ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎವರೆಸ್ಟ್ ಏರಿದ ಅನುಭವ ಬಿಚ್ಚಿಟ್ಟ ಕೊಪ್ಪಳದ ಪ್ರಭಾಕರನ್

|
Google Oneindia Kannada News

ಕೊಪ್ಪಳ, ಮೇ 30 : ಮೌಂಟ್ ಎವರೆಸ್ಟ್ ಶಿಖರವೇರಿದ ದೇಶದ ಮೊದಲ ಐಎಫ್‍ಎಸ್ ಅಧಿಕಾರಿ ಎನ್ನುವ ಹೆಗ್ಗಳಿಗೆ ಪಾತ್ರವಾಗಿರುವ ಕೊಪ್ಪಳದ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಅವರನ್ನು ದೆಹಲಿಯ ಕರ್ನಾಟಕ ಭವನದಲ್ಲಿ ಸನ್ಮಾನಿಸಲಾಯಿತು.

ಕೊಪ್ಪಳದಲ್ಲಿ ಕೆಲಸ ಮಾಡುತ್ತಿರುವ ತಮಿಳುನಾಡು ಮೂಲದ ಎಸ್.ಪ್ರಭಾಕರನ್ 2011ನೇ ಬ್ಯಾಚ್ ಐಎಫ್‍ಎಸ್ ಅಧಿಕಾರಿ. ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಮೂಲಕ ಅವರು ಕರ್ನಾಟಕ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. [ಬೆಂಗಳೂರು ಎವರೆಸ್ಟ್ ಚಾಲೆಂಜ್ ಜಯಿಸಿದವರು]

prabhakaran

ಕಳೆದ ವರ್ಷವೂ ಪ್ರಭಾಕರನ್ ಅವರು ಮೌಂಟ್ ಎವರೆಸ್ಟ್ ಏರಲು ಪ್ರಯತ್ನಿಸಿದ್ದರು. ಆದರೆ, ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. 2016ರ ಏಪ್ರಿಲ್ 8ರಂದು ಚೀನಾ ಭಾಗದ ಉತ್ತರ ದಿಕ್ಕಿನ ಎವರೆಸ್ಟ್ ಏರಲು ಆರಂಭಿಸಿದ ಅವರು, ಮೇ 19ರ ಮಧ್ಯರಾತ್ರಿ ತುತ್ತತುದಿ ತಲುಪಿದರು. ಮೇ 20 ರಂದು ಎವರೆಸ್ಟ್ ಏರಿದ ಸಾಹಸ ದಾಖಲೆ ಸೇರಿತು. [ಬೆಂಗಳೂರಿನಲ್ಲೇ ಮೌಂಟ್ ಎವರೆಸ್ಟ್ ಹತ್ತೋಣ ಬನ್ನಿ]

ಏವರೆಸ್ಟ್ ಏರಿದ ಅನುಭವ : ಎಸ್.ಪ್ರಭಾಕರನ್ ಅವರು ಮೌಂಟ್ ಎವರೆಸ್ಟ್ ಏರಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಇನ್ನೊಮ್ಮೆ ಮೌಂಟ್ ಎವರೆಸ್ಟ್ ಏರುವ ಅವಕಾಶ ಸಿಕ್ಕರೆ ದಕ್ಷಿಣ ಭಾಗದಿಂದ ಏರುವ ಕನಸು ಹೊಂದಿದ್ದಾರೆ ಪ್ರಭಾಕರನ್. [ಹಿಮಾಲಯ ಹತ್ತಿಳಿದ ಹುಬ್ಬಳ್ಳಿ ಬೆಡಗಿ ನಂದಿತಾ]

'ಮೌಂಟ್ ಎವರೆಸ್ಟ್‌ ಉತ್ತರ ಭಾಗ ಬಹಳ ಆಳವಿತ್ತು. ಅತೀ ಎತ್ತರ ಪ್ರದೇಶವಾಗಿದ್ದರಿಂದ ಆಮ್ಲಜನಕದ ತೊಂದರೆಯೂ ಆಗುತ್ತಿತ್ತು. ಮೊದಲ ಬೇಸ್ ಕ್ಯಾಂಪ್ 5400 ಅಡಿ ಎತ್ತರದಲ್ಲಿದ್ದು, ಇಲ್ಲಿಗೆ ತಲುಪಲು ಆಮ್ಲ ಜನಕದ ಕೊರತೆ ಎದುರಾಗುವುದಿಲ್ಲ'

mount everest

6,400 ಮೀಟರ್ ಎತ್ತರದಲ್ಲಿರುವ ಅಡ್ವಾನ್ಸ್ ಕ್ಯಾಂಪ್, ಕೃತಕ ಆಮ್ಲ ಜನಕದ ಸಹಾಯದಿಂದ 7,100 ಮೀಟರ್ ಎತ್ತರದಲ್ಲಿರುವ ನಾರ್ಥ್ ಕೊಲ್ ಕ್ಯಾಂಪ್, ಮೂರನೇ ಹಂತವಾಗಿ 8,300 ಮೀಟರ್ ಎತ್ತರದಲ್ಲಿರುವ ಕ್ಯಾಂಪ್ ಏರಿದ ನಂತರ ಕಡಿದಾಗಿರುವ ಶಿಖರದ ತುತ್ತ ತುದಿಯಾಗಿರುವ 8,850 ಮೀಟರ್ ಎತ್ತರದ ಶಿಖರವೇರಿ ದಾಖಲೆ ಮಾಡಲಾಯಿತು'.

'ಹೈದ್ರಾಬಾದ್ ಮೂಲದ ಟ್ರಾನ್ಸ್ ಅಡ್ವೆನ್ಚರ್ ಕಂಪನಿಯ ಪ್ರಾಯೋಜಕತ್ವ ನೀಡಿತ್ತು. ಕ್ಯಾಂಪ್‌ನಲ್ಲಿ ಊಟ ದೊರಕುತ್ತಿತ್ತು. ಗಾಳಿ ಹೆಚ್ಚಿನ ಪ್ರಮಾಣದಲ್ಲಿ ಬೀಸಿದಾಗ ಅಪಾಯವೂ ಇರುತ್ತಿತ್ತು, ಖಾಯಿಲೆ ಬೀಳುವ ಸಂಭಾವವೂ ಉಂಟಾಗುತ್ತಿತ್ತು. ಕಳೆದ 2 ವರ್ಷದಿಂದ ಶಿಖರವೇರಲು ಪ್ರಯತ್ನಿಸಲಾಗಿದ್ದು, ನಿರಂತರ ಅಭ್ಯಾಸದಿಂದ' ಇದು ಸಾಧ್ಯವಾಯಿತು ಎನ್ನುತ್ತಾರೆ ಪ್ರಭಾಕರನ್.

ಪ್ರಭಾಕರನ್ ಜೊತೆ ಇಬ್ಬರು ಐಎಎಸ್ ಅಧಿಕಾರಿಗಳು ಹಾಗು ಇಬ್ಬರು ಐಪಿಎಸ್ ಅಧಿಕಾರಿಗಳು ಶಿಖರವೇರಿದ್ದಾರೆ. ಮತ್ತೊಮ್ಮೆ ಅವಕಾಶ ಸಿಕ್ಕರೆ ದಕ್ಷಿಣ ಭಾಗದಿಂದ ಎವರೆಸ್ಟ್ ಏರುವ ಕನಸು ಹೊಂದಿದ್ದಾರೆ. [ಮಾಹಿತಿ : ಕೊಪ್ಪಳ ವಾರ್ತೆ]

English summary
S.Prabhakaran became the first Indian Forest Service (IFS) officer to have completed the journey to the top of the world Mount Everest. A 2011-batch officer from Karnataka cadre Prabhakaran is a native of Tiruvannamalai, Tamil Nadu Now working in Koppal district Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X