ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದಿ ನಾಯಿಗೆ ಕೃತಕ ಕಾಲು ಜೋಡಿಸಿದ ಕೊಪ್ಪಳ ಕಿಮ್ಸ್ ವೈದ್ಯರು

By Sachhidananda Acharya
|
Google Oneindia Kannada News

ಕೊಪ್ಪಳ, ಅಕ್ಟೋಬರ್ 8: ಹಿಂಬದಿಯ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದ ಇಲ್ಲಿನ ಬೀದಿ ನಾಯಿಯೊಂದಕ್ಕೆ ಚಕ್ರದಿಂದ ಕೂಡಿದ ಕೃತಕ ಕಾಲು ಅಳವಡಿಸಿ ಕಿಮ್ಸ್ ಮೆಡಿಕಲ್ ಕಾಲೇಜಿನ ವೈದ್ಯರು ಮಾನವೀಯತೆ ಮೆರೆದಿದ್ದಾರೆ.

ಇಲ್ಲಿನ ವೈದ್ಯಕೀಯ ಕಾಲೇಜಿನ ವಸತಿ ಗೃಹದ ಸಮೀಪ ಈ ನಾಯಿ ಕಾಲಿನ ಸ್ವಾಧೀನ ಕಳೆದುಕೊಂಡು ತೆವಳುತ್ತಾ ಸಾಗುತ್ತಿತ್ತು.

Koppal: KIMS doctors joins artificial leg to the street dog

ಇದನ್ನು ಕಂಡ ಕಿಮ್ಸ್ ನಿರ್ದೇಶಕ ಶಂಕರ್ ಮಲ್ಯಾಪುರೆ ಮತ್ತು ಎಲೆಕ್ಟ್ರೀಷಿಯನ್ ತಿಮ್ಮಾ ರೆಡ್ಡಿ ಪರಸ್ಪರ ಚರ್ಚೆ ನಡೆಸಿದ್ದಾರೆ. ನಂತರ ವೈದ್ಯರಾದ ಗೌತಮ ದೇಶಪಾಂಡೆ ಜತೆ ಸೇರಿ ಶಂಕರ್ ಮಲ್ಯಾಪುರೆ ನಾಯಿಗೆ ಚಕ್ರ ಅಳವಡಿಸಿ ಕೃತಕ ಕಾಲಿನ ವ್ಯವಸ್ಥೆ ಕಲ್ಪಿಸಿದ್ದಾರೆ.

800 ರೂಪಾಯಿ ವೆಚ್ಚ

ನಾಯಿಯ ಹೊಟ್ಟೆಯ ಭಾಗಕ್ಕೆ ಪೈಪ್ ಜೋಡಿಸಿ ಅದಕ್ಕೆ ಚಕ್ರ ಕೂರಿಸಲಾಗಿದೆ. ಇದಕ್ಕೆ ಒಟ್ಟು 800 ರೂಪಾಯಿ ಖರ್ಚು ತಗುಲಿದೆ.

ಆರಂಭದಲ್ಲಿ ಮೂರು ನಾಲ್ಕು ದಿನ ಕೃತಕ ಕಾಲು ಅಳವಡಿಸಿದಾಗ ನಾಯಿ ನಡೆಯಲು ಹಿಂಜರಿದಿದೆ. ಆದರೆ ನಿಧಾನಕ್ಕೆ ನಡೆಯಲು ಆರಂಭಿಸಿದೆ. ಸದ್ಯ ಹಿಂಭಾಗಕ್ಕೆ ಚಕ್ರದ ಕೃತಕ ಕಾಲು ಅಳವಡಿಸಿದ್ದರಿಂದ ಎರಡು ಕಾಲುಗಳ ಮೂಲಕವೇ ಈಗ ನಾಯಿ ಸುಲಭವಾಗಿ ನಡೆದಾಡುತ್ತಿದೆ.

English summary
Doctors of the KIMS Medical College have shown their humanity by joining wheel-driven artificial leg to the street dog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X