ಡ್ರಗ್ ಮಾಫಿಯಾದಲ್ಲೂ ಜಮೀರ್ ಹೆಸರು ಕೇಳಿ ಬರುತ್ತಿದೆ

ಡ್ರಗ್ ಮಾಫಿಯಾದಲ್ಲೂ ಜಮೀರ್ ಹೆಸರು ಕೇಳಿ ಬರುತ್ತಿದೆ

ಜಮೀರ್ ಅಹ್ಮದ್, ಡಿ.ಜೆ. ಹಳ್ಳಿ, ಕೆ.ಜಿ ಹಳ್ಳಿ ಘಟನೆಯಲ್ಲೂ ಇದ್ದರು. ರಾಮಮಂದಿರ ವಿಷಯಕ್ಕೂ ಬರುತ್ತಾರೆ. ಜಮೀರ್ ಅವರಿಗೆ ಮುಸ್ಲಿಂ ನಾಯಕರಾಗಬೇಕು ಅಂತ ತಲೆಲಿ ಬಂದುಬಿಟ್ಟಿದೆ. ಜಾಫರ್ ಷರೀಫ್ ಅವರ ನಂತರ ನಾನೇ ಮುಸ್ಲಿಂ ಲೀಡರ್ ಆಗಬೇಕು ಅಂತ ಎಲ್ಲಾ ಮೈ ಮೇಲೆ ಹಾಕಿಕೊಳ್ಳುತ್ತಿದ್ದಾರೆ. ಡ್ರಗ್ ಮಾಫಿಯಾದಲ್ಲೂ ಅವರ ಹೆಸರು ಕೇಳಿ ಬರುತ್ತಿದೆ" ಎಂದು ಅಶೋಕ್ ಆರೋಪಿಸಿದ್ದರು.

  Indiaದ ಮೇಲೆ Cyber ​​Attack ಶುರು ಮಾಡಿದ Dragon | Oneindia Kannada
  ಇಸ್ಪೀಟ್ ಎಲೆನೇ ನಾನು ನೋಡಿಲ್ಲ

  ಇಸ್ಪೀಟ್ ಎಲೆನೇ ನಾನು ನೋಡಿಲ್ಲ

  ಈಗ ಕೆಪಿಸಿಸಿ ಬಿಡುಗಡೆ ಮಾಡಿರುವ ಹೊಸ ಚಿತ್ರ ಬಿಜೆಪಿಗೆ ಇರಿಸುಮುರಿಸು ತಂದೊಡ್ಡುವುದಂತೂ ಹೌದು. ಆರ್. ಅಶೋಕ್ ಮತ್ತು ಬಿಜೆಪಿ ಮುಖಂಡರು ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಕ್ಯಾಸಿನೋ ನೋಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟಿದ್ದ ಅಶೋಕ್, "ಇಸ್ಪೀಟ್ ಎಲೆನೇ ನಾನು ನೋಡಿಲ್ಲ. ನನ್ನ ಜೀವನದಲ್ಲಿ ಸುಮ್ನೇನೂ ನೋಡಿಲ್ಲ, ಇನ್ನು ಕ್ಯಾಸಿನೋ ಏನ್ ನೋಡಲಿ" ಎಂದು ಪ್ರತಿಕ್ರಿಯಿಸಿದ್ದರು.

  English summary
  KPCC Released The Picture In Twitter With R Ashok With Drug Peddler Rahul,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X