ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಡಿತರ ಚೀಟಿ ವಾಪಸ್; ಯಡಿಯೂರಪ್ಪಗೆ ಎಚ್ಚರಿಕೆ ಕೊಟ್ಟ ಡಿಕೆಶಿ!

|
Google Oneindia Kannada News

ಬೆಂಗಳೂರು, ಜೂ. 07: ಕಳೆದ ಮೂರುವರೆ ತಿಂಗಳುಗಳಿಂದ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ರೈತರ ಸ್ಥಿತಿ ಸಂಕಷ್ಟದಲ್ಲಿದೆ. ರೈತ ಕೂಲಿ ಕಾರ್ಮಿಕರಿಗೆ ಕೆಲವೊಂದಿಷ್ಟಾದರೂ ಸೌಲಭ್ಯಗಳನ್ನು ಸರ್ಕಾರ ಮಾಡಿಕೊಟ್ಟಿದೆ. ಆದರೆ ರೈತರದ್ದು ತ್ರಿಶಂಕು ಸ್ಥಿತಿಯಾಗಿದೆ. ರೈತರ ಫಸಲ್ ಭೀಮಾ ವಿಮಾ ಯೋಜನೆಯ ಪರಿಹಾರ ಹಣ ಕೃಷಿ ಇಲಾಖೆ ನಿರ್ಲಕ್ಷದಿಂದ ಏರ್‌ಟೆಲ್ ಕಂಪನಿ ಪಾಲಾಗಿದೆ.

Recommended Video

ಚಿರಂಜೀವಿಯನ್ನು ನೋಡಿ ಭಾವುಕರಾದ ಯಶ್ | Chiranjeevi Sarja | Yash | | Oneindia Kannada

ಹೀಗಿರುವಾಗ ಟ್ರಾಕ್ಟರ್ ಹೊಂದಿದ್ದು ಪಡಿತರ ಚೀಟಿಯನ್ನು ಪಡೆದುಕೊಂಡಿದ್ದರೆ ಕಾನೂನು ಅಂಥವರ ಮೇಲೆ ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಆದರೆ ಕನಿಷ್ಠ ಏರ್‌ಟೆಲ್‌ ಕಂಪನಿ ಪಾಲಾಗಿರುವ ರೈತರ ಪರಿಹಾರದ ಹಣ ಹಿಂದಿರುಗಿಸುವ ಬಗ್ಗೆ ಸಿಎಂ ಏನೂ ಮಾತನಾಡಿಲ್ಲ. ಆದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಡಿ.ಕೆ.ಶಿವಕುಮಾರ್ ಉಲ್ಲೇಖಿಸಿದ ಬಿಎಸ್ವೈ ಸರಕಾರದ 'ಮೆಂಟಲ್' ಸಚಿವರಾರು? ಡಿ.ಕೆ.ಶಿವಕುಮಾರ್ ಉಲ್ಲೇಖಿಸಿದ ಬಿಎಸ್ವೈ ಸರಕಾರದ 'ಮೆಂಟಲ್' ಸಚಿವರಾರು?

ಕಾಗದದಲ್ಲಿ ಘೋಷಣೆ

ಕಾಗದದಲ್ಲಿ ಘೋಷಣೆ

ಕೊವಿಡ್-19 ವಿಚಾರದಲ್ಲಿ ಸರ್ಕಾರ ಪ್ರಕಟಿಸಿರುವ ಪ್ಯಾಕೇಜ್ ಕೇವಲ ಘೋಷಣೆಯಾಗಿದ್ದು, ಯಾವುದೇ ರೈತ, ಕಾರ್ಮಿಕರಿಗೆ ತಲುಪಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರು ತಮ್ಮ ಹಳ್ಳಿ ಸುತ್ತಮುತ್ತಲಿನಲ್ಲಿರುವ ರೈತರು, ಕಾರ್ಮಿಕರಿಗೆ ಆನ್‌ಲೈನ್‌ನಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ನೇರವಾಗಿ ಎಂದು ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೊವಿಡ್-19 ಸಂದರ್ಭದಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರ ಅಕೌಂಟ್‌ಗೆ ಹೋಗಬೇಕಾಗಿದ್ದ ಹಣ ಏರ್‌ಟೆಲ್ ಕಂಪನಿ ಅಕೌಂಟ್‌ಗೆ ಹೋಗಿದ್ದನ್ನು ಸ್ಮರಿಸಬಹುದಾಗಿದೆ.

ವಾಪಸ್ ಕೊಡಲ್ಲ

ವಾಪಸ್ ಕೊಡಲ್ಲ

ರೈತರು ಬಡವರು. ಯಾವ ರೈತರಿಂದಲೂ ಪಡಿತರ ಚೀಟಿ ವಾಪಸ್ ಪಡೆಯಲು ಬಿಡಲ್ಲ. ವಾಪಸ್ ಪಡೆದರೆ ರೈತರ ಪರ ನಿಂತು ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ. ಎರಡು ಎಕರೆ ಜಮೀನು ಇರುವ ರೈತರು ಕೂಡ ಟ್ರ್ಯಾಕ್ಟರ್ ಇಟ್ಟುಕೊಂಡಿರುತ್ತಾರೆ. ಅವರನ್ನು ದೊಡ್ಡ ರೈತ ಎಂದು ಪರಿಗಣಿಸಲು ಸಾಧ್ಯವಿಲ್ಲ. ರೈತರು ಬಡವರಾಗಿದ್ದು, ಅವರಿಂದ ಪಡಿತರ ಚೀಟಿ ವಾಪಸ್ ಪಡೆಯುವ ಪ್ರಶ್ನೆ ಇಲ್ಲ.

ದೇಶದಲ್ಲಿ ಆಹಾರ ಭದ್ರತೆ ಕಾನೂನು ಇದೆ. ಈಗ ಪಡಿತರ ಚೀಟಿ ಹೊಂದಿರುವ ರೈತರಿಗೆ ಅನ್ನಭಾಗ್ಯ ಯೋಜನೆ ಮೂಲಕ ಅಕ್ಕಿ ವಿತರಿಸಬೇಕು. ಕಾರ್ಡ್ ಹೊಂದಿರುವವರ ರೈತರ ಪರ ನಿಂತು ಅವರ ರಕ್ಷಣೆ ಮಾಡುವ ಕೆಲಸ ನಾವು ಮಾಡುತ್ತೇವೆ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.

ನಿರಾಣಿಗೆ ಮೈಶುಗರ್ ಮಾರಾಟಕ್ಕೆ ಡಿಕೆಶಿ, ಸಿದ್ದರಾಮಯ್ಯ ತೀವ್ರ ವಿರೋಧ ಯಾಕೆ?ನಿರಾಣಿಗೆ ಮೈಶುಗರ್ ಮಾರಾಟಕ್ಕೆ ಡಿಕೆಶಿ, ಸಿದ್ದರಾಮಯ್ಯ ತೀವ್ರ ವಿರೋಧ ಯಾಕೆ?

ಮೊದಲು ಸವಲತ್ತು ಕೊಡಿ

ಮೊದಲು ಸವಲತ್ತು ಕೊಡಿ

ಕೊರೊನಾ ವೈರಸ್ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ಶಿಕ್ಷಣ ಕೊಡುವ ಮಾತನ್ನು ಸರ್ಕಾರ ಹೇಳಿದೆ. ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಆರಂಭಿಸುವ ಮುನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರ, ಹಳ್ಳಿ ಹಳ್ಳಿಗಳಲ್ಲಿ ಅಂತರ್ಜಾಲ ಹಾಗೂ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿ. ಮೊದಲು ಸವಲತ್ತು ನೀಡಿ ಆಮೇಲೆ ಆನ್‌ಲೈನ್ ಶಿಕ್ಷಣ ನೀಡಿ ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಮೈಶುಗರ್ ಮಾರಾಟ

ಮೈಶುಗರ್ ಮಾರಾಟ

ಮೈಶುಗರ್ ಕಾರ್ಖಾನೆಗೂ ಮಂಡ್ಯ ಜನರಿಗೂ ಉತ್ತಮ ಬಾಂಧವ್ಯವಿದೆ. ಸರ್ಕಾರ ಕಾರ್ಖಾನೆ ನಡೆಸಲು ಆಗದಿದ್ದರೆ ಅದು ಅವರ ಅಸಮರ್ಥತೆಯನ್ನು ತೋರುತ್ತದೆ. ಕಾರ್ಖಾನೆಯನ್ನು ಸರ್ಕಾರ ನಡೆಸಬೇಕು. ಇರುವ ನ್ಯೂನ್ಯತೆ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಖಾಸಗಿ ಅವರಿಗೆ ಮಾರಲು ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ ಮಂಡ್ಯ ರೈತರ ಪರ ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರವನ್ನು ಎಚ್ಚರಿಸಿದ್ದಾರೆ.

English summary
KPCC president DK Shivakumar warns CM Yeddyurappa not to withdraw ration card from farmers,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X