ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಕ್ಕೆ ಬಂದಿರುವ ಅಮಿತ್ ಶಾಗೆ ಕಾಂಗ್ರೆಸ್‌ ಬೇಡಿಕೆ ಏನೂ ಗೊತ್ತಾ?

|
Google Oneindia Kannada News

ಬೆಂಗಳೂರು, ಜ. 18: ಬರಿ ಚುನಾವಣಾ ಕುತಂತ್ರ ಮಾಡುವುದನ್ನು ಬಿಟ್ಟು ಮಹಾದಾಯಿ ಸಮಸ್ಯೆ ಪರಿಹರಿಸಿ ಅಂತಾ ರಾಜ್ಯ ಕಾಂಗ್ರೆಸ್‌ ಪಕ್ಷ ಅಮಿತ್ ಶಾ ಅವರನ್ನು ಟ್ವಿಟ್ಟರ್‌ನಲ್ಲಿ ಪ್ರಶ್ನೆ ಮಾಡಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಮಹಾದಾಯಿ ವಿವಾದ ಪರಿಹರಿತ್ತೇವೆ ಎಂದು ಚುನಾವಣಾ ಭಾಷಣ ಮಾಡಿದ್ದಿರಿ. ಗೋವಾ ಮುಖ್ಯಮಂತ್ರಿಗಳು ಆಗಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ನೀರು ಬಿಡುವುದಾಗಿ ಹೇಳಿದ್ದರು. ಆದರೆ ಅದ್ಯಾವುದು ಆಗಿಲ್ಲ. ಇವೆಲ್ಲವೂ ಕೇವಲ ಚುನಾವಣಾ ಕುತಂತ್ರವಾ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

KPCC Asked Amit Shah To Solve Mahadayi Issue

ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಗೋವಾದಲ್ಲಿಯೂ ಬಿಜೆಪಿ ಸರ್ಕಾರವಿದೆ. ಹೀಗಿದ್ದಾಗ ಮಹಾದಾಯಿ ವಿವಾದವನ್ನು ಯಾಕೇ ಪರಿಹರಿಸಿಲ್ಲ ಎಂದು ಕೆಪಿಸಿಸಿ ಕೇಳಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಮಹಾದಾಯಿ ವಿವಾದ ಪರಿಹರಿಸುವುದಾಗಿ ಅಮಿತ್ ಶಾ ಹಾಗೂ ಬಿ.ಎಸ್. ಯಡಿಯೂರಪ್ಪ ಲೋಕಸಭಾ ಚುನಾವಣೆ ಸಂದರ್ಭ ಆಶ್ವಾಸನೆ ಕೊಟ್ಟಿದ್ದರು. ಇದೀಗ ರಾಜ್ಯಕ್ಕೆ ಅಮಿತ್ ಶಾ ಬರುತ್ತಿರುವ ಸಂಧರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಮಹಾದಾಯಿ ವಿವಾದ ಪರಿಹರಿಸುವಂತೆ ಒತ್ತಾಯಿಸಿದೆ.

English summary
KPCC questioned centrel home mnister and bjp nationala president amit shah to solve mahadayi issue during karntaka visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X