ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

|
Google Oneindia Kannada News

ಬೆಂಗಳೂರು, ಮೇ 13; ಕೋವಿಡ್ ಪಿಡುಗು ತೀವ್ರವಾಗಿದ್ದು, ಇಡೀ ರಾಜ್ಯ ಚಿಂತಾಜನಕ ಸ್ಥಿತಿಯಲ್ಲಿದೆ. ಹೀಗಾಗಿ ಈ ಬಾರಿ ಯಾರೂ ನನ್ನ ಜನ್ಮದಿನ ಆಚರಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಗುರುವಾರ ಪತ್ರಿಕಾ ಪ್ರಕಟಣೆ ಮೂಲಕ ಅವರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳಿಗೆ ಈ ಕುರಿತು ಮನವಿ ಮಾಡಿದ್ದಾರೆ. ಮೇ 15ರಂದು ಡಿ. ಕೆ. ಶಿವಕುಮಾರ್ 59ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.

 ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವಂತೆ ಡಿಕೆ ಶಿವಕುಮಾರ್ ಆಗ್ರಹ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವಂತೆ ಡಿಕೆ ಶಿವಕುಮಾರ್ ಆಗ್ರಹ

'ನಾನು ಆ ದಿನ ಊರಲ್ಲಿ ಇರುವುದಿಲ್ಲ. ಹೀಗಾಗಿ ಯಾರೂ ಕೂಡ ಶುಭಾಶಯ ಕೋರಲು ನಿವಾಸದ ಬಳಿ ಬರುವುದು ಬೇಡ. ಮಾಧ್ಯಮಗಳಲ್ಲಿ ನನಗೆ ಶುಭಾಶಯ ಕೋರಿ ಯಾರೊಬ್ಬರೂ ಜಾಹೀರಾತು ನೀಡಬಾರದು' ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕೊರೊನಾ ಸಂಕಷ್ಟ ನಿಭಾಯಿಸಲಾಗದಿದ್ದರೆ ರಾಜೀನಾಮೆ ನೀಡಿ: ಡಿಕೆ ಶಿವಕುಮಾರ್ ಕೊರೊನಾ ಸಂಕಷ್ಟ ನಿಭಾಯಿಸಲಾಗದಿದ್ದರೆ ರಾಜೀನಾಮೆ ನೀಡಿ: ಡಿಕೆ ಶಿವಕುಮಾರ್

KPCC president

'ರಾಜ್ಯ ತೀವ್ರ ಸಂಕಷ್ಟ ಸಮಯ ಎದುರಿಸುತ್ತಿದೆ. ಕೊರೊನಾ ರುದ್ರತಾಂಡವ ಆಡುತ್ತಿದೆ. ಈ ಸಮಯದಲ್ಲಿ ಸಂಭ್ರಮಾಚರಣೆ ವಿಹಿತವಲ್ಲ. ಹೀಗಾಗಿ ಈ ಬಾರಿ ನಾನೂ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ನೀವೂ ಸಹ ನನ್ನ ಜನ್ಮದಿನ ಆಚರಿಸುವುದಾಗಲಿ, ಶುಭಾಶಯ ಕೋರುವುದಾಗಲಿ, ಶುಭಾಶಯ ಕೋರಲು ದೂರವಾಣಿ ಕರೆ ಮಾಡುವುದಾಗಲಿ ಬೇಡ' ಎಂದು ಸೂಚಿಸಿದ್ದಾರೆ.

ಪಕ್ಷದ ತೊರೆದ ಮುಖಂಡರಿಗೆ ಮತ್ತೆ ಆಹ್ವಾನ ನೀಡಿದ ಡಿಕೆ ಶಿವಕುಮಾರ್ಪಕ್ಷದ ತೊರೆದ ಮುಖಂಡರಿಗೆ ಮತ್ತೆ ಆಹ್ವಾನ ನೀಡಿದ ಡಿಕೆ ಶಿವಕುಮಾರ್

Recommended Video

ಟ್ರಂಪ್ ಕಟ್ಟಿದ್ದ ಗೋಡೆ ಕೆಡವಿ ಬಡವರ ಮನೆಗಳಿಗೆ 1 ಲಕ್ಷ ಕೊಟ್ಟ ಜೋ ಬಿಡೆನ್ | Oneindia Kannada

'ಪರಿಸ್ಥಿತಿಯ ಗಂಭೀರತೆ ಅರಿತು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಯಾರು ಕೂಡ ಈ ವಿಚಾರದಲ್ಲಿ ತಪ್ಪು ಭಾವಿಸಬಾರದು. ನಿಮ್ಮ ಪ್ರೀತಿ, ವಿಶ್ವಾಸ, ಆಶೀರ್ವಾದ ನನ್ನ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.

English summary
KPCC president D. K. Shivakumar has decided not to celebrate his birthday on May 15 in the time of COVID situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X