ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದಗ್ರಹಣ: ಡಿಕೆಶಿ ಅವರಿಗೆ ಧರ್ಮಸ್ಥಳದಿಂದ ಬಂತು ಮಂಜುನಾಥ ಸ್ವಾಮಿ ಪ್ರಸಾದ

|
Google Oneindia Kannada News

ಬೆಂಗಳೂರು, ಜು. 02: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಪದಗ್ರಹಣಕ್ಕೆ ಸಕಲ ಸಿದ್ಧತೆಗಳು ಮುಗಿದಿವೆ. ಇವತ್ತು (ಜು. 02) ಬೆಳಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮ ಎರಡೂವರೆ ಗಂಟೆಗಳ ಕಾಲ ನಡೆಯಲಿದೆ.

Recommended Video

KSRTC ಬಸ್ ಹತ್ತಬೇಕಾದಲ್ಲಿ ಈ ನಿಯಮಗಳನ್ನು ಪಾಲಿಸಲೇಬೇಕು | KSRTC Rules & Regulations | Oneindia Kannada

ರಾಜ್ಯ ಕಾಂಗ್ರೆಸ್ ಇತಿಹಾಸದಲ್ಲಿ ಅತಿದೊಡ್ಡ ವರ್ಚುವಲ್ ಕಾರ್ಯಕ್ರಮ ಇದಾಗಿದ್ದು, ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಪಕ್ಷ ಸಂಘಟನೆ ಸೇರಿದಂತೆ ಲಾಕ್‌ಡೌನ್‌ ಮಧ್ಯೆ ಪಕ್ಷದ ಕಾರ್ಯಕ್ರಮಗಳನ್ನು ನಡೆಸಲು ನಾಂದಿ ಹಾಡಲಿದೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಾತ್ರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಉಳಿದಂತೆ ಪಕ್ಷದ ಕಾರ್ಯಕರ್ತರು ಜ್ಯೂಮ್ ಆ್ಯಪ್ ಮೂಲಕ ಕಾರ್ಯಕ್ರಮ ವೀಕ್ಷಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಧರ್ಮಸ್ಥಳದಿಂದ ಮಂಜುನಾಥ ಸ್ವಾಮೀಯ ಪ್ರಸಾದ ಡಿಕೆಶಿ ಅವರಿಗೆ ಬಂದಿದೆ.

ಯಾವ ಕೇಸಿಗೂ ಜಗ್ಗಲ್ಲ, ಬಗ್ಗಲ್ಲಾ: ಸರಕಾರಕ್ಕೆ ಡಿ.ಕೆ.ಶಿವಕುಮಾರ್ ಚಾಲೆಂಜ್ಯಾವ ಕೇಸಿಗೂ ಜಗ್ಗಲ್ಲ, ಬಗ್ಗಲ್ಲಾ: ಸರಕಾರಕ್ಕೆ ಡಿ.ಕೆ.ಶಿವಕುಮಾರ್ ಚಾಲೆಂಜ್

ಧರ್ಮಸ್ಥಳದಿಂದ ಪ್ರಸಾದ

ಧರ್ಮಸ್ಥಳದಿಂದ ಪ್ರಸಾದ

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿ ಪ್ರಸಾದ ಕಳುಹಿಸಿದ್ದಾರೆ.

ಡಿಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕಾರ್ಯದರ್ಶಿ ಕೃಷ್ಣಾ ಸಿಂಗ್ ಮೂಲಕ ಪ್ರಸಾದ ಕಳುಹಿಸಿದ್ದಾರೆ. ಜೊತೆಗೆ ಪದಗ್ರಹಣ ಕಾರ್ಯಕ್ರಮ ಯಶಸ್ಸಿಗೆ ಆಶೀರ್ವಾದ ಮಾಡಿ ಸುತ್ತೂರು ಶ್ರೀಗಳಿಂದಲೂ ಡಿಕೆಶಿಗೆ ಪ್ರಸಾದ ಕಳುಹಿಸಿ ಕೊಟ್ಟಿದ್ದಾರೆ. ಜೆಎಸ್‌ಎಸ್ ಆಡಳಿತಾಧಿಕಾರಿ ಮಂಜುನಾಥ್ ಅವರಿಂದ ಪ್ರಸಾದ ಕಳುಹಿಸಿದ್ದರು.

ಗಣ್ಯರಿಗೆ ಮಾತ್ರ ಅವಕಾಶ

ಗಣ್ಯರಿಗೆ ಮಾತ್ರ ಅವಕಾಶ

ಕಾರ್ಯಕ್ರಮದಲ್ಲಿ 120 ಜನರು ಭಾಗವಹಿಸಲು ಸರ್ಕಾರ ಅನುಮತಿ ಕೊಟ್ಟಿದೆ. ಹೀಗಾಗಿ ಕೆಪಿಸಿಸಿ ಹೊಸ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೊರ ರಾಜ್ಯಗಳಿಂದ ಬರುವ 7 ಗಣ್ಯರು ಸೇರಿದಂತೆ ಅಷ್ಟು ಜನರಿಗೆ ಮಾತ್ರ ಆಹ್ವಾನ ಕೊಡಲಾಗಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೇರಳದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಾಲ್, ಕೇರಳ ಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಸೀಮಾಂಧ್ರದ ಕಾಂಗ್ರೆಸ್ ನಾಯಕರಾದ ಸಾಕೆ ಶೈಲಜನಾಥ್, ಉತ್ತಮ ಕುಮಾರ್ ರೆಡ್ಡಿ ಭಾಗವಹಿಸಲಿದ್ದಾರೆ. ಉಳಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ.

ರಾಹುಲ್ ಗಾಂಧಿ ಜೊತೆ ಡಿ. ಕೆ. ಶಿವಕುಮಾರ್ ಮಹತ್ವದ ಸಭೆರಾಹುಲ್ ಗಾಂಧಿ ಜೊತೆ ಡಿ. ಕೆ. ಶಿವಕುಮಾರ್ ಮಹತ್ವದ ಸಭೆ

ಜ್ಯೂಮ್ ಆ್ಯಪ್ ನಲ್ಲಿ ನೇರಪ್ರಸಾರ

ಜ್ಯೂಮ್ ಆ್ಯಪ್ ನಲ್ಲಿ ನೇರಪ್ರಸಾರ

ಮೂರು ಬಾರಿ ಮುಂದೂಡಿಕೆಯಾಗಿದ್ದ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ವಿನೂತನ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಯಾಗಿದೆ. ಜ್ಯೂಮ್ ಆ್ಯಪ್ ಮೂಲಕ ಕಾರ್ಯಕ್ರಮ ನೇರಪ್ರಸಾರವಾಗಲಿದ್ದು, ರಾಜ್ಯದ 5,800 ಗ್ರಾ.ಪಂ ವ್ಯಾಪ್ತಿಯಲ್ಲೂ ನೇರಪ್ರಸಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಕೋವಿಡ್ 19 ನಿಂದಾಗಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಕಾರ್ಯಕ್ರಮ ಸರಳವಾಗಿ ನಡೆಯಲಿದೆ. ಕೇವಲ ಪಕ್ಷದ ಹಿರಿಯ ಮುಖಂಡರಿಗಷ್ಟೇ ಕೆಪಿಸಿಸಿ ಕಚೇರಿಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಡಲಾಗಿದೆ. ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಕೆಪಿಸಿಸಿ ಕಚೇರಿ ಒಳಪ್ರವೇಶಕ್ಕೆ ಅನುಮತಿ ಕೊಟ್ಟಿಲ್ಲ.

ಪೊಲೀಸರಿಂದ ಪರಿಶೀಲನೆ

ಪೊಲೀಸರಿಂದ ಪರಿಶೀಲನೆ

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ, ಭದ್ರತೆ ಬಗ್ಗೆ ಕೇಂದ್ರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರುನಿನ್ನೆಯೆ ಪರಿಶೀಲನೆ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ತೆಗೆದು ಕೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳನ್ನು ಕೆಪಿಸಿಸಿ ಹಳೆಯ ಕಚೇರಿ ಹಗೂ ಹೊಸ ಕಚೇರಿ ಎರಡನ್ನೂ ಪರಿಶೀಲನೆ ಮಾಡಿ ನೋಡಿದ್ದಾರೆ.

ಸ್ಯಾನಿಟೈಸರ್, ಹಾಕಿರುವ ಆಸನಗಳ ಖುದ್ದು ಪರಿಶೀಲನೆಯನ್ನು ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು ಮಾಡಿದ್ದಾರೆ. ಅವರಿಗೆ ಕಾರ್ಯಕ್ರಮದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾಹಿತಿ ಕೊಟ್ಟಿದ್ದಾರೆ.

ಕಾರ್ಯಕರ್ತರಿಗೆ ಮನವಿ

ಕಾರ್ಯಕರ್ತರಿಗೆ ಮನವಿ

ಪಕ್ಷದ ಕಾರ್ಯಕರ್ತರಿಗೆಇದೇ ಸಂದರ್ಭದಲ್ಲಿ ಡಿಕೆಶಿ ಮನವಿ ಮಾಡಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಸರ್ಕಾರ ಅವಕಾಶ ಕೊಟ್ಟಿದೆ. ಕೆಲವು ಕಡೆ ಪೊಲೀಸರಿಂದ ತೊಂದರೆಯಾಗಿದೆ ಎಂದು ಆರೋಪಗಳು ಬಂದಿವೆ. ನಾನು ಗೃಹ ಸಚಿವ, ಡಿಜಿಪಿ ಜೊತೆ ಮಾತನಾಡಿದ್ದೇನೆ. ಸಿಎಂ ಯಡಿಯೂರಪ್ಪ ಅವರು ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಲಿಖಿತವಾಗಿ ಬರೆದು ಕೊಡಬೇಕಾಗಿಲ್ಲ.

ಜ್ಯೂಂ ಆ್ಯಪ್ ಮೂಲಕವೇ ಕಾರ್ಯಕ್ರಮ ನೋಡಿ. ಯಾರೂ ಇಲ್ಲಿಗೆ ಬರಬೇಡಿ. ಪೊಲೀಸರು ಯಾರಿಗೂ ತೊಂದರೆ ಮಾಡುವಂತಿಲ್ಲ. ಯಾಕಂದರೆ ಸಿಎಂ ಅವರೇ ಅವಕಾಶ ನೀಡಿದ್ದಾರೆ. ಹೀಗಾಗಿ ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ. ನಾವು ಇಲ್ಲಿ ಪ್ರತಿಜ್ಞೆ ಮಾಡುತ್ತೇವೆ. ಆಗ ನೀವು ಅಲ್ಲಿಯೇ ಮಾಡಬಹುದು. ಅಲ್ಲಿಂದಲೇ ನನಗೆ ಆಶೀರ್ವಾದ ಮಾಡಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನವಿ ಮಾಡಿಕೊಂಡಿದ್ದಾರೆ.

ಕಾರ್ಯಕ್ರಮದ ವಿವರ

ಕಾರ್ಯಕ್ರಮದ ವಿವರ

ಬೆಳಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಗಲಿದೆ.

* ಬೆ. 10.45: ಗೌರವ ರಕ್ಷೆ: ಸೇವಾದಳ ತಂಡದಿಂದ.

* ಬೆ. 11.00: ಸಾಮೂಹಿಕ ವಂದೇ ಮಾತರಂ ಗೀತೆ ಹಾಡುವುದು.

* ಬೆ. 11.03: ಸ್ವಾಗತ ಭಾಷಣ.

* ಬೆ. 11.07: ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಂದ ಕಾರ್ಯಕ್ರಮ ಉದ್ಘಾಟನೆ.

* ಬೆ. 11.10: ವಿವಿಧ ತಂಡಗಳಿಂದ ಜ್ಯೋತಿ ಬೆಳಗುವ ಕಾರ್ಯಕ್ರಮ.

* ಬೆ. 11.15: ಹಿರಿಯ ಮುಖಂಡರಿಂದ ಸಂವಿಧಾನ ಪೀಠಿಕೆಯ ಪಠಣ.

* ಬೆ. 11.20: ಉದ್ಘಾಟನಾ ಭಾಷಣ ಕೆ.ಸಿ. ವೇಣುಗೋಪಾಲ್ ಅವರಿಂದ.

* ಬೆ. 11.30: ಸಾಮೂಹಿಕ ಪ್ರತಿಜ್ಞೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ.

* ಬೆ. 11.35: ದಿನೇಶ್ ಗುಂಡೂರಾವ್ ಅವರಿಂದ ಅಧಿಕಾರ ಹಸ್ತಾಂತರ.

* ಬೆ. 11.45: ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಭಾಷಣ.

* ಬೆ. 11.55 ರಿಂದ ಮ. 12.25: ಅತಿಥಿಗಳ ಭಾಷಣ-ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ ಹಾಗೂ ಎಸ್.ಆರ್. ಪಾಟೀಲ್.

* ಮ. 12.25: ಡಿ.ಕೆ. ಶಿವಕುಮಾರ್ ಅವರಿಂದ ಅಧ್ಯಕ್ಷೀಯ ಭಾಷಣ.

* ಮ. 12.55: ವಂದನಾರ್ಪಣೆ

* ಮ. 12.58: ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯ

English summary
D.K. Shivakumar's oath taking ceremony will be held on June 02 as KPCC President,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X