ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಥಳೀಯ ಸಂಸ್ಥೆಗಳ ಚುನಾವಣೆ ಅಭ್ಯರ್ಥಿಗೆ ಕೆಪಿಸಿಸಿ ಮಾನದಂಡ

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 12 : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೆಪಿಸಿಸಿ ಮಾನದಂಡಗಳನ್ನು ನಿಗದಿ ಮಾಡಿದೆ. ಆಗಸ್ಟ್ 29ರಂದು 105 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಮೂರು ಪುಟಗಳ ಮಾನದಂಡಗಳನ್ನು ಜಿಲ್ಲಾ ಕಾಂಗ್ರೆಸ್‌ ಘಟಕಕ್ಕೆ ಕಳುಹಿಸಿಕೊಟ್ಟಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಈ ಮಾನದಂಡಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದೆ.

ತುಮಕೂರು, ಶಿವಮೊಗ್ಗ, ಮೈಸೂರು ಪಾಲಿಕೆ ಚುನಾವಣೆ ಘೋಷಣೆತುಮಕೂರು, ಶಿವಮೊಗ್ಗ, ಮೈಸೂರು ಪಾಲಿಕೆ ಚುನಾವಣೆ ಘೋಷಣೆ

ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಟಿಕೆಟ್ ಆಕಾಂಕ್ಷಿಗಳ ಹಿನ್ನಲೆ, ಪ್ರಭಾವ, ಜಾತಿ, ಸಮಾಜ ಸೇವೆ ಮುಂತಾದವುಗಳನ್ನು ಪರಿಗಣಿಸಬೇಕು ಎಂದು ಪಕ್ಷ ನೀಡಿರುವ ಸೂಚನೆಯಲ್ಲಿ ತಿಳಿಸಲಾಗಿದೆ. ಟಿಕೆಟ್ ಆಕಾಂಕ್ಷಿಗಳ ಅಪರಾಧ ಹಿನ್ನಲೆಯನ್ನು ಪರಿಗಣಿಸುವಂತೆ ನಿರ್ದೇಶನ ನೀಡಲಾಗಿದೆ.

KPCC issued three page guideline for ULBs candidates section

ಅಭ್ಯರ್ಥಿಯ ಪ್ರಭಾವ, ನ್ಯಾಷನಲ್ ಹೆರಾಲ್ಡ್‌ಗೆ ಚಂದಾದಾರರಾಗುವುದು. ಶಕ್ತಿ ಮೊಬೈಲ್ ಅಪ್ಲಿಕೇಶನ್ ಅಡಿ ಯುವಕರ ಸೇರ್ಪಡೆ ಸೇರಿದಂತೆ ವಿವಿಧ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ನ್ಯಾಷನಲ್ ಹೆರಾಲ್ಡ್‌ ವಾರ್ಷಿಕ ಚಂದಾ 1,100 ರೂ.ಗಳು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಅಂಕಿ ಸಂಖ್ಯೆಗಳ ಲೆಕ್ಕಸ್ಥಳೀಯ ಸಂಸ್ಥೆಗಳ ಚುನಾವಣೆ ಅಂಕಿ ಸಂಖ್ಯೆಗಳ ಲೆಕ್ಕ

ಅಭ್ಯರ್ಥಿ ಎಲ್ಲಾ ಟಿಕೆಟ್ ಆಕಾಂಕ್ಷಿಗಳ ನಡುವೆ ಅವಿರೋಧವಾಗಿ ಆಯ್ಕೆಯಾಗಬೇಕು ಎಂದು ಮಾನದಂಡದಲ್ಲಿ ತಿಳಿಸಲಾಗಿದೆ. ವಾರ್ಡ್‌ವಾರು ಮೀಸಲಾತಿ ಅನ್ವಯ ಎಸ್‌ಸಿ/ಎಸ್‌ಟಿ ಪಂಗಡದ ಯುವಕರನ್ನು ಆಯ್ಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಬ್ಲಾಕ್ ಲೆವೆಲ್ ಸಮಿತಿ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಘಟಕಕ್ಕೆ ಕಳುಹಿಸಲಿದೆ. ಜಿಲ್ಲಾ ಘಟಕ ಅದನ್ನು ಕೆಪಿಸಿಸಿಗೆ ರವಾನೆ ಮಾಡಲಿದೆ.

English summary
The Karnataka Pradesh Congress Committee (KPCC) has issued a three-page guideline list for the selecting candidates for Local body elections 2018. ULBs in 22 districts will go for poll on August 29, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X