ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧ್ಯಕ್ಷ ಹುದ್ದೆ: ಟ್ರಬಲ್ ಶೂಟರ್ ಡಿಕೆಶಿಗೆ ದೆಹಲಿ ಮುಖಂಡರಿಂದಲೇ ಟ್ರಬಲ್!

|
Google Oneindia Kannada News

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಆಯ್ಕೆಗೆ ಸಂಬಂಧಿಸಿದ ಪ್ರಕ್ರಿಯೆ ಸದ್ಯಕ್ಕೆ ನೆನೆಗುದಿಗೆ ಬಿದ್ದಿದೆ. ಹೈಕಮಾಂಡ್, ಸೋನಿಯಾ ಗಾಂಧಿ ಅಸ್ವಸ್ಥರಾಗಿ, ದೆಹಲಿಯ ಆಸ್ಪತ್ರೆಗೆ ದಾಖಲಾಗಿರುವುದರಿಂದ, ಸದ್ಯಕ್ಕೆ ಈ ಆಯ್ಕೆ ಫೈನಲ್ ಆಗುವ ಸಾಧ್ಯತೆ ಕಮ್ಮಿ.

ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ಅದೆಷ್ಟು ಮುಖಂಡರು ಲಾಬಿ ನಡೆಸಲು ದೆಹಲಿಗೆ ಹೋಗಿದ್ದೇ ಹೋಗಿದ್ದು. ಆದರೆ, ರಾಜ್ಯದ ಸೂಕ್ಷ್ಮತೆಯನ್ನು ಅರಿತಿರುವ ಸೋನಿಯಾ ಗಾಂಧಿ ಗಡಿಬಿಡಿ ಮಾಡದೇ ಕಾದುನೋಡುವ ತಂತ್ರಕ್ಕೆ ಮೊರೆ ಹೋದರು.

ಸೋನಿಯಾ ಭೇಟಿಗೆ ಸಿಗದ ಅವಕಾಶ: ಕಾದು ವಾಪಸ್ಸಾದ ಡಿ.ಕೆ.ಶಿವಕುಮಾರ್ಸೋನಿಯಾ ಭೇಟಿಗೆ ಸಿಗದ ಅವಕಾಶ: ಕಾದು ವಾಪಸ್ಸಾದ ಡಿ.ಕೆ.ಶಿವಕುಮಾರ್

ಈ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿದ್ದ ಹೆಸರು ಡಿ.ಕೆ.ಶಿವಕುಮಾರ್ ಅನ್ನುವುದು ಎಲ್ಲರಿಗೂ ಗೊತ್ತಿದ್ದ ವಿಚಾರ. ಪಕ್ಷದ ಮೇಲೆ ತೋರಿದ ನಿಯತ್ತಿಗೆ, ಆ ಹುದ್ದೆಯನ್ನು ಅವರಿಗೇ ನೀಡಬೇಕೆಂದು ಹೈಕಮಾಂಡ್ ಕೂಡಾ ಬಯಸಿತ್ತು.

ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಸೆ ಕೈಬಿಟ್ಟ ಡಿಕೆಶಿ? ಕನಕಪುರ ಬಂಡೆ ಏಕಾಂಗಿ!ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಸೆ ಕೈಬಿಟ್ಟ ಡಿಕೆಶಿ? ಕನಕಪುರ ಬಂಡೆ ಏಕಾಂಗಿ!

ತನ್ನ ಆಯ್ಕೆಗೆ ಮುಳ್ಳಾಗಿರುವ ಕೆಲವು ರಾಜ್ಯದ ಮುಖಂಡರನ್ನು ಡಿಕೆಶಿ ಖುದ್ದಾಗಿ ಭೇಟಿಯಾಗಿ, ಮಾತುಕತೆ ಕೂಡಾ ನಡೆಸಿದ್ದರು. ಆದರೆ, ರಾಜ್ಯದಲ್ಲಿ ಇವರ ಆಯ್ಕೆ ಕೆಲವರಿಗೆ ಇಷ್ಟವಿಲ್ಲವೋ, ಹಾಗೇ ದೆಹಲಿಯ ಮುಖಂಡರಿಗೂ ಕೂಡಾ..

ಮನೆಯೊಂದು ಮೂರು ಬಾಗಿಲಂತಾಗಿರುವ ಕೆಪಿಸಿಸಿ

ಮನೆಯೊಂದು ಮೂರು ಬಾಗಿಲಂತಾಗಿರುವ ಕೆಪಿಸಿಸಿ

ಮನೆಯೊಂದು ಮೂರು ಬಾಗಿಲಂತಾಗಿರುವ ಕೆಪಿಸಿಸಿಯಲ್ಲಿ ಬಣಗಳದ್ದೇ ಕಾರುಬಾರು. ಹಾಗಾಗಿ, ಸೋನಿಯಾ ತುಂಬಾ ಜಾಗರೂಕರಾಗಿ ಹೆಜ್ಜೆಯನ್ನು ಇಡಬೇಕಾಗಿರುವುದೇ, ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಯ್ಕೆಯ ವಿಳಂಬಕ್ಕೆ ಕಾರಣವಾಗಿರುವುದು ಎನ್ನುವ ಮಾತಿತ್ತು. ಆದರೆ, ಇದಕ್ಕೆ ಇನ್ನೊಂದು ಕಾರಣವೂ ಇದೆ ಎಂದು ಹೇಳಲಾಗುತ್ತಿದೆ.

ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್

ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್

ಸೋನಿಯಾ ಗಾಂಧಿ ಇನ್ನೇನು ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲು ಹೊರಟಾಗ, ಅವರ ಪಕ್ಷದ ಹಿರಿಯ ಮುಖುಂಡರು ಅದಕ್ಕೆ ಬ್ರೇಕ್ ಹಾಕಿದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಅವರು ಕೊಡುತ್ತಿರುವ ಕಾರಣ ಹೀಗೆ..

ಹೈಕಮಾಂಡ್ ಗೆ ಅತ್ಯಂತ ಆಪ್ತರಿಂದಲೇ ಟ್ರಬಲ್

ಹೈಕಮಾಂಡ್ ಗೆ ಅತ್ಯಂತ ಆಪ್ತರಿಂದಲೇ ಟ್ರಬಲ್

ಹೈಕಮಾಂಡ್ ಗೆ ಅತ್ಯಂತ ಆಪ್ತರಾಗಿದ್ದವರೇ ಡಿಕೆಶಿಯವರ ಹೆಸರನ್ನು ಈಗ ಪ್ರಕಟಿಸುವುದು ಬೇಡ ಎನ್ನುವ ಕಿವಿಮಾತನ್ನು ಸೋನಿಯಾಗೆ ಹೇಳಿದ್ದರಿಂದಲೇ, ಈ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಕಾರಣ, ಡಿಕೆಶಿ ಎದುರಿಸುತ್ತಿರುವ ಸಾಲುಸಾಲು ಕೇಸುಗಳು.

ಡಿಕೆಶಿ ಹೆಸರು ಪ್ರಕಟಿಸಿ, ಬಂಧನಕ್ಕೆ ಒಳಗಾದರೆ

ಡಿಕೆಶಿ ಹೆಸರು ಪ್ರಕಟಿಸಿ, ಬಂಧನಕ್ಕೆ ಒಳಗಾದರೆ

ಒಂದು ವೇಳೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಘೋಷಿಸಿ, ಇದಾದ ನಂತರ, ಮತ್ತೆ ಯಾವುದಾದರೂ ಕೇಸಿನಲ್ಲಿ ಮತ್ತೆ ಅವರು ಬಂಧನಕ್ಕೊಳಗಾದರೆ, ಪಕ್ಷಕ್ಕೆ ಇನ್ನಿಲ್ಲದ ಮುಖಭಂಗ ಎದುರಾಗುತ್ತದೆ. ಹಾಗಾಗಿ, ಸದ್ಯಕ್ಕೆ ಈ ವಿಚಾರದಲ್ಲಿ ಕಾದು ನೋಡುವ ತಂತ್ರಕ್ಕೆ ಮೊರೆಹೊಗೋಣ ಎನ್ನುವ ಮಾತನ್ನು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

English summary
KPCC President Post Selection Delayed Due To Delhi Leaders Objection, Sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X